Meghana Raj ನಟಿ ಮೇಘನಾ ರಾಜ್(Meghana Raj) ರವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಾಯಕ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಪೋಷಕರು ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದಾಗಿ ಅವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಕನ್ನಡ ಚಿತ್ರರಂಗ ಅತ್ಯಂತ ಹತ್ತಿರವಾದದ್ದಾಗಿದೆ.
ಇನ್ನು ತಮಿಳು ತೆಲುಗು ಸೇರಿದಂತೆ ಮಲಯಾಳಂ ಚಿತ್ರರಂಗದಲ್ಲಿ ಕೂಡ ನಟಿಸಿರುವ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ಯಶಸ್ವಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ಚಿರು ಸರ್ಜಾ(Chiru Sarja) ಅವರನ್ನು ಪ್ರೀತಿಸಿ ಎರಡು ಧರ್ಮಗಳ ಅನ್ವಯ ಮದುವೆಯಾಗುವ ಮೂಲಕ ಕರ್ನಾಟಕಕ್ಕೆ ಮಾದರಿಯಾಗಿ ಕಾಣಿಸಿಕೊಳ್ಳುತ್ತಾರೆ.
ಇನ್ನು ಲಾಕ್ಡೌನ್ ಸಂದರ್ಭದಲ್ಲಿ ಚಿರು ಸರ್ಜಾ ಅವರ ಅಕಾಲಿಕ ನಿಧನ ಎನ್ನುವುದು ನಿಜಕ್ಕೂ ಕೂಡ ಅವರನ್ನು ಇನ್ನಿಲ್ಲದಂತೆ ದುಃಖಕ್ಕೆ ತಳ್ಳುತ್ತದೆ. ಹೇಗಿದ್ದರೂ ಕೂಡ ತಮ್ಮ ಮಗ ಜೂನಿಯರ್ ಚಿರು ಸರ್ಜಾ ಗಾಗಿ ಅವರು ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟು ತಮ್ಮ ಮಗನ ಕನಸನ್ನು ಪೂರೈಸುವತ್ತ ಪರಿಶ್ರಮವನ್ನು ಪಡುತ್ತಿದ್ದಾರೆ.
ಮೇಘನಾ ರಾಜ್(Meghana Raj) ಅವರು ಯುಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದು ಈ ಸಂದರ್ಭದಲ್ಲಿ ಅವರು ತಮ್ಮ ಬೆಡ್ರೂಮ್ ಟೂರ್ ಮಾಡಬೇಕಾದರೆ ಕೊನೆಯಲ್ಲಿ ಇರುವಂತಹ ಚಿರು ಸರ್ಜಾ ಅವರ ಸಹಿ ಇರುವಂತಹ ವಸ್ತುವನ್ನು ಕೂಡ ತೋರಿಸಿ ಇದು ಅವರ ನೆನಪನ್ನು ಹಸಿರಾಗಿ ಇರಿಸುತ್ತದೆ ಹಾಗೂ ಇಂದಿಗೂ ಅವರು ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವನೆಯನ್ನು ನೀಡುತ್ತದೆ ಎಂಬುದಾಗಿ ಹೇಳಿದ್ದಾರೆ