ಮಗಳ ನಾಮಕರಣವನ್ನು ಬಹಳ ಅದ್ದೂರಿಯಾಗಿ ಮಾಡಿದ ಪವನ್ ಒಡೆಯರ್ ಮತ್ತು ಅಪೇಕ್ಷ ದಂಪತಿಗಳು! ವೈರಲ್ ಫೋಟೋ ಇಲ್ಲಿವೆ

Pawan Wadeyar: ಪುನೀತ್ ರಾಜಕುಮಾರ್(Puneeth Rajkumar) ಅವರ ರಣವಿಕ್ರಮ, ನಟಸಾರ್ವಭೌಮ ಹಾಗೂ ಇತರೆ ಸ್ಟಾರ್ ನಟರ ಗೂಗ್ಲಿ, ರೆಮೋ, ಗೋವಿಂದಾಯ ನಮಃ, ನಟರಾಜ ಸರ್ವಿಸ್ ನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ ಗೆ ಕೊಡುಗೆಯನ್ನಾಗಿ ನೀಡಿ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕನೆಂಬ ಪಟ್ಟವನ್ನು ಗೆಟ್ಟಿಸಿಕೊಂಡಿರುವಂತಹ ಪವನ್ ಒಡೆಯರ್ ತಮ್ಮ ವೃತ್ತಿ ಹಾಗೂ ವೈಯಕ್ತಿಕ ವಿಚಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡುತ್ತಲೇ ಇರುತ್ತಾರೆ.

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಪವನ್ ಒಡೆಯರ್ ಮತ್ತು ಅಪೇಕ್ಷ ದಂಪತಿಗಳು ಆಗಾಗ ತಮ್ಮ ಮನೆಯಲ್ಲಿ ನಡೆಯುವಂತಹ ಶುಭ ಕಾರ್ಯಕ್ರಮಗಳ ಕ್ಯೂಟೆಸ್ಟ್ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಅದರಂತೆ 2018ರಲ್ಲಿ ಅಪೇಕ್ಷ ಪುರೋಹಿತ್(Apeksha Purohit) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಂತಹ ಪವನ್ ಒಡೆಯರ್ ದಂಪತಿಗಳಿಗೆ ಶೌರ್ಯ ಎಂಬ ಮುದ್ದಾದ ಗಂಡು ಮಗನಿದ್ದು,

ಇನ್ನು ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮನೆಗೆ ಮುದ್ದಾದ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಿದ್ದ ಪವನ್ ಒಡೆಯರ್(Pawan Wadeyar) ಕುಟುಂಬ ಇಂದು ತಮ್ಮ ಪುಟ್ಟ ರಾಜಕುಮಾರಿಗೆ ನಾಮಕರಣದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕೆಲ ಫೋಟೋಗಳು ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅಪೇಕ್ಷ ಪವನ್ ಒಡಿಯರ್ ಇವಳೇ ನಮ್ಮ ಜೀವನದ ಹೊಸ ಪ್ರೀತಿ,

ರಾಜಕುಮಾರಿ ಹಾಗೂ ಶೌರ್ಯನ ತಂಗಿ ನಾವು ಇವಳನ್ನು ಯಾದ್ವಿ ಒಡೆಯರ್(Yadvi Wadeyar) ಅಂತ ಕರೆಯುತ್ತೇವೆ. ತಮ್ಮ ಮುದ್ದಿನ ಮಗಳ ನಾಮಕರಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಪವನ್ ವಡೆಯರ್ ಅವರ ಸುಂದರ ಕುಟುಂಬ ಕಂಡು ನೆಟ್ಟಿಗರು ಮನಸೋತು ಹೋಗಿದ್ದಾರೆ.

Leave a Comment