Nikhil Kumaraswamy ಇತ್ತೀಚಿಗಷ್ಟೇ ರಾಜ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸೋತಿರುವುದು ನಿಮಗೆಲ್ಲರಿಗೂ ತಿಳಿದಿದೆ. ರಾಜಕೀಯ ಹಾಗೂ ಚಿತ್ರರಂಗ ಎನ್ನುವಂತಹ ಎರಡು ದೋಣಿಗಳ ಮೇಲೆ ಕೂಡ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಕಾಲಿಡುತ್ತಿದ್ದಾರೆ.
ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರಗಳನ್ನು ಕೂಡ ಸಮಾನವಾಗಿ ಹಂಚಿಕೊಂಡು ಹೋಗುವುದನ್ನು ಮಾತ್ರವಲ್ಲದೆ ಸಂಸಾರವೆಂಬ ನೌಕೆಯಲ್ಲಿ ಹೆಂಡತಿಗೆ ಉತ್ತಮ ಗಂಡನಾಗಿ ಮಗುವಿಗೆ ಮಾದರಿಯಾಗುವ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಕ್ಕಿಂತ ಪ್ರಮುಖವಾಗಿ ನಾವು ಮಾತನಾಡಲು ಹೊರಟಿರುವುದು ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಇತ್ತೀಚಿಗಷ್ಟೇ ಬಿಡುವು ತೆಗೆದುಕೊಂಡು ಹಾಲಿಡೇಗೆ ಹೋಗಿರುವುದು ಕಂಡುಬಂದಿದೆ. ಅವರ ಧರ್ಮ ಪತ್ನಿ ಕೂಡ ಅವರ ಜೊತೆಗೆನೇ ಇದ್ದರು. ಇಬ್ಬರು ಕೂಡ ಫೋಟೋಗಳಲ್ಲಿ ತಿಳಿದುಬಂದಿರುವ ಪ್ರಕಾರ ಮಾಲ್ಡಿವ್ಸ್ ದ್ವೀಪಕ್ಕೆ ಹೋಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಲ್ಲಿ ಇವರ ಖರ್ಚಿಗೆ ಅಂದಾಜು ಒಟ್ಟಾರೆಯಾಗಿ 10 ರಿಂದ 15 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರಬಹುದು ಎಂಬುದಾಗಿ ತಿಳಿದು ಬಂದಿದೆ. ಕೇವಲ ಕೆಲವೇ ದಿನಗಳ ಪ್ರವಾಸಕ್ಕೆ ಹತ್ತರಿಂದ ಹದಿನೈದು ಲಕ್ಷ ರೂಪಾಯಿಯನ್ನು ಭರಿಸುತ್ತಿರುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರ ಬಳಿ ಏನೆಂದು ಹೇಳಲು ಇಚ್ಚಿಸುತ್ತೀರಾ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.
ಇದನ್ನೂ ಓದಿ Radhika Kumaraswamy: ವಿಶ್ವ ಯೋಗ ದಿನದಂದು ರಾಧಿಕಾ ಕುಮಾರಸ್ವಾಮಿ ಅವರು ಮಾಡಿದ್ದೇನು? ಫೋಟೋ ಕೂಡ ವೈರಲ್.