Mahesh Babu ನಟ ಮಹೇಶ್ ಬಾಬು ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿದ್ದು ಅವರನ್ನು ಅವರ ತಂದೆ ಹೆಸರಿನಲ್ಲಿ ಅಂದರೆ ಸೂಪರ್ ಸ್ಟಾರ್ ಮಹೇಶ್ ಬಾಬು(Super Star Mahesh Babu) ಎಂಬುದಾಗಿ ಕರೆಯಲಾಗುತ್ತದೆ.
ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟರಲ್ಲಿ ಒಬ್ಬರಾಗಿದ್ದು ಅವರ ಜನಪ್ರಿಯತೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಡಿದ್ದು ಟಾಪ್ ನಾಯಕ ನಟರಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರು ಕೂಡ ತಪ್ಪಾಗಲಾರದು. ಅವರ ಪ್ರತಿಯೊಂದು ಸಿನಿಮಾಗಳು ಕೂಡ ಸಮಾಜಕ್ಕೆ ಸಂದೇಶ ಸಾರುವಂತಹ ಕೆಲಸವನ್ನು ಮಾಡುತ್ತವೆ.
ಇನ್ನು ಈಗಲೂ ಕೂಡ ಅವರ ಫೋಟೋವನ್ನು ನೋಡಿದರೆ ಖಂಡಿತವಾಗಿ ಅವರು ಇಬ್ಬರು ಮಕ್ಕಳ ತಂದೆ ಎನ್ನುವುದಾಗಿ ನೀವು ಕೂಡ ನಂಬಲು ಸಾಧ್ಯವೇ ಇಲ್ಲ. ಇನ್ನು ನಟಿ ನಮೃತಾ ಶಿರೋಡ್ಕರ್(Namratha Shirodkar) ಅವರನ್ನು ಮದುವೆಯಾಗಿದ್ದು ನಟ ಮಹೇಶ್ ಬಾಬು ಅವರ ವಯಸ್ಸು ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನೋಡೋದಕ್ಕೆ 30ರ ಹರೆಯದ ಯುವಕನಂತೆ ಕಾಣಿಸಿಕೊಳ್ಳುವಂತಹ ನಟ ಮಹೇಶ್ ಬಾಬು(Mahesh Babu) ಅವರ ನಿಜವಾದ ಬಯಸು 47 ವರ್ಷ ವಯಸ್ಸಾಗಿದ್ದು ಖಂಡಿತವಾಗಿ ಅವರ ಮುಖದ ಮೇಲೆ ಚಿಕ್ಕ ನೆರಿಗೆಯನ್ನು ಕೂಡ ನೀವು ಕಂಡು ಹುಡುಕಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅವರು ಫಿಟ್ ಹಾಗೂ ಫೈನ್ ಆಗಿದ್ದಾರೆ. ನಟ ಮಹೇಶ್ ಬಾಬು ಅವರ ಬಗ್ಗೆ ನಿಮಗಿರುವಂತಹ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.