Niveditha Gowda: ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತು ರಾಪರ್ ಚಂದನ್ ಶೆಟ್ಟಿ ಅವರ ಮದುವೆಯ ಅಪರೂಪದ ಫೋಟೋಸ್! ಇಲ್ಲಿವೆ

Niveditha Gowda and Chandan marriage photos: ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಮೂಡಿಬರುವ ಬಿಗ್ ಬಾಸ್ ಸೀಸನ್ 5ಕ್ಕೆ ಸ್ಪರ್ದಿಯಾಗಿ ಭಾಗವಹಿಸುವ ಮೂಲಕ ಪರಸ್ಪರ ಪರಿಚಯಗೊಂಡಂತಹ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಾರ್ಯಕ್ರಮದ ತುಂಬಾ ನಾವಿಬ್ಬರು ಶಿವರಾಜ್ ಕುಮಾರ್ ಮತ್ತು ರಾಧಿಕಾ ನಮ್ಮಿಬ್ಬರ ನಡುವೆ ಇರುವುದು ಅಣ್ಣ- ತಂಗಿಯ ಸಂಬಂಧ ಎಂದು ಓಡಾಡಿಕೊಂಡಿದ್ದರು.

ಆದರೆ ಕಾರ್ಯಕ್ರಮ ಮುಗಿಸಿ ಹೊರಬಂದ ನಂತರ ಸಾಕಷ್ಟು ಶೋಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಂತಹ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದು ಮೈಸೂರಿನಲ್ಲಿ ನಡೆದ ಅದ್ದೂರಿ ದಸರಾ ವೇದಿಕೆಯ ಮೇಲೆ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡು ಟ್ರೋಲ್ಗೆ ಒಳಗಾಗಿದ್ದರು. ಹೀಗೆ ಹಲವು ತಿಂಗಳುಗಳ ಕಾಲ ಎಲ್ಲೆಡೆ ಕ್ಯೂಟ್ ಕಪಲ್ಸ್ಗಳಂತೆ ಓಡಾಡಿಕೊಂಡಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ, ಮನೆಯವರೆಲ್ಲರ ಒಪ್ಪಿಗೆ ದೊರೆತ ನಂತರ ವಿಭಿನ್ನ ಸ್ಥಳಗಳಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ಗಳನ್ನು ಮಾಡಿಸಿ

Niveditha Gowda and Chandan marriage photos

ಅದನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿಬಿಡುತ್ತ ಸದ್ದು ಮಾಡಿದ ಈ ಜೋಡಿಗಳು 26 ಫೆಬ್ರವರಿ 2020 ರಂದು ಬುದುವಾರ ಮೈಸೂರಿನಲ್ಲಿ ಅದ್ದೂರಿಯಾಗಿ ಕುಟುಂಬಸ್ಥರ, ಸ್ನೇಹಿತರ ಹಾಗೂ ಕೆಲ ಸಿನಿ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಮದುವೆಯಾಗಿ ಮೂರು ವರ್ಷಗಳಾದರು ಸಹ ಸಣ್ಣ ಮನಸ್ತಾಪ ಕಿರಿಕಿರಿಯನ್ನು ಮಾಡಿಕೊಳ್ಳದೆ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಇತರರಿಗೆ ಆದರ್ಶವಾಗುವಂತೆ ಬದುಕುತ್ತಿರುವ ಜೋಡಿಗಳು.

ಆಗಾಗ ಪ್ರವಾಸಿ ತಾಣಗಳಿಗೆ ಹೋಗುತ್ತಾ ಮುದ್ದಾಗಿ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನೆಲ್ಲ ತಮ್ಮ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿರುತ್ತಾರೆ. ಸದ್ಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ(Niveditha Gowda) ಅವರ ಫ್ಯಾನ್ ಪೇಜ್ (fan page) ನಲ್ಲಿ ಚಂದನ್ ನಿವೇದಿತಾ ಗೌಡ ಅವರಿಗೆ ತಾಳಿಕಟ್ಟೆ ಹಣೆಗೆ ಸಿಂಧೂರ ಇಡುತ್ತಿರುವಂತಹ ಫೋಟೋ ವೈರಲ್(viral) ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯ ಸುರಿಮಲೆಯನ್ನು ಹರಿಸುತ್ತಿದ್ದಾರೆ. ಇದನ್ನೂ ಓದಿ ಜೈಲರ್ ಚಿತ್ರದಲ್ಲಿ ರಜನಿಕಾಂತ್ ಪತ್ನಿಯಾಗಿ ಅಭಿನಯಿಸಲು ನಟಿ ರಮ್ಯಕೃಷ್ಣ ಪಡೆದಿರುವ ದುಬಾರಿ ಸಂಭಾವನೆ ಎಷ್ಟು ಕೋಟಿ ಗೊತ್ತೇ!

Leave a Comment