Niveditha Gowda: ಗೋವಾದಲ್ಲಿ ಮಾನ್ಸೂನ್ ರಜೆಯನ್ನು ಆನಂದಿಸುತ್ತಿರುವ ನಿವೇದಿತಾ ಗೌಡ!

Niveditha Gowda: ಸ್ನೇಹಿತರೆ, ಟಿಕ್ ಟಾಕ್ ಹಾಗೂ ಡಬ್ಸ್ಮ್ಯಾಶ್ಗಳ ಮೂಲಕ ಗುರುತಿಸಿಕೊಂಡು ಓರ್ವ ಕಾಮನ್ ಪೀಪಲ್ ಆಗಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡುವ ಮೂಲಕ ದೊಡ್ಮನೆಯ ಬಾರ್ಬಿ ಡಾಲ್ ಎಂದೆ ಪ್ರಖ್ಯಾತಿ ಪಡೆದಿದ್ದಂತಹ ನಿವೇದಿತಾ ಗೌಡ(Niveditha Gowda), ಕಿಚ್ಚ ಸುದೀಪ್(Kiccha Sudeep) ಅವರ ಸಾರಥ್ಯದಲ್ಲಿ ಮೂಡಿ

ಬಂದ ಈ ಒಂದು ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದು ಸಾಕಷ್ಟು ಸೀರಿಯಲ್ ಹಾಗೂ ರಿಯಾಲಿಟಿ ಶೋಗಳ(Reality Show) ಅವಕಾಶ ಗಿಟ್ಟಿಸಿಕೊಳ್ಳುತ್ತಾ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ನಟಿ. ಗಿಚ್ಚಿ ಗಿಲಿ ಗಿಲಿ, ರಾಜ ರಾಣಿ ಅಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ ನಿವೇದಿತ ಗೌಡ ಬಿಗ್ ಬಾಸ್ ಮನೆಯಲ್ಲಿ ಅಣ್ಣನೆಂದು ಪರಿಚಯಗೊಂಡ ಚಂದನ್ ಶೆಟ್ಟಿ

ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು ದಸರಾ ವೇದಿಕೆಯ ಮೇಲೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಸದ್ದು ಮಾಡಿದ್ದರು. ಹೀಗೆ ಮನೆಯವರೆಲ್ಲರ ಒಪ್ಪಿಗೆ ಪಡೆದು 26, ಫೆಬ್ರವರಿ 2020 ರಂದು ಅದ್ದೂರಿಯಾಗಿ ಮೈಸೂರಿನಲ್ಲಿ ತಮ್ಮ ಆತ್ಮೀಯರ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂದಿನಿಂದ ಇಂದಿನವರೆಗೂ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಸಪೋಟ್ ಮಾಡಿಕೊಂಡು ಬಹಳನೇ ಅನ್ಯೂನ್ಯವಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಚಂದನ್ ಶೆಟ್ಟಿ ಅವರೊಡನೆ ವೆಕೇಷನ್ (Vacation) ಅನುಭವಿಸಲು ಟ್ರಿಪ್ಗೆ ತೆರಳಿದ್ದಂತಹ ನಿವೇದಿತ ಗೌಡ ಸದ್ಯ ಗೋವಾದ ಸುಂದರ ತಾಣಗಳಿಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ಹೌದು ಸ್ನೇಹಿತರೆ ಶಿಪ್ನಲ್ಲಿ ಗುಲಾಬಿ ಬಣ್ಣದ (Pink colour) ಬಟ್ಟೆಯನ್ನು ಧರಿಸಿ ಫೋಟೋಗೆ ಬಹಳ ಮಾದಕವಾಗಿ ಪೋಸ್ ನೀಡಿದ್ದು, ಆ ಫೋಟೋಗಳನ್ನೆಲ್ಲ ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹೀಗೆ ಫೋಟೋ ವೈರಲ್ ಆಗುತ್ತಾ ಇದ್ದ ಹಾಗೆ ನೆಟ್ಟಿಗರು, ಎಷ್ಟು ಟ್ರಾವೆಲ್ ಮಾಡ್ತೀರಾ?, ದುಡ್ಡು ಎಲ್ಲಿಂದ ಬರುತ್ತೆ ? ಎಂದೆಲ್ಲ ಕಮೆಂಟ್ ಮಾಡುವ ಮೂಲಕ ನಟಿ ನಿವೇದಿತಾ ಗೌಡ(Niveditha Gowda) ಅವರ ಕಾಲು ಎಳೆದಿದ್ದಾರೆ. ಆದರೆ ಇದ್ಯಾವುದಕ್ಕೂ ನಿವೇದಿತ ಗೌಡ ಅವರಿಂದ ಪ್ರತಿಕ್ರಿಯೆ ದೊರಕಿಲ್ಲ.

Leave a Comment