ಸ್ನೇಹಿತರೆ, 2020 ಏಪ್ರಿಲ್ 19 ನೇ ತಾರೀಕಿನಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ತಮ್ಮ ಬಹುಕಾಲದ ಗೆಳತಿ ರೇವತಿ (Revathi) ಅವರನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಅಗ್ನಿಸಾಕ್ಷಿಯಾಗಿ ತಮ್ಮ ಬಿಡದಿಯ ಫಾರ್ಮ್ ಹೌಸ್ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಈ ದಂಪತಿಗಳಿಗೆ ಅವ್ಯಾನ ದೇವ್ ಎಂಬ ಮುದ್ದಾದ ಮಗನಿದ್ದು ಇದೀಗ ನಿಖಿಲ್ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ ಕುರಿತಾದ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ.
ಹೌದು ಗೆಳೆಯರೇ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಸಮಾರಂಭ ಹೀಗೆ ಇನ್ನಿತರೆ ಎಲ್ಲಾ ಕಾರ್ಯಕ್ರಮಗಳು ನಡೆದ ಬೆನ್ನೆಲ್ಲೆ ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ ಎಷ್ಟು ಕೋಟಿ ಬೆಲೆ ಬಾಳಬಹುದೆಂಬುದರ ಲೆಕ್ಕಾಚಾರವನ್ನು ಜೋರಾಗಿ ಹಾಕ ತೊಡಗಿದ್ದಾರೆ. ಇದರ ಬೆನ್ನೆಲ್ಲೆ ನಿಖಿಲ್ ಕೂಡ ತಮ್ಮ ಫಾರ್ಮ್ ಹೌಸ್ ನ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ನಾವಿವತ್ತು ಅದರ ಸ್ವಾರಸ್ಯಕರ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಹೌದು ಗೆಳೆಯರೇ ನಟ ನಿಖಿಲ್ ಕುಮಾರಸ್ವಾಮಿ ಅವರು ಕರ್ನಾಟಕದ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗನಾಗಿದ್ದರೂ ಕೂಡ ತಮ್ಮ ಸ್ವಂತ ಪ್ರತಿಭೆಯಿಂದಾಗಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನ ಪಟ್ಟವನ್ನು ಗಿಟ್ಟಿಸಿ ಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯ ರಣರಂಗದಲ್ಲಿಯೂ ಯುವ ನಾಯಕನಾಗಿ ಹೆಸರುವಾಸಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಹೋರಾಡುತ್ತ ತಮ್ಮ ವರ್ಚಸ್ಸನ್ನು ಜನರ ಮುಂದೆ ತೋರಿಪಡಿಸಿಕೊಂಡಿದ್ದು, ನಿಖಿಲ್ ಅವರ ಸರಳ ವ್ಯಕ್ತಿತ್ವಕ್ಕೆ ಅಸಂಖ್ಯಾತ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.
ಸಿನಿಮಾ ಹಾಗೂ ರಾಜಕೀಯ ಕೆಲಸಗಳಲ್ಲಿ ಬಿಡುವು ಸಿಕ್ಕಾಗಲಿಲ್ಲ, ತಮ್ಮ ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುವುದರ ಜೊತೆಗೆ ಕೃಷಿಯತ್ತ ಮನಸ್ಸನ್ನು ತೋರುವ ನಿಖಿಲ್ ಕುಮಾರಸ್ವಾಮಿ ಅವರು ಕಳೆದ ಕೆಲ ದಿನಗಳ ಹಿಂದೆ ತಮ್ಮ ಫಾರ್ಮ್ ಹೌಸ್ ಗೆ ನಾಲ್ಕು ಹಸಗಳನ್ನು ತರುವ ಮೂಲಕ ವೈರಲ್ ಆಗಿದ್ದರು. ಇದೀಗ ಬಿಡದಿ ಬಳಿ ಇರುವ ಕೇತಗಾನಹಳ್ಳಿಯಲ್ಲಿ ಇರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿರುವ ಕೆಲವು ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
50 ಎಕರೆ ಜಮೀನಿನ ಮಧ್ಯೆ ಇರುವ ಈ ಫಾರ್ಮ್ ಹೌಸ್ (Farm house) 4.5 ಕೋಟಿ ಬೆಲೆ ಬಾಳುವುದಾಗಿಯೂ ತಿಳಿದುಬಂದಿದ್ದು, ಇದಲ್ಲದೆ 28 ಕೋಟಿ ಸ್ಥಿರಾಸ್ತಿ ಹಾಗೂ 46.31 ಕೋಟಿ ಚರಾಸ್ತಿಯನ್ನು ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಹೊಂದಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.