ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದ ನಯನತಾರಾ! ಶಾಕ್ ಅದ ಲೇಡಿ ಸೂಪರ್ ಸ್ಟಾರ್!

ತಮಿಳಿನಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟಿ ನಯನತಾರಾ. ನಯನತಾರಾ ಅಂದ್ರೆ ಅವರ ಅಭಿಮಾನಿಗಳು ಹೆಚ್ಚೆದ್ದು ಕುಣಿತಾರೆ. ಎರಡು ದಶಕಗಳಿಂದಲೂ ತಮಿಳು ಚಿತ್ರರಂಗವನ್ನು ಆಳುತ್ತಾ ಬಂದಿರುವ ನಟಿ ನಯನತಾರಾ. ಇವರು ಎಲ್ಲಾ ಸ್ಟಾರ್ ನಟರ ಜೊತೆಗೂ ಅಭಿನಯಿಸಿದ್ದಾರೆ. ಇಷ್ಟು ವರ್ಷ ವೃತ್ತಿ ಜೀವನಕ್ಕೇ ಹೆಚ್ಚಿನ ಮಹತ್ವ ಕೊಟ್ಟಿದ್ದ ನಟಿ ಇದೀಗ ವಯಕ್ತಿಕ ಜೀವನದಲ್ಲಿ ವಿಶೇಷ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ.

ಹೌದು, ನಿಮಗೆಲ್ಲಾ ಗೊತ್ತಿರುವ ಹಾಗೆ ನಯನತಾರಾ ಕಳೆದ ಎರಡು ದಿನಗಳ ಹೊಂದೆಯಷ್ಟೇ, ತಾನು ಪ್ರೀತಿಸಿದ ಹುಡುಗನ ಕೈ ಹಿಡಿದಿದ್ದಾರೆ. ಹೌದು, ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ, ನಟಿ ನಯನತಾರಾ ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೌತ್ ಸಿನಿಮಾ ರಂಗ ಮಾತ್ರವಲ್ಲದೇ ಬಾಲಿವುಡ್ ನಿಂದಲೂ ಸ್ಟಾರ್ ನಟರು ಬಂದು ನಯನತಾರಾ ವಿಘ್ನೇಶ್ ಜೋಡಿಗೆ ವಿಶ್ ಮಾಡಿದ್ದಾರೆ. ಈ ನಡುವೆ ಅಚಾತುರ್ಯವೊಂದು ನಡೆದುಹೋಗಿದೆ. ಮದುವೆ ಸಂಭ್ರಮದಲ್ಲಿರುವ ನವ ಜೋಡಿ ತಲೆಕೆಡಿಸಿಕೊಳ್ಳುವಂತಾಗಿದೆ.

ನಟಿ ನಯನತಾರಾ ಹಾಗೂ ಅವರ ಪತಿ ವಿಘ್ನೇಶ್ ಶಿವನ್ ಇಬ್ಬರೂ ಮದುವೆಯನ್ನ ಮುಗಿಸಿ ತಿರುಪತಿ ತಿರುಮಲನ ದರ್ಶಶನಕ್ಕೆ ಹೋಗಿದ್ದರು. ಆಗಲೇ ಒಂದು ಸಮಸ್ಯೆ ಉದ್ಭವಿಸಿದ್ದು, ಯಾಕೆ ಅಂತಿರಾ! ನಯನಾತಾರಾ, ತಿರುಪತಿಯ ಪೂಜೆ ಮುಗಿಸಿ, ಹೊರಂಗಣದಲ್ಲಿ ನಡೆದಿದ್ದಾರೆ. ಇಲ್ಲಿಅಭಿಮಾನಿಗಳ ಮಹಾಪೂರವೇ ಇತ್ತು. ಈ ಸಂದರ್ಭದಲ್ಲಿ ನಟಿ ನಯನಾತರಾ ಚಪ್ಪಲಿ ಹಾಕಿ ನಡೆದಾಡಿದ್ದು ತುಂಬಾನೇ ವೈರಲ್ ಆಗಿದೆ. ಟಿಟಿಡಿ ನಿಯಮದ ಪ್ರಕಾರ ದೇವಾಲಯದ ಹೊರಾಂಗಣದಲ್ಲಿಯೂ ಭಕ್ತರು ಚಪ್ಪಲಿ ಬಳಸುವಂತಿಲ್ಲ. ಆದರೆ ನಯನಾತಾರಾ ಹೀಗೆ ಮಾಡಿದ್ದಕ್ಕೆ , ನಯನಾತಾರಾ ಅವರಿಗೆ ನೋಟೀಸ್ ಜಾರಿಗೊಳಿಸಿದೆ. ಅವರು ಚಪ್ಪಲಿ ಹಾಕಿ ನಡೆದಿರುವ ಫೊಟೋ ವಿಡಿಯೋಗಳನ್ನು ಸಾಕ್ಷಿಯಾಗಿ ನೀಡಲಾಗಿದೆ.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ನಯನಾತಾರಾ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ಪೂಜೆ ಮುಗಿಸಿ ಹೊರಡುವಾಗ ಅಭಿಮಾನಿಗಳು ಹೆಚ್ಚಾಗಿ ಇದ್ದುದರಿಂದ ಮತ್ತೆ ಹೊರಾಂಗಣದವರೆಗೂ ಬರಬೇಕಾಯಿತು. ಈ ಸಂದರ್ಭದಲ್ಲಿ ಅಚಾತುರ್ಯ ನಡೆದುಹೋಗಿದೆ ಎಂದು ನಟಿ ನಯನತಾರಾ ಕ್ಷಮಾಪಣೆ ಕೇಳಿದ್ದಾರೆ. ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಮುಗಿಸಿ ಮಂಟಪದಿಂದಲೇ ತಿರುಪತಿಯ ದರ್ಶನ,

ಆಶೀರ್ವಾದ ಪಡೆಯಲು ಹೋಗಿದ್ದರು. ಈ ಸಮಯದಲ್ಲಿ ವಿಶೇಷ ಪೂಜೆಗಳನ್ನೂ ಮಾಡಿಸಲಾಗಿದೆ. ನವ ದಂಪತಿಗಳನ್ನು ನೋಡಿ ಅಭಿಮಾನಿಗಳ ದಂಡೇ ಅಲ್ಲಿಗೆ ಬಂದಿತ್ತು. ಅಭಿಮಾನಿಗಳ ಮುಂದೆ ಫೋಟೋ ತೆಗೆಸಿಕೊಳ್ಳುವಾಗ ದೇವಸ್ಥಾನದ ಬೀದಿಗೆ ಬಂದಿದ್ದರು ನಯನತಾರಾ ಹಾಗೂ ವಿಘ್ನೇಶ್. ಈ ಸಮಯದಲ್ಲಿ ನಟಿ ನಯನಾತಾರಾ ಚಪ್ಪಲಿ ತೆಗೆದಿಟ್ಟುಬರುವುದನ್ನು ಮರೆತಿರಬಹುದು. ಆದರೆ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಕಮೆಂಟ್ ಗಳೂ ಬಂದಿವೆ. ಆದರೆ ತಮ್ಮ ತಪ್ಪನ್ನು ಕೂಡಲೇ ಒಪ್ಪಿಕೊಂಡ ನಟಿ ನಯನತಾರಾ ಅವರ ಬಗ್ಗೆ ಹೆಚ್ಚಾಗಿ ಯಾರೂ ನೆಗೆಟಿವ್ ಕಮೆಂಟ್ ಮಾಡುವ ಬದಲು ಮತ್ತೆಂದೂ ಹೀಗೆ ಮಾಡಬೇಡಿ ಅಂತ ನಯನಾತಾರಾ ಅವರಿಗೆ ಹೇಳಿದ್ದಾರೆ.

Leave a Comment