Nikhil Kumaraswamy: ಪತ್ನಿ ಹಾಗೂ ಮಗನ ಜೊತೆ ಫಾರಿನ್ ಪ್ರವಾಸದಲ್ಲಿರುವ ಕರ್ನಾಟದ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ

ಸ್ನೇಹಿತರೆ, ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ ಮಗನಾದರು ಸಹ ತಮ್ಮ ಸ್ವಂತ ಪ್ರತಿಭೆಯ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹೆಸರುವಾಸಿಯಾಗಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ರಾಜಕಾರಣದಲ್ಲಿಯೂ ಸಕ್ರಿಯರಾಗಿ ತಮ್ಮಿಂದ ನಾಲ್ಕು ಜನರಿಗೆ ಒಳ್ಳೆಯ ಕೆಲಸವಾಗಬೇಕೆಂಬ ನಿಟ್ಟಿನಿಂದ ವಿಧಾನಸಭಾ ಚುನಾವಣೆಯಲ್ಲಿ (Vidhanasabha election) ಭಾಗವಹಿಸಿ ಮೊದಲ ಬಾರಿಗೆ ಗೆದ್ದು ಜನಪ್ರಿಯ ನಾಯಕನಾಗಿಯೂ ಗುರುತಿಸಿಕೊಂಡರು.

ಆದರೆ ಇತ್ತೀಚಿಗಷ್ಟೇ ನಡೆದ ಎಲೆಕ್ಷನ್ನಲ್ಲಿ ಸೋಲನ್ನು ಕಂಡಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತ್ತೆ ಸಿನಿಮಾ ರಂಗದತ್ತ ಗಮನ ಹರಿಸಲು ಸಜ್ಜಾಗುತ್ತಿದ್ದು, ಇದೆಲ್ಲದರಿಂದ ಕೊಂಚ ಬ್ರೇಕ್ ಪಡೆಯುವ ಸಲುವಾಗಿ ನಿಖಿಲ್ ಕುಮಾರಸ್ವಾಮಿ ಅವರ ಸಂಪೂರ್ಣ ಕುಟುಂಬ ಫಾರಿನ್ ಪ್ರವಾಸಕ್ಕೆ ತೆರಳಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ತಮ್ಮ instagram ಹಾಗೂ facebook ಖಾತೆಯಲ್ಲಿ ವಿದೇಶದಲ್ಲಿನ ಸುಂದರ ತಾಣಗಳ ಫೋಟೋಗಳನ್ನು ಕ್ಯಾಪ್ಚರ್ ಮಾಡಿ ಹಂಚಿಕೊಳ್ಳುತ್ತಿರುವ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಯಾವ ದೇಶವನ್ನು ಸುತ್ತುತ್ತಿದ್ದಾರೆ ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

ನಿಖಿಲ್ ದಂಪತಿಗಳ ಜೊತೆಗೆ ಕುಮಾರಸ್ವಾಮಿ(Kumaraswamy) ದಂಪತಿಗಳು ಕೂಡ ಫ್ಲೈಟ್ನಲ್ಲಿ ವಿದೇಶ ಪ್ರವಾಸಕ್ಕೆ ಹಾರಿದ್ದು ತಮ್ಮ ಸುಂದರ ಕುಟುಂಬದ ಕ್ಯುಟೆಸ್ಟ್ ಫೋಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಿಖಿಲ್ ತಮ್ಮ ಧರ್ಮಪತ್ನಿ ರೇವತಿ(Revathi) ಅವರ ಹುಟ್ಟುಹಬ್ಬವನ್ನು ವಿದೇಶದಲ್ಲಿ ಆಚರಣೆ ಮಾಡುವ ಮೂಲಕ ಆ ಕೆಲ ಫೋಟೋಗಳನ್ನು ಅಭಿಮಾನಿಗಳೊಡನೆ ಹಂಚಿಕೊಂಡಿದ್ದರು.

ಇದೀಗ ಮತ್ತೊಮ್ಮೆ ತಮ್ಮ ಮಗನೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಸುಂದರ ಚಿತ್ರಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳೆಲ್ಲವೂ ಬಾರಿ ವೈರಲ್ ಆಗುತ್ತಿದ್ದು, ಅಪ್ಪ ಮಗನನ್ನು ಒಂದೇ ಫ್ರೇಮ್ನಲ್ಲಿ ಕಂಡಂತಹ ಅಭಿಮಾನಿಗಳು 250ಕ್ಕೂ ಹೆಚ್ಚಿನ ಕಾಮೆಂಟ್ ಹಾಗೂ ಲೈಕ್(likes)ಗಳ ಸುರಿಮಳೆಯ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಜಾಗ್ವಾರ್, ರೈಡರ್ ಹಾಗೂ ಸೀತಾರಾಮ ಕಲ್ಯಾಣದಂತಹ ಸಿನಿಮಾಗಳಲ್ಲಿ ಅಭಿನಯಿಸಿ ಸ್ಯಾಂಡಲ್ವುಡ್ನಲ್ಲಿ ಹೆಸರುವಾಸಿಯಾಗಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮುಂದೆ ಯಾವ ಪ್ರಾಜೆಕ್ಟ್ ಅನ್ನು ಹೊತ್ತು ಬರುವ ಮೂಲಕ ನಮ್ಮೆಲ್ಲರನ್ನು ರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ ನ್ಯಾಚುರಲ್ ಬಾಡಿ ಬಿಲ್ಡ್ ಮಾಡಿ, ಕನ್ನಡಿಗರ ಮನ ಗೆದ್ದಿರುವ ಜಿಮ್ ರವಿ ಅವರ ಸುಂದರ ಫ್ಯಾಮಿಲಿ ಫೋಟೋಸ್!

Leave a Comment