Meghana Raj : ಸಿಹಿ ಸುದ್ದಿ ಹಂಚಿಕೊಂಡ ನಟಿ ಮೇಘನಾ ರಾಜ್, ಮುಗುಳ್ನಗೆ ಬಿರಿ ಸಿಹಿ ಸುದ್ದಿ ಕೊಟ್ಟ ನಟಿ ನೋಡಿ!!

Meghana Raj : ನಟಿ ಮೇಘನಾ ರಾಜ್ (Sandalwood Actress Meghana Raj) ಕನ್ನಡ ಹಾಗೂ ಮಲಯಾಳಂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ಅವರು ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನಕ್ಕೆ ಸಂಬಂಧ ಪಟ್ಟ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬದುಕಿನಲ್ಲಿ ನಡೆದ ಘಟನೆಗಳನ್ನು ಮರೆತು ಮತ್ತೆ ಸಿನಿ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ತತ್ಸಮ ತದ್ಭವ (Tatsama Tadbhava)ದ ಮೂಲಕ ಬಣ್ಣದ ಲೋಕಕ್ಕೆ ನಟಿ ಮೇಘನಾ ರಾಜ್ ಅವರು ಮರಳಿದ್ದಾರೆ. ತತ್ಸಮ ತದ್ಬವ’ (Tatsama Tadbhava) ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದ ನಟಿಯ ಇತ್ತೀಚೆಗಷ್ಟೇ . ಮೊನ್ನೆಯಷ್ಟೇ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿದ್ದರು.

Meghana Raj Next movie Trailer Realising Today

ಅದಲ್ಲದೇ ನಟಿ ಮೇಘನಾ ರಾಜ್ ಹುಟ್ಟುಹಬ್ಬಕ್ಕಾಗಿ ಮೊನ್ನೆಯಷ್ಟೇ ಚಿತ್ರತಂಡ ಅವರ ಪೋಸ್ಟರ್ (Poster)ಬಿಡುಗಡೆ ಮಾಡಿತ್ತು. ಆದರೆ ಇದೀಗ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದು ಹೊರಬಿದ್ದಿದೆ.ಇಂದು ಮೇಘನಾ ನಟನೆಯ ತತ್ಸಮ ತದ್ಭವ ಸಿನಿಮಾ ಟ್ರೈಲರ್ (Trailer) ಬಿಡುಗಡೆ ಆಗುತ್ತಿದೆ.

ನಟಿ ಮೇಘನಾ ರಾಜ್ ಅವರು ಟ್ರೈಲರ್ ಅದನ್ನು ನೋಡಿ ಹಾರೈಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡುತ್ತಿದ್ದಂತೆ ಈ ಸಿನಿಮಾಗಾಗಿ ಕಾದಿದ್ದೇವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.ಮೇಘನಾ ರಾಜ್ ಕಮ್ ಬ್ಯಾಕ್ ಮಾಡಿರುವ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ಕೂಡ ನಟಿಸಿದ್ದಾರೆ. (ಇದನ್ನು ಓದಿ)ನನ್ನ ಅಮ್ಮನಿಗೆ ಕಳ್ಳರ ಭಯ ಇತ್ತು ಅದಕ್ಕೆ ಬೇಗ ಮದುವೆ ಆದೆ ಎಂದ ನಟಿ ನಿವೇದಿತಾ ಗೌಡ! ಯಾಕೆ ಭಯ ಗೊತ್ತಾ ಶಾಕ್ ಆಗ್ತೀರಾ ನೋಡಿ!!

ಈ ಬಗ್ಗೆ ಮಾತನಾಡಿದ್ದ ಪ್ರಜ್ವಲ್ ದೇವರಾಜ್, ‘ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. (ಮೇಘನಾ ರಾಜ್ ) ಅವರು ನೀವೇ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ ‘ ಎಂದಿದ್ದರು.

ಇನ್ನು, ನಿರ್ಮಾಪಕ ಪನ್ನಗ ಭರಣರವರು (Pannagabharana), :ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದಿರುವ ನಿರ್ದೇಶಕ ವಿಶಾಲ್ ಆತ್ರೇಯ, ಸಂಪೂರ್ಣ ಚಿತ್ರೀಕರಣ ಮುಗಿಸಿ, ರೀರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ನಂತರ ಸಿನಿಮಾ ಬಿಡುಗಡೆ ಮಾಡುವುದಾಗಿ” ಹೇಳಿದ್ದರು. (ಇದನ್ನು ಓದಿ)ಸಂಜು ಬಸಯ್ಯ ಮದುವೆ ಡೇಟ್ ಫಿಕ್ಸ್, ಇದೇ ತಿಂಗಳಲ್ಲಿ ಮದುವೆ! ಸಮಸ್ತ ಕನ್ನಡಿಗರಿಗೆ ಆಹ್ವಾನ ನೀಡಿದ ಸಂಜು ಬಸಯ್ಯ ಮದುವೆ ಕಾರ್ಡ್ ನೋಡಿ!!

ಅಷ್ಟೇ ಅಲ್ಲದೇ ಈ ಸಿನಿಮಾದಲ್ಲಿ ನಟಿಸಿರುವ ನಟಿ ಶ್ರುತಿ, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದರು. ನಟಿ ಮೇಘನಾ ರಾಜ್ ಅವರು ಕಮ್ ಬ್ಯಾಕ್ ಮಾಡಿರುವ ಈ ಸಿನಿಮಾದ ಬಗ್ಗೆ ಬಾರಿ ನಿರೀಕ್ಷೆಯಿದ್ದು, ಸಿನಿಮಾ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.

Leave a Comment