ನಟಿ ಪೂಜಾ ಹೆಗಡೆ ಇದೀಗ ಭಾರತದಲ್ಲೇ ಟಾಪ್ ನಟಿಯರ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ನಟಿ ಪೂಜಾ ಹೆಗಡೆ ಮೂಲತಃ ಕರ್ನಾಟಕದವರು ಈಕೆ ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ. ತುಳು ಪೂಜಾ ಹೆಗ್ಡೆ ಮಾತೃಭಾಷೆ ಈಕೆ ವಿದ್ಯಾಭ್ಯಾಸ ಮತ್ತು ತನ್ನ ವೃತ್ತಿಜೀವನವನ್ನು ಆರಂಭಿಸಿದ್ದು ಮುಂಬೈನಲ್ಲಿ. ನಮ್ಮ ದಕ್ಷಿಣ ಕನ್ನಡದ ಹುಡುಗಿ ಇದೀಗ ದೇಶದೆಲ್ಲೆಡೆ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಇಡೀ ಏಕೆ ಉತ್ತರ ಭಾರತದ ಸಿನಿಮಾಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಅವರ ಚಿತ್ರದಿಂದ ಇದ್ದಕ್ಕಿದ್ದಂತೆ ಪೂಜಾ ಹೆಗ್ಡೆ ಹೊರನಡೆದು ಇದೀಗ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಅವರ ಮೇಲೆ ಬೇಸರ ಮಾಡಿಕೊಂಡು ನಟಿ ಪೂಜಾ ಹೆಗಡೆ ಸಿನಿಮಾದಿಂದ ಹೊರ ಹೋಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ ಹಾಗಾದರೆ ಪವನ್ ಕಲ್ಯಾಣ್ ಅವರಂತಹ ದೊಡ್ಡ ಸ್ಟಾರ್ ನಟ ಮಾಡಿದ್ದಾದರೂ ಏನು ನಟಿ ಪೂಜಾ ಹೆಗ್ಡೆ ಇದ್ದಕ್ಕಿದ್ದಂತೆ ಅಂತಹ ದೊಡ್ಡ ಹೀರೋನ ಸಿನಿಮಾದಿಂದ ಹೊರ ಹೋಗಲು ಕಾರಣವೇನು ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದು.
ಪೂಜಾ ಹೆಗ್ಡೆ ಅವರು ಭವದೀಯುಡು ಭಗತ್ ಸಿಂಗ್ ಎಂಬ ಸಿನಿಮಾದಲ್ಲಿ ಪವನ್ ಕಲ್ಯಾಣ್ ಅವರ ಜೊತೆ ನಟಿಸುವುದಾಗಿ ಒಪ್ಪಿಕೊಂಡಿದ್ದರು. ಈ ಸಿನಿಮಾ ಇದೇ ವರ್ಷ ಶೂಟಿಂಗ್ ಪ್ರಾರಂಭವಾಗುತ್ತೆ ಅಂತ ನಿರ್ದೇಶಕರು ಮಾತು ಕೊಟ್ಟಿದ್ದರು. ಆದರೆ ಈ ಸಿನಿಮಾದ ಚಿತ್ರೀಕರಣವನ್ನು ದಿನೇದಿನೇ ಮುಂದೂಡಲು ಪ್ರಾರಂಭಿಸಿದರು. ಇದಕ್ಕೆ ಕಾರಣ ಪವನ್ ಕಲ್ಯಾಣ್ ಅವರು ಪವನ್ ಕಲ್ಯಾಣ್ ಅವರು ಚಿತ್ರದ ಚಿತ್ರೀಕರಣದ ದಿನ ಉಪವಾಸವನ್ನು ಪದೇಪದೆ ಮುಂದೆ ಹಾಕುತ್ತಲೇ ಇದ್ದಾರೆ.
ಯಾಕೆಂದರೆ ಪವನ್ ಕಲ್ಯಾಣ್ ಅವರು ಭವದೀಯುಡು ಭಗತ್ ಸಿಂಗ್ ಚಿತ್ರದ ಮೇಲೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ವಿನೋದಯಾ ಸೀತಂ ಎಂಬ ಚಿತ್ರದ ರೀಮೇಕ್ ಮಾಡುವುದರಲ್ಲಿ ಪವನ್ ಕಲ್ಯಾಣ್ ಆಸಕ್ತಿ ತೋರುತ್ತಿದ್ದಾರಂತೆ ಪವನ್ ಕಲ್ಯಾಣ್ ಅವರ ಈ ವರ್ತನೆ ಪೂಜಾ ಹೆಗಡೆ ಅವರಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಪೂಜಾ ಹೆಗ್ಡೆ ಅವರಿಗೆ ಕೂಡ ಒಂದರ ಮೇಲೊಂದು ಅವಕಾಶಗಳು ಬರುತ್ತಲೇ ಇದೆ ಪವನ್ ಕಲ್ಯಾಣ್ ಅವರ ಒಂದು ಚಿತ್ರಕ್ಕಾಗಿ ಹತ್ತು ಅವಕಾಶಗಳನ್ನು ತಪ್ಪಿಸಿಕೊಳ್ಳಲು ಪೂಜಾ ಹೆಗ್ಡೆ ಅವರಿಗೆ ಇಷ್ಟವಿಲ್ಲ. ಸದ್ಯಕ್ಕಂತೂ ಪೂಜಾ ಹೆಗಡೆ ಸಿಕ್ಕಾಪಟ್ಟೆ ಬ್ಯುಸಿ. ಪೂಜಾ ಹೆಗ್ಡೆ ಸದ್ಯಕ್ಕೆ ಮಹೇಶ್ ಬಾಬು ಮತ್ತು ಸಲ್ಮಾನ್ ಖಾನ್ ಅವರ ಜೊತೆ ಏಕಕಾಲದಲ್ಲಿ ನಟನೆ ಮಾಡಲಿದ್ದಾರೆ.
ಪೂಜಾ ಹೆಗ್ಡೆ ಅವರು ಮಹೇಶ್ ಬಾಬು ಅವರ ಜತೆ ತ್ರಿವಿಕ್ರಂ ಎಂಬ ಸಿನಿಮಾದಲ್ಲಿ ನಟನೆ ಮಾಡಲು ಒಪ್ಪಿಕೊಂಡಿದ್ದಾರೆ ಹಾಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆ ‘ಕಭಿ ಈದ್ ಕಭಿ ದಿವಾಲಿ’ ನಿಮ್ಮ ಸಿನಿಮಾದಲ್ಲಿ ಈಗಾಗಲೇ ನಟಿ ಶುರುಮಾಡಿದ್ದಾರೆ. ಈ ಎರಡು ಚಿತ್ರಗಳ ಕೆಲಸಗಳಿಗೆ ಅವರು ಹೈದರಾಬಾದ್ ಹಾಗೂ ಮುಂಬೈ ನಡುವೆ ಪ್ರಯಾಣ ಬೆಳೆಸಬೇಕಾಗುತ್ತದೆ. ಅಷ್ಟೇ ಅಲ್ಲ ಇನ್ನೇನು ಕೆಲವೇ ದಿನಗಳಲ್ಲಿ ಎನ್ಟಿಆರ್ ಹಾಗೂ ಕೊರಟಾಲ ಶಿವ ಒಟ್ಟಾಗಿ ಕೆಲಸ ಮಾಡುತ್ತಿರುವ ಸಿನಿಮಾಗೆ ಕೂಡ ಪೂಜಾ ಹೆಗ್ಡೆ ಅವರೇ ನಾಯಕ ನಟಿಯಾಗಲಿದ್ದಾರೆ. ಪವನ್ ಕಲ್ಯಾಣ್ ಅವರ ಮುಂದೆ ಸಿನಿಮಾವನ್ನು ನಂಬಿಕೊಂಡರೆ ಪೂಜಾ ಹೆಗ್ಡೆ ಅವರಿಗೆ ಇಂತಹ ದೊಡ್ಡ ದೊಡ್ಡ ಸಿನಿಮಾಗಳು ಕೈತಪ್ಪಿ ಹೋಗುತ್ತೆ ರಾಜಕಾರಣ ಪೂಜಾ ಹೆಗ್ಡೆ ಪವನ್ ಕಲ್ಯಾಣ್ ಅವರ ಸಿನಿಮಾದಿಂದ ಹೊರ ನಡೆದಿದ್ದಾರೆ.