Niveditha Gowda Mother Hema Ramesh : ನನ್ನ ಅಮ್ಮನಿಗೆ ಕಳ್ಳರ ಭಯ ಇತ್ತು ಅದಕ್ಕೆ ಬೇಗ ಮದುವೆ ಆದೆ ಎಂದ ನಟಿ ನಿವೇದಿತಾ ಗೌಡ! ಯಾಕೆ ಭಯ ಗೊತ್ತಾ ಶಾಕ್ ಆಗ್ತೀರಾ ನೋಡಿ!!

Niveditha Gowda Mother Hema Ramesh : ನಿವೇದಿತಾ ಗೌಡರವರ ತಾಯಿ ಮಗಳನ್ನು ಹೊರಗಡೆ ಹೋಗಲು ಬಿಡುತ್ತಿರಲಿಲ್ಲವಂತೆ, ಅಚ್ಚರಿಯ ಹೇಳಿಕೆ ಕೊಟ್ಟ ನಿವೇದಿತಾ ಗೌಡ, ಇಲ್ಲಿದೆ ನೋಡಿ ಅಸಲಿ ವಿಚಾರ ಗೊಂಬೆ ಎಂದೇ ಖ್ಯಾತಿ ಗಳಿಸಿರುವ ನಿವೇದಿತಾ ಗೌಡ (Nivedita Gowda) ರವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಬಿಗ್ ಬಾಸ್ (Big Boss) ಮನೆಗೆ ಎಂಟ್ರಿ ಕೊಟ್ಟ ಬಳಿಕ ಸಿಕ್ಕಾಪಟ್ಟೆ ಫೇಮಸ್ ಆದ ಈ ಬೆಡಗಿ ಸದ್ಯಕ್ಕೆ ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಟ್ರೋಲ್ ಆಗುತ್ತಲೇ ಇರುತ್ತಾರೆ.

ಬಿಗ್ ಬಾಸ್ ಸೀಸನ್ ವಿಜೇತ ಚಂದನ್ ಶೆಟ್ಟಿ (Big Boss Winner Chandan Shetty) ಯವರನ್ನು ಮದುವೆಯಾದ ನಿವೇದಿತಾ ಗೌಡ ರಾಜರಾಣಿ ಶೋ ನಲ್ಲಿಯೂ ಭಾಗವಹಿಸಿದ್ದರು. ತದನಂತರದಲ್ಲಿ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ವು ಇವರಿಗೆ ಲಭಿಸಿತ್ತು. ಅದೃಷ್ಟ ಎನ್ನುವಂತೆ ಗಿಚ್ಚಿ ಗಿಲಿ ಗಿಲಿ ಶೋ (Gicchi Gili Gili Show) ನಲ್ಲಿ ರನ್ನರ್ ಆಪ್ ಆಗಿ ಹೊರ ಹೊಮ್ಮಿದ್ದರು.

Niveditha Gowda Mother Hema Ramesh Age Revealed

ಇತ್ತೀಚೆಗಷ್ಟೇ ನಟಿ ನಿವೇದಿತಾ ಗೌಡರವರು ತಾಯಿಯ ಬಗ್ಗೆ ಕೆಲವು ಅಚ್ಚರಿಯ ಹೇಳಿಕೆಯನ್ನು ನೀಡಿದ್ದರು.ಕಳೆದ ಮಾರ್ಚ್ (March) ತಿಂಗಳಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲೂ ನಿವೇದಿತಾ ಗೌಡ ತನ್ನ ತಾಯಿಯ ಜೊತೆ ಸೇರಿ ವೇದಿಕೆಯ ಮೇಲೆ ಡಾನ್ಸ್ ಮಾಡಿದ್ದು ಹೈ ಲೈಟ್ ಆಗಿತ್ತು.

ಆ ಬಳಿಕ ಮಾತನಾಡಿದ್ದ ನಿವೇದಿತಾ ಗೌಡ, ಯಾವಾಗಲೂ ನನ್ನ ಪರ್ಫಾರ್ಮೆನ್ಸ್ ಅನ್ನು ಪ್ರೇಕ್ಷಕರಾಗಿ ನೋಡುತ್ತಿದ್ದ ನನ್ನ ಅಮ್ಮ ಇಂದು ವೇದಿಕೆಯ ಮೇಲೆ ನನ್ನ ಜೊತೆಗೆ ಇರುವುದು ಸಂತಸ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದ್ದರು. ತಾಯಿಯ ಬಗ್ಗೆ ತನ್ನ ಮನಸ್ಸಿನ ಮಾತನ್ನು ಬಿಚ್ಚಿಟ್ಟ ನಿವೇದಿತಾ ಗೌಡ, ‘ನನಗೆ ತಾಯಿ ಅಂದ್ರೆ ತುಂಬಾನೇ ಇಷ್ಟ. ಅವರು ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ.

ಯಾರಾದರೂ ಕಳ್ಳತನ ಮಾಡಬಹುದು ಎನ್ನುವ ಕಾರಣಕ್ಕೆ ನನ್ನನ್ನ ಮನೆಯಿಂದ ಆಚೆ ಕಳುಹಿಸುತ್ತಿರಲಿಲ್ಲ” ಎಂದಿದ್ದರು.’ಎಲ್ಲಿಗಾದರೂ ಟ್ರಿಪ್ ಹೋಗಬೇಕು ಅಂದ್ರು ಅಮ್ಮ ನೀನು ಮದುವೆ ಆದ ಮೇಲೆ ಗಂಡನ ಜೊತೆಗೆ ಹೋಗು ಎಂದು ಹೇಳುತ್ತಿದ್ದರು. ಹಾಗಾಗಿ ಫ್ರೀಡಂ ಬೇಕು ಅಂತ ಮದುವೆಯಾದೆ. ಆದರೆ ತಂದೆ ತಾಯಿಯ ಮೌಲ್ಯ ಈಗ ಅರಿವಾಗುತ್ತಿದೆ ಅವರನ್ನು ಬಿಟ್ಟು ಇರಲು ಕಷ್ಟವಾಗುತ್ತಿದೆ.

ಒಮ್ಮೆ ಅವರನ್ನು ನೋಡಿದರು ಸಾಕು ಫುಲ್ ಖುಷಿ ಆಗುತ್ತೆ’ ಎಂದು ಭಾವುಕ ಮಾತುಗಳನ್ನು ಆಡಿದ್ದರು.ಇದೇ ವೇಳೆಯಲ್ಲಿ ನಿವೇದಿತಾಗೌಡ ತಾಯಿ ಹೇಮಾ (Hema Ramesh) ಮಾತನಾಡಿದ್ದು, ‘ನಾನು ಮಗಳನ್ನು ಹೊರಗಡೆ ಕಳುಹಿಸಿದರೆ ಯಾರಾದರೂ ಎತ್ತುಕೊಂಡು ಹೋಗಬಹುದು ಎನ್ನುವ ಭ-ಯದಿಂದ ಆಚೆ ಕಳುಹಿಸುತ್ತಿರಲಿಲ್ಲ. (ಇದನ್ನು ಓದಿ)ಸಂಜು ಬಸಯ್ಯ ಮದುವೆ ಡೇಟ್ ಫಿಕ್ಸ್, ಇದೇ ತಿಂಗಳಲ್ಲಿ ಮದುವೆ! ಸಮಸ್ತ ಕನ್ನಡಿಗರಿಗೆ ಆಹ್ವಾನ ನೀಡಿದ ಸಂಜು ಬಸಯ್ಯ ಮದುವೆ ಕಾರ್ಡ್ ನೋಡಿ!!

ಚಂದನ್ ಶೆಟ್ಟಿ ಮನೆಗೆ ಬಂದು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದಾಗ ನನ್ನಂತೆ ನನ್ನ ಮಗಳನ್ನು ನೋಡಿಕೊಳ್ಳುವುದಾದರೆ ನನ್ನ ಮಗಳನ್ನು ಕೊಡುತ್ತೇನೆ ಎಂದು ಹೇಳಿದ್ದೆ. ಅವರ ಬಗ್ಗೆ ಹೇಳಬೇಕಾಗಿಲ್ಲ ಮಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ’ ತನ್ನ ಅಳಿಯನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು.

Leave a Comment