Nayana comedy Kiladigalu: ಸ್ನೇಹಿತರೆ ಕಳೆದ ಕೆಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಕಿರುತೆರೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡುತ್ತಿರುವಂತಹ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೊದಲ ಸೀಸನ್ನಲ್ಲಿ ಸ್ಪರ್ಧೆಯಾಗಿ ಬಂದಂತಹ ನಟಿ ನಯನ(Nayana) ತಮ್ಮ ಅಮೋಘ ಹಾಸ್ಯ ಪ್ರತಿಭೆ ಹಾಗೂ ನಟನೆಯಿಂದಾಗಿ ಇಂದು ಅದೆಷ್ಟೋ ಕನ್ನಡಿಗರ ಮನಸ್ಸನ್ನು ಗೆದ್ದು ಮನೆ ಮಗಳಾಗಿ ಹೋಗಿದ್ದಾರೆ. ಹೌದು ಗೆಳೆಯರೇ ಕಿರುತೆರೆಯ ಹಲವಾರು ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಆಗಮಿಸುತ್ತ,
ತಮ್ಮ ವರ್ಚಸ್ಸನ್ನು ಜನರ ಮುಂದೆ ತೋರ್ಪಡಿಸುತ್ತಿದ್ದಂತಹ ನಯನ ಅವರು ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸುವಂತಹ ಅವಕಾಶ ಪಡೆದುಕೊಂಡು ಬೆಳ್ಳಿತೆರೆಯಲ್ಲೂ ಮಿಂಚಿದರು. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಮನೆಯವರು ನೋಡಿದ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನ ಅವರು ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಆಗಾಗ ತಮ್ಮ ಬೇಬಿ ಶವರ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಸಂತಸ ವ್ಯಕ್ತಪಡಿಸುತ್ತಿರುತ್ತಾರೆ.
ಗಣೇಶ ಹಬ್ಬದ (Ganesh Festival) ಪ್ರಯುಕ್ತ ಸಾಂಪ್ರದಾಯಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿದ ನಯನ ಅವರು ಅದೇ ಕೆಲ ಫೋಟೋಗಳನ್ನು ತಮ್ಮ instagram ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಸ್ನೇಹಿತರೆ ಗಣೇಶ ಹಬ್ಬದ ಪ್ರಯುಕ್ತವಾಗಿ ತಮ್ಮ ಸೊಂಟದ ಮೇಲೆ ಗಣೇಶನನ್ನು ಕೂರಿಸಿಕೊಂಡು ಬಹಳ ಸುಂದರವಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ನಿಮಗೆ ಬಾಲ ಗಣೇಶನಂತಹ ಗಂಡು ಮಗುವೇ ಜನಿಸಲಿ ಎಂದು ಆಶೀರ್ವದಿಸಿದರೆ ಕಾರ್ಯಕ್ರಮ ಒಂದರಲ್ಲಿ ನಯನವರು ನಮಗೆ ಹೆಣ್ಣು ಮಗುವೆಂದರೆ ಬಹಳ ಪ್ರೀತಿ,
ದೇವರು ನನಗೆ ಹೆಣ್ಣು ಮಗು ಒಂದನ್ನು ಕರುಣಿಸಲಿ ಎಂದು ಬೇಡಿಕೊಂಡದರು. ಇದಲ್ಲದೆ ನಯನ ಅವರ ಕಾಮಿಡಿ ಕಿಲಾಡಿಗಳು(comedy Kiladigalu) ತಂಡದ ಸ್ನೇಹಿತರೆಲ್ಲರೂ ಸೇರಿ ಬ-ಸರಿ ಬಯಕೆಯನ್ನು ಈಡೇರಿಸುವ ಕೆಲಸ ಮಾಡಿದ್ದು, ತಟ್ಟೆ ತುಂಬಿ ಸೀರೆಯನ್ನು ನೀಡಿ ಅವರಿಗೆ ಇಷ್ಟವಾಗುವಂತಹ ಖಾದ್ಯವನ್ನೆಲ್ಲ ಮಾಡಿ ಉಣ ಬಡಿಸಿದ್ದಾರೆ. ಈ ವಿಡಿಯೋ ಸದ್ಯ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು, ಪರಸ್ಪರರ ನಡುವೆ ಇರುವಂತಹ ಬಾಂಧವ್ಯ ಹಾಗೂ ಒಗ್ಗಟ್ಟನ್ನು ಕಂಡು ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೆನ್ನೇ ಹರಿಸುತ್ತಿದ್ದಾರೆ.