ಪವಿತ್ರ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ದಾಂಪತ್ಯ ಜೀವನದಲ್ಲಿ ಬಿರುಕು! 43 ವರ್ಷ ವಯಸ್ಸಿನ ಪವಿತ್ರ ಲೋಕೇಶ್ 64 ವರ್ಷ ವಯಸ್ಸಿನ ತೆಲುಗು ನಟನ ಜೊತೆ ಮದುವೆ

ಕನ್ನಡದ ಹಿರಿತೆರೆ ಹಾಗೂ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರನ್ನು ಗಳಿಸಿದ ಸುಚೇಂದ್ರ ಪ್ರಸಾದ ಹಾಗೂ ಪವಿತ್ರ ಲೋಕೇಶ್ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಸುಚೇಂದ್ರ ಪ್ರಸಾದ್ ಅಪ್ಪಟ ಕನ್ನಡದಲ್ಲಿ ಮಾತನಾಡುವುದರ ಮೂಲಕ ಹೆಚ್ಚು ಫೇಮಸ್ ಆದವರು. ಪವಿತ್ರ ಲೋಕೇಶ್ ಅವರ ಬಗ್ಗೆ ಅಂತೂ ಹೇಳುವುದೇ ಬೇಡ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪವಿತ್ರ ಲೋಕೇಶ್ ಸಾಕಷ್ಟು ಜನರ ಅಚ್ಚುಮೆಚ್ಚಿನ ನಟಿ. ಇದೀಗ ಇವರಿಬ್ಬರ ವಿವಾಹದಲ್ಲಿ ಬಿರುಕು ಮೂಡಿದ್ದು, ಇದು ಗಾಂಧಿನಗರದ ತುಂಬಾ ಸುದ್ದಿ ಆಗುತ್ತಿದೆ.

ಪವಿತ್ರ ಲೋಕೇಶ್ ಇತ್ತೀಚಿಗೆ, ತೆಲುಗು ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರ ಅಣ್ಣನ ಜೊತೆ ಪವಿತ್ರ ಲೋಕೇಶ್ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ನರೇಶ್ ಹಾಗೂ ಪವಿತ್ರ ಲೋಕೇಶ್ ಮಹಾಬಲೇಶ್ವರಕ್ಕೆ ತೆರಳಿ ಸ್ವಾಮಿಜಿಯವರ ಆಶೀರ್ವಾದ ಪಡೆದಿದ್ದಾರೆ ಎನ್ನುವ ವಿಷಯವೂ ವೈರಲ್ ಆಗಿದೆ. ಪವಿತ್ರಾ ಲೋಕೇಶ್ ಅವರಿಗೆ ಈಗ 43 ವರ್ಷ. ಇವರು ಈಗ 64 ವರ್ಷದ ನರೇಶ್ ಅವರೊಂದಿಗೆ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಸುಚೇಂದ್ರ ಪ್ರಸಾದ ಹಾಗೂ ಪವಿತ್ರ ಲೋಕೇಶ್ ಅವರ ನಡುವೆ ಬಿರುಕು ಮೂಡಲು ಕಾರಣವೇನು ಎನ್ನುವುದು ಎಲ್ಲರ ಪ್ರಶ್ನೆ.

ಪವಿತ್ರ ಲೋಕೇಶ್ ಅವರು ತಮ್ಮ ಸಹ ನಾಟಕದ ಸುಚೇಂದ್ರಪ್ರಸಾದ್ ಅವರೊಂದಿಗೆ 2007 ರಲ್ಲಿ ಮದುವೆಯಾಗಿದ್ದರು. ನಟಿ ಪವಿತ್ರ ಲೋಕೇಶ್ ಇದುವರೆಗೆ ಸುಮಾರು 150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅಭಿನೇತ್ರಿ. ಇನ್ನು ಕನ್ನಡ ಚಿತ್ರಂಗದಲ್ಲಿ ಸ್ಪಷ್ಟವಾದ ಕನ್ನಡದಲ್ಲಿ ಮಾತನಾಡುವ ನಟ ಇದ್ದಾರೆ ಎಂದರೆ ಅದು ಕೇವಲ ಸುಚೇಂದ್ರಪ್ರಸಾದ್ ಮಾತ್ರ. ಕನ್ನಡದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿರುವ ಸುಚೇಂದ್ರಪ್ರಸಾದ್ ಕೇವಲ ಡೈಲಾಗ್ ಡೆಲಿವರಿ ಮಾಡಲ್ಲ. ತಾವೇ ಸ್ವತಹ ಕನ್ನಡದ ಬೆಲೆಯನ್ನು ಅರಿತು ಆ ಮೂಲಕ ನಟನೆಯಲ್ಲಿ ಅದನ್ನ ಅಳವಡಿಸಿಕೊಂಡಿದ್ದಾರೆ. ಸುಚೇಂದ್ರಪ್ರಸಾದ್ ಹಾಗೂ ಪವಿತ್ರ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಇವರಿಗೆ ಇವರ ಜೀವನ ಉತ್ತಮವಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಪವಿತ್ರ ಲೋಕೇಶ್ ಅವರ ಜೀವನದ ಏಕಾಏಕಿ ಬದಲಾವಣೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

ಇವರಿಬ್ಬರು ದೂರಾಗಿ ಸಂಸಾರ ನಡೆಸುತ್ತಿರುವುದಕ್ಕೆ ಸುಚೇಂದ್ರ ಪ್ರಸಾದ್ ಅವರ ಕೋಪವೇ ಕಾರಣವಿರಬಹುದು ಅನ್ನೋದು ಹಲವರ ಊಹೆ. ಹಾಗಾಗಿ ಊಹಾಪೋಹಗಳಿಗೆ ತೆರೆ ಬೀಳಬೇಕು ಅಂದರೆ ಅವರೇ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು. ಇನ್ನು ಪವಿತ್ರ ಲೋಕೇಶ್ ಮದುವೆ ಆಗಲು ಹೊರಟಿರುವ ನರೇಶ್ ಬಗ್ಗೆಯೂ ಹಲವರಿಗೆ ಗೊತ್ತು. 43 ವರ್ಷ ವಯಸ್ಸಿನ ಪವಿತ್ರ ಲೋಕೇಶ್ ಅವರನ್ನು ನರೇಶ್ ಮದುವೆ ಆದರೆ ಇದು ಅವರ ನಾಲ್ಕನೆಯ ವಿವಾಹ ಎಂದು ಹೇಳಲಾಗುತ್ತಿದೆ. ತಮ್ಮ 64ರ ಪ್ರಾಯದಲ್ಲಿ ನರೇಶ್ ಮತ್ತೊಂದು ಮದುವೆ ಆಗಲು ಹೊರಟಿದ್ದಾರೆ. ಇನ್ನು ನರೇಶ್ ಎಷ್ಟು ದೊಡ್ಡ ಶ್ರೀಮಂತರು ಎಂಬುದು ಎಲ್ಲರಿಗೂ ಗೊತ್ತು.

ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ನರೇಶ್ ಅವರ ಆಸ್ತಿ ಸುಮಾರು ಆರು ಸಾವಿರ ಕೋಟಿ ಇರಬಹುದು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಪವಿತ್ರ ಲೋಕೇಶ್ ಹಾಗೂ ಸುಚೇಂದ್ರಪ್ರಸಾದ್ ದೂರಾಗಿ ಪವಿತ್ರ ಲೋಕೇಶ್ ಹಾಗೂ ನರೇಶ್ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಆದರೆ ಅವರಿಂದ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಾಗಿದೆ ಇರುವ ಕಾರಣ ಇದು ಕೇವಲ ಗಾಸಿಪ್ಪೋ ಅಥವಾ ನಿಜವೋ ಎನ್ನುವುದು ಇನ್ನು ಗೊತ್ತಾಗಬೇಕಷ್ಟೆ.

Leave a Comment