Latha Rao: ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವಂತೆ ಒತ್ತಾಯ! ಚಿತ್ರರಂಗದ ಮತ್ತೊಂದು ಕರಾಳ ಸತ್ಯ ಬಯಲು ಮಾಡಿದ ಲತಾ ರಾವ್

Latha rao tamil film industry incident: ಸ್ನೇಹಿತರೆ ಈಗಾಗಲೇ ಸಾಕಷ್ಟು ಸ್ಟಾರ್ ನಟಿಯರು ಸಿನಿಮಾ (cinema) ಬದುಕಿನಿಂದ ತಮಗೆ ಎದುರಾದ ಕಹಿ ಘಟನೆಗಳ ಕುರಿತು ಮುಕ್ತವಾಗಿ ಮಾಧ್ಯಮದ ಮುಂದೆ ಬಂದು ಮಾತನಾಡುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವಂತಹ ಆಫರ್ಗಳನ್ನು(offers) ಏನಾದರೂ ನಟಿಯರು ತೊರೆದರೆ ಸಿನಿಮಾ ರಂಗದಲ್ಲಿ ಹೆಸರು ಮಾಡಲು ಸಾಧ್ಯವೇ ಆಗುವುದಿಲ್ಲ ಎಂಬ ಧೋರಣೆಯನ್ನು ಸಾಕಷ್ಟು ನಟಿಯರು ಈಗಾಗಲೇ ಮಾಡಿದ್ದರು.

ಇದೀಗ ಮತ್ತೊಂದು ನಟಿ ಈ ಕುರಿತು ದನಿ ಎತ್ತಿದ್ದು ಒಳ್ಳೊಳ್ಳೆ ಅವಕಾಶಗಳು ಸಿಗಬೇಕೆಂದರೆ ಮಂಚ ಹಂಚಿಕೊಳ್ಳಬೇಕೆಂದು ಒತ್ತಾಯ ಮಾಡಿದರಂತೆ ಹೌದು ಗೆಳೆಯರೇ ಇತ್ತೀಚಿಗಷ್ಟೇ ನಟಿ ಲತಾ ರಾವ್(Latha Rao) ಅವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ ಚಿತ್ರರಂಗದಿಂದ ತಮಗೆ ಎದುರಾದ ಕಷ್ಟಕರ ಘಟನೆಯ ಕುರಿತು ಮಾಹಿತಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು ಗೆಳೆಯರೇ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸುತ್ತ ಮನೆಮಾತಾಗಿದ್ದ ಅವರು ಸೀರಿಯಲ್ಗಳನ್ನು ಹೊರತುಪಡಿಸಿ ಕನ್ನಡದ ಕೋಟಿಗೊಬ್ಬ 2 ಹಾಗೂ ತಮಿಳುನಾಡು ಥಿಲ್ಲಂಗಡಿ ಎಂಬ ಸೀರಿಯಲ್ನಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಬೆಳಿತರೆಯಲ್ಲಿಯೂ ತಮ್ಮ ನಟನ ಪ್ರವೃತ್ತಿಯ ಪರಿಚಯ ಮಾಡಿಸಿದರು.

Latha rao tamil film industry incident

ಹೀಗೆ ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಈ ನಟಿ ಚಿತ್ರ ಬದುಕಿನಲ್ಲಿರುವ ಅನಿಷ್ಟ ಪದ್ದತಿಯ ಕುರಿತು ದನಿಯದ್ದಿದ್ದಾರೆ “ಇಂತಹ ಕೆಟ್ಟ ಆಚರಣೆಗಳಿಗೆ ಒಪ್ಪಿಗೆ ಸೂಚಿಸದೆ ಇದ್ದಿದ್ದಕ್ಕೆ ನಾನು ಅನೇಕ ಅವಕಾಶಗಳನ್ನು ಕಳೆದುಕೊಂಡೆ. ಮಂಚ ಹಂಚಿಕೊಳ್ಳುವಂತೆ ಕೆಲ ನಿರ್ದೇಶಕರು ನನಗೂ ಒತ್ತಾಯ ಮಾಡಿದರು.

ಆದರೆ ನಾನು ಯಾವ ಆಮಿಷಕ್ಕೂ ಬಲಿಯಾಗಲಿಲ್ಲ, ಚಿತ್ರರಂಗದಲ್ಲಿ ಕೆಲ ನಟಿಯರು(actress) ಹೆಸರು ಮಾಡಬೇಕೆಂಬ ಸಲುವಾಗಿ ಎಲ್ಲ ಸವಾಲುಗಳನ್ನು ಎದುರಿಸಿ ರಾಜಿಯಾಗಿ ಅವಕಾಶ ಹಾಗೂ ಹಣ ಎಲ್ಲವನ್ನು ಸಂಪಾದನೆ ಮಾಡುತ್ತಾರೆ. ಇದಕ್ಕೆ ಒಪ್ಪದ ನಟಿಯರು ಮೂಲೆಗುಂಪಾಗುತ್ತಾರೆ. ಇನ್ನು ಕೆಲ ನಟಿಯರು ಅನಿವಾರ್ಯವಾಗಿ ತಮಗೆ ಇಷ್ಟವಿಲ್ಲದಂತಹ ಕೆಲಸಕ್ಕೆ ಒಪ್ಪಿಗೆ ಸೂಚಿಸಿದರೂ ಮೋಸದ ಬಳಿಗೆ ಬೀಳುತ್ತಾರೆ.

ಅವರ ಆಸೆಗಳನ್ನು ಈಡೇರಿಸಿದ ನಂತರ ಅವಕಾಶ ನೀಡುವುದಿಲ್ಲ” ಎನ್ನುವ ಮೂಲಕ ಸಿನಿ ಬದುಕಿನ ಮತ್ತೊಂದು ಮುಖ ಪರಿಚಯವನ್ನು ನಟಿ ಲತಾ ರಾವ್(Latha Rao) ಮಾಡಿಸಿದ್ದಾರೆ. ಇದನ್ನೂ ಓದಿ Prabhas Anushka Shetty: ಒಂದೇ ಸಿನಿಮಾದಲ್ಲಿ ಮತ್ತೊಮ್ಮೆ ಅಭಿನಯಿಸಲಿದ್ದಾರೆ ಅನುಷ್ಕಾ ಶೆಟ್ಟಿ ಹಾಗೂ ಡಾರ್ಲಿಂಗ್ ಪ್ರಭಾಸ್!

Leave a Comment