Meghana Raj: ತಮ್ಮ ಮುಂದಿನ ಸಿನಿಮಾಗಳಿಗೆ ಮೇಘನಾ ರಾಜ್ ಪಡೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು?

Meghana Raj ನಟಿ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಮೇಘನಾ ರಾಜ್(Meghana Raj) ಅವರು ಕನ್ನಡ ಚಿತ್ರರಂಗದ ಮೂಲದವರು ಆಗಿದ್ದರು ಕೂಡ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ ನಂತರ ಜನಪ್ರಿಯತೆಯನ್ನು ಹೊಂದಿದ್ದು ಮಲಯಾಳಂ ಚಿತ್ರರಂಗದಲ್ಲಿ.

ಅದಾದ ನಂತರ ರಾಜಹುಲಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಡುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಯಶ್ ಹಾಗೂ ದರ್ಶನ್(Darshan) ಅವರಂತಹ ಘಟಾನುಘಟಿ ನಾಯಕರುಗಳಿಗೆ ಮೇಘನಾ ರಾಜ್ ಅವರು ನಾಯಕಿಯಾಗಿ ಕಾಣಿಸಿಕೊಂಡಿರುವಂತಹ ಅನುಭವವನ್ನು ಹೊಂದಿದ್ದಾರೆ.

ಚಿರು ಸರ್ಜಾ(Chiru Sarja) ಅವರನ್ನು ಕಳೆದುಕೊಂಡ ನಂತರ ಚಿತ್ರರಂಗದಿಂದ ದೂರವಿದ್ದ ನಟಿ ಮೇಘನಾ ರಾಜ್ ಅವರು ಸದ್ಯಕ್ಕೆ ಮತ್ತೆ ತತ್ಸಮ ತದ್ಭವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದು ಮುಂದಿನ ದಿನಗಳಲ್ಲಿ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಳ್ಳಲಿದ್ದಾರೆ ಎಂಬುದಾಗಿ ಸುದ್ದಿ ಇದೆ.

ಹೌದು ಮೇಘನಾ ರಾಜ್(Meghana Raj) ಅವರು ಇನ್ಮುಂದೆ 40 ರಿಂದ 45 ಲಕ್ಷ ಸಂಭಾವನೆಯನ್ನು ಪ್ರತಿ ಸಿನಿಮಾಗಳು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಸುದ್ದಿ ಇದೆ. ಮುಂದಿನ ದಿನಗಳಲ್ಲಿ ಯಾವ್ಯಾವ ಸಿನಿಮಾಗಳಲ್ಲಿ ಮೇಘನಾ ರಾಜ್ ಅವರು ಕಾಣಿಸಿಕೊಳ್ಳಬಹುದು ಎಂಬುದಾಗಿ ಕೂಡ ಅಭಿಮಾನಿಗಳಲ್ಲಿ ಕಾತುರತೆ ಹೆಚ್ಚಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment