ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅತ್ಯುತ್ತಮ ನಟನೆಯ ಮೂಲಕ ಕಮಲ್ ಮಾಡುತ್ತಿರುವ ನಟಿ ನೇಹಾ ಗೌಡ (Neha Ramakshina) ಮತ್ತು ಚಂದನ್(Chandan) ಈಗಾಗಲೇ ಸಾಲು ಸಾಲು ಸೀರಿಯಲ್ಗಳಲ್ಲಿ ಅಭಿನಯಿಸುವ ಮೂಲಕ ಜನ ಮನ್ನಣೆ ಪಡೆದು ಸಾಲು ಸಾಲು ಅವಕಾಶವನ್ನು ಗಿಟ್ಟಿಸಿಕೊಳ್ಳಲೂ ವಿಶಿಷ್ಟ ಹೆಸರನ್ನು ಸಂಪಾದಿಸಿದ್ದಾರೆ.
ಹೀಗೆ ಕಳೆದ ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಸೀರಿಯಲ್ನಲ್ಲಿ ಗೊಂಬೆ(Gombe) ಪಾತ್ರದ ಮೂಲಕ ಪ್ರೇಕ್ಷಕ ಪ್ರಭುಗಳನ್ನು ರಂಜಿಸಿದ ನೇಹ ರಾಮಕೃಷ್ಣ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜ ರಾಣಿ ವೇದಿಕೆಗೆ ನವಜೋಡಿಗಳಾಗಿ ಎಂಟ್ರಿಕೊಟ್ಟು ತಮ್ಮ ಅನ್ಯೋನ್ಯತೆ, ಪ್ರೀತಿ ಒಲವು ಎಷ್ಟರ ಮಟ್ಟಿಗಿದೆ ಎಂಬುದನ್ನು ಜನರ ಮುಂದೆ ತೋರ್ಪಡಿಸುವ ಮೂಲಕ ಕಾರ್ಯಕ್ರಮದ ವಿಜೇತರಾಗಿ ಕಿರೀಟವನ್ನು ತಮ್ಮ ಮುಡುಗೇರಿಸಿಕೊಂಡರು.
ಸದ್ಯ ಚಂದನ್ ಅಂತರಪಟ ಸೀರಿಯಲ್ನ ನಾಯಕ ನಟನಾಗಿ ಬಣ್ಣದ ಬದುಕಿಗೆ ಪ್ರವೇಶ ಮಾಡಿದ್ದು ಮುಂದಿನ ದಿನಗಳಲ್ಲಿ ತಮ್ಮ ಪತ್ನಿಯೊಂದಿಗೆ ಬಹು ದೊಡ್ಡ ಮಟ್ಟದ ಜನ ಮನ್ನಣೆಯನ್ನು ಪಡೆದುಕೊಳ್ಳಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ. ಇನ್ನು ರಾಜ ರಾಣಿ (Rajarani) ವೇದಿಕೆ ಮೇಲೆ ಕ್ಯೂಟ್ ಕಪಲ್ಸ್ಗಳಂತೆ ಕಾಣಿಸಿಕೊಂಡಿದ್ದ ಚಂದನ್ ಹಾಗೂ ನೇಹಾ ತಮ್ಮ ಪ್ರೇಮಕಹನಿಯ ಕುರಿತು ಹಲವರು ವೇದಿಕೆಗಳ ಮೇಲೆ ಮಾಹಿತಿ ಹಂಚಿಕೊಂಡಿದ್ದರು.
ಆ ಸಂದರ್ಭದಲ್ಲಿ ನೇಹಾ “ಪ್ರೀ ಕೆ ಜಿಯಲ್ಲಿ ಚಂದನ್ ನನಗೆ ಶತ್ರು ಆಗಿದ್ದ, ಆದರೆ ಈಗ ಅವನೇ ನನಗೆ ಫ್ರೆಂಡ್, ಬಾಯ್ ಫ್ರೆಂಡ್, ಲವರ್, ಹಸ್ಬೆಂಡ್ ಎಲ್ಲವೂ ಆಗಿದ್ದಾನೆ” ಎನ್ನುವ ಮೂಲಕ ತಮ್ಮ ಪತಿಯನ್ನು ಹಾಡಿ ಹೋಗಲಿದರು. 2018 ಫೆಬ್ರವರಿ 18ನೇ ತಾರೀಕಿನಂದು ನೇಹ ಗೌಡ (Neha Ramakshina) ಮತ್ತು ಚಂದನ್ ತಮ್ಮ ಬಾಲ್ಯದ ಪ್ರೀತಿಯನ್ನು ಸಪ್ತಪದಿ ತುಳಿಯುವ ಮೂಲಕ ಗೆಲುವಾಗಿಸಿಕೊಂಡು ಲವ್ ಕಮ್ ಅರೆಂಜ್ ಮ್ಯಾರೇಜ್(Love com arrange marriage) ಆದರು.
ಇನ್ನು ಇವರ ಮದುವೆಗೆ ಸಿನಿಮಾದ ಸಾಕಷ್ಟು ಸೆಲೆಬ್ರಿಟಿಗಳ ಜೊತೆಗೆ ಕಿರುತೆರೆಯ ನಟ ನಟಿಯರು ಆಗಮಿಸಿ ನವ ವಧು ವರರನ್ನು ಆಶೀರ್ವದಿಸಿದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಸಿಂಪಲ್ಲಾಗಿ ನಡೆದ ಚಂದನ್ ಹಾಗೂ ನೇಹಾ ಅವರ ಎಂಗೇಜ್ಮೆಂಟ್(Engagement) ಫೋಟೋಗಳು ಹರಿದಾಡುತ್ತಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ನೇಹ ಗೌಡ (Neha Ramakshina) ಅವರನ್ನು ಕಂಡ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.