Mahesh Babu ಮಹೇಶ್ ಬಾಬು(SSMB) ತೆಲುಗು ಚಿತ್ರರಂಗ ಕಂಡಂತಹ ಸಾಗಸು ಯಶಸ್ವಿ ಹಾಗೂ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಯಶಸ್ವಿ ನಟ. ಅವರ ಮುಂದಿನ ಸಿನಿಮಾ ಕೂಡ ಸಾಕಷ್ಟು ಕಾರಣಗಳಿಗಾಗಿ ಸಖತ್ ಸುದ್ದಿಯಲ್ಲಿದೆ ಎನ್ನುವುದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರ.
ಹೌದು ನಾವ್ ಮಾತನಾಡುತ್ತಿರುವುದು ರಾಜಮೌಳಿ(Rajamouli) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಹೇಶ್ ಬಾಬು ಅವರ ಮುಂದಿನ ಸಿನಿಮಾದ ಬಗ್ಗೆ. ಈ ಸಿನಿಮಾ ಭಾರತದಲ್ಲಿ ಅತ್ಯಂತ ಅಧಿಕ ಬಜೆಟ್ ನಲ್ಲಿ ಮೂಡಿ ಬರಲಿರುವ ಸಿನಿಮಾ ಆಗಿರಲಿದ್ದು ಪ್ರತಿಯೊಂದು ದೇಶಗಳಲ್ಲಿ ಕೂಡ ಇದರ ಚಿತ್ರೀಕರಣ ನಡೆಯಲಿದ್ದು ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂಬುದಾಗಿ ಪ್ರತಿಯೊಬ್ಬ ಸಿನಿಮಾ ಪಂಡಿತರು ಕೂಡ ಲೆಕ್ಕಾಚಾರ ಹಾಕಿದ್ದಾರೆ.
ಆದರೆ ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಮಹೇಶ್ ಬಾಬು ಅವರ ಕುರಿತಂತೆ ಅಲ್ಲ ಬದಲಾಗಿ ಅವರ ಮಗಳ ಕುರಿತಂತೆ. ಕೇವಲ 11 ವರ್ಷದ ಸಿತಾರ ಗಟ್ಟಿಮನೇನಿ(Sitara Ghattimaneni) ಈಗ ನ್ಯಾಷನಲ್ ಲೆವೆಲ್ ನಲ್ಲಿ ಸೆಲೆಬ್ರಿಟಿ ಕಿಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅವರು ಒಂದು ಚಿನ್ನದ ಬ್ರಾಂಡ್ ನ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದರು.
ಹೌದು Jewellery ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳುತ್ತಿರುವ ಸೀತಾರಾ ಇತ್ತೀಚಿಗಷ್ಟೇ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದರು. ಇನ್ನು ಈ ಪ್ರಮೋಷನ್ ಗಾಗಿ ಭರ್ಜರಿ ಒಂದು ಕೋಟಿ ರೂಪಾಯಿ ಹಣವನ್ನು ಕೇವಲ 11 ವರ್ಷದ ವಯಸ್ಸಿನಲ್ಲಿಯೇ ಪಡೆದುಕೊಂಡಿರುವ ಅವರು ಈಗ ಎಲ್ಲಾ ಕಡೆ ಸುದ್ದಿಯಾಗುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.