Olle Hudga Pratham ಒಳ್ಳೆ ಹುಡುಗ ಪ್ರಥಮ್(Olle Hudga Pratham) ರವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸಿನಿಮಾ ರಂಗದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿರುವುದು ನಿಮಗೆಲ್ಲರಿಗೂ ತಿಳಿದಿದೆ. ಸದಾಕಾಲ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಲೇ ಇರುತ್ತಾರೆ ಒಳ್ಳೆ ಹುಡುಗ ಪ್ರಥಮ್.
ಕಳೆದ ಬಾರಿಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಅಭಿಮಾನಿಗಳು ಹಾಗೂ ದರ್ಶನ್(Darshan) ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಜಗಳಗಳು ನಡೆಯುತ್ತಿದ್ದಾಗಲೂ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಕೂಡ ಸುದ್ದಿ ಆಗಿದ್ದರು.
ಈಗ ಯಾರಿಗೂ ಗೊತ್ತಿಲ್ಲದೆ ಸೈಲೆಂಟ್ ಆಗಿ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕಾಗಿ ಸುದ್ದಿ ಆಗುತ್ತಿದ್ದಾರೆ ಒಳ್ಳೆ ಹುಡುಗ ಪ್ರಥಮ್. ಬಿಗ್ ಬಾಸ್ ಅನ್ನು ಗೆದ್ದಿರುವಂತಹ ಈ ಒಳ್ಳೆ ಹುಡುಗ ಈಗ ಒಳ್ಳೆ ಹುಡುಗಿಯ ಮನಸ್ಸನ್ನು ಗೆದ್ದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅವರೇ ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಎಲ್ಲಕ್ಕಿಂತ ಪ್ರಮುಖವಾಗಿ ಇದುವರೆಗೂ ಅವರ ಕೈಗೆ ಹಾಕಿರುವ ಉಂಗುರವನ್ನು ಮಾತ್ರ ಫೋಟೋ ರೂಪದಲ್ಲಿ ಪೋಸ್ಟ್ ಮಾಡಿದ್ದರು ಆದರೆ ಮೊದಲ ಬಾರಿಗೆ ಒಳ್ಳೆ ಹುಡುಗ ಪ್ರಥಮ್(Olle Hudga Pratham) ಅವರು ಯಾರನ್ನು ಮದುವೆಯಾಗಲು ಹೊರಟಿದ್ದಾರೆ ಎನ್ನುವಂತಹ ಹುಡುಗಿಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ನೀವು ಮೊದಲ ಬಾರಿಗೆ ಈ ಮೂಲಕ ನೋಡಬಹುದಾಗಿದೆ