ಮದುವೆಯಾದ ಖುಷಿಯಲ್ಲಿ ಗಂಡ ವಿಘ್ನೇಶ್ ಶಿವನ್ ಗೆ ನಯನತಾರಾ ಕೊಟ್ಟ ದುಬಾರಿ ಉಡುಗೊರೆಗಳು ಏನೇನು ಗೊತ್ತಾ?

ತಮಿಳಿನ ಲೇಡಿ ಸೂಪರ್ ಸ್ಟಾರ್ ಹಾಗೂ ಸ್ಟಾರ್ ಡೈರೆಕ್ಟರ್ ವಿವಾಹ ಮಹೋತ್ಸವಕ್ಕೆ ಬೇರೆ ಬೇರೆ ಚಿತ್ರರಂಗದ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಇದೇ ತಿಂಗಳು ಒಂಬತ್ತು ನೇ ತಾರೀಖಿನಂದು ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿದೆ. ಇನ್ನೂ ಈ ಮದುವೆ ಸಮಾರಂಭವನ್ನು ಇನ್ನಷ್ಟು ನೆನಪಾಗಿಸಿದ್ದು ಮದುವೆ ಸಮಾರಂಭಕ್ಕೆ ಬಂದ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು.

ಹೌದು ಸ್ಟಾರ್ ನಟ ಅಥವಾ ನಟಿಯ ಮದುವೆ ಅಂದರೆ ಅಲ್ಲಿ ಸಾಕಷ್ಟು ಕಲಾವಿದರ ಉಪಸ್ಥಿತಿ ಇದ್ದೇ ಇರುತ್ತದೆ. ಅದರಲ್ಲೂ ನಟಿ ನಯನತಾರಾ ಉತ್ತಮ ನಟಿಯಾಗಿ ಸಾಕಷ್ಟು ಹೆಸರನ್ನು ಮಾಡಿರುವಂತವರು. ಜೊತೆಗೆ ವಿಘ್ನೇಶ್ ಶಿವನ್ ಕೂಡ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡವರು. ಹಾಗಾಗಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರಿಂದ ಹಿಡಿದು, ಬೋನಿ ಕಪೂರ್, ನಿರ್ದೇಶಕ ಅಟ್ಲಿ, ರಜನಿಕಾಂತ್ ಕಾರ್ತಿ ಮೊದಲಾದ ಕಣ್ಣೀರು ನಯನತಾರಾ ಹಾಗೂ ವಿಘ್ನೇಶ್ ಶಿವನ ಅವರ ವಿವಾಹಕ್ಕೆ ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ನವವಿವಾಹಿತ ಅವರಿಗೆ ದುಬಾರಿಯಾಗಿರುವ ಗಿಫ್ಟ್ ಸಿಕ್ಕಿದೆ.

ಇದನ್ನ ಯಾರು ಕೊಟ್ಟಿರಬಹುದು ಅನ್ನುವ ಕುತೂಹಲ ನಿಮಗೆ ಇರಬಹುದು. ಈ ದುಬಾರಿ ಗಿಫ್ಟ್ ಕೊಟ್ಟಿದ್ದು ಬೇರೆ ಯಾರು ಅಲ್ಲ ಸ್ವತಹ ವಿಘ್ನೇಶ್ ಅವರ ಹೆಂಡತಿ ನಯನತಾರ. ವಿಘ್ನೇಶ್ ಶಿವನ್ ಅವರಿಗೆ ಗೊತ್ತಾಗದ ಹಾಗೆ 20 ಕೋಟಿ ಮೌಲ್ಯದ ಬಂಗಲೆ ಒಂದನ್ನು ಬುಕ್ ಮಾಡಿದ್ದರು ನಯನತಾರ. ವಿವಾಹದ ಸಮಯದಲ್ಲಿ ವಿಘ್ನೇಶ್ ಅವರಿಗೆ ಈ ಗಿಫ್ಟ್ ಮೂಲಕ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ನಯನತಾರ. ಅಷ್ಟೇ ಅಲ್ಲ, ನಯನತಾರ ವಿಘ್ನೇಶ್ ಶಿವನ್ ಅವರ ಸಹೋದರರಿಗೂ 24 ತೋಲ ಚಿನ್ನವನ್ನು ಉಡುಗೊರೆಯಾಗಿ ನೀಡಿ ಅವರ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

ಹಾಗಂತ ವಿಘ್ನೇಶ್ ಶಿವನ್ ಕೂಡ ಗಿಫ್ಟ್ ಇಸ್ಕೊಂಡಿದ್ದು ಮಾತ್ರವಲ್ಲ, ತನ್ನ ಪ್ರೀತಿಯ ಪತ್ನಿ ನಯನತಾರಾ ಅವರಿಗೆ ಕೂಡ ದುಬಾರಿಯಾದ ಗಿಫ್ಟನ್ನೇ ನೀಡಿದ್ದಾರೆ. ಹೌದು ನಿರ್ದೇಶಕ ವಿಘ್ನೇಶ್ ಶಿವನ್ ನಯನತಾರಾ ಅವರನ್ನು ಬಹಳ ವರ್ಷಗಳಿಂದ ಪ್ರೀತಿಸಿ ಮದುವೆಯಾದವರು. ಹಾಗಾಗಿ ತನ್ನ ಮನದರಸಿ ಗೆ ಸುಮಾರು 5 ಕೋಟಿ ರೂಪಾಯಿ ಬೆಲೆಯ ಡೈಮಂಡ್ ರಿಂಗ್ ತೋಡಿಸಿದ್ದಾರೆ. ಇನ್ನು ನಯನತಾರಾ ಮದುವೆ ಸಂದರ್ಭದಲ್ಲಿ ಧರಿಸಿರುವ ಆಭರಣಗಳು ಬಹಳ ಸುದ್ದಿಯಾಗಿತ್ತು. ಆವರಣದ ಬೆಲೆ ಸುಮಾರು ಎರಡರಿಂದ ಮೂರು ಕೋಟಿ ರೂಪಾಯಿ ಇರಬಹುದು. ಇದನ್ನು ಕೊಡಿಸಿದ್ದು ಕೂಡ ವಿಘ್ನೇಶ್ ಶಿವನ್ ಅವರು.

ಇನ್ನು ನಯನತಾರಾ ಹಾಗೂ ವಿಘ್ನೇಶ ಶಿವನ್ ತಮ್ಮ ಸ್ನೇಹಿತರಿಗೆ ಹಾಗೂ ಸೆಲೆಬ್ರಿಟಿಗಳಿಗೆ ಭರ್ಜರಿಯಾದ ಪಾರ್ಟಿಯೊಂದನ್ನು ಆಯೋಜಿಸಲಿದ್ದಾರೆ. ಈ ವೀಕೆಂಡ್ ನಲ್ಲಿ ಚೆನ್ನೈನಲ್ಲಿ ಅದ್ದೂರಿಯಾದ ಪಾರ್ಟಿ ನೆರವೇರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಹಳಷ್ಟು ವರ್ಷದಿಂದ ಪ್ರೀತಿಸುತ್ತಿದ್ದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಪ್ರೀತಿಗೆ ಮದುವೆ ಎನ್ನುವ ಅರ್ಥ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳ ನ್ಯೂ ಇವರಿಬ್ಬರ ವಿವಾಹ ಮಹೋತ್ಸವದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿದ್ದು ಅಭಿಮಾನಿಗಳು ಬೆಸ್ಟ್ ವಿಶಸ್ ತಿಳಿಸಿದ್ದಾರೆ.

Leave a Comment