Kurukshetra: ಸ್ನೇಹಿತರೆ, ಹಿಂದೆಲ್ಲಾ ನಮ್ಮ ಸ್ಯಾಂಪಲ್ ವುಡ್ ನಲ್ಲಿ ಕೇವಲ ಐತಿಹಾಸಿಕ ಪೌರಾಣಿಕ ಕಥಾ ಹಂದವನ್ನು ಹೊಂದಿರುವಂತಹ ಸಿನಿಮಾಗಳನ್ನೇ ಹೆಚ್ಚು ಹೆಚ್ಚಾಗಿ ಕಾಣಬಹುದಾಗಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಸ್ಟಾರ್ ನಟ ನಟಿಯರು ಕೇವಲ ಆಕ್ಷನ್ ಹಾಗೂ ಪ್ರೀತಿಗೆ ಸಂಬಂಧಿಸಿದಂತಹ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇಂಥವುಗಳ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮದೇ ಆದ ತಂಡವನ್ನು ಕಟ್ಟಿ ಕುರುಕ್ಷೇತ್ರ(Kurukshetra) ಎಂಬ ಐತಿಹಾಸಿಕ ಸಿನಿಮಾವನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡಿದ್ದಾರೆ. ಈ ಸಿನಿಮಾ ಅದೆಷ್ಟೇ ವರ್ಷಗಳು ಉರುಳಿದರು.
ಕನ್ನಡ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆ. ಹೌದು ಗೆಳೆಯರೇ ಬಹುದೊಡ್ಡ ತಾರಾ ಬಳಗ ಉದ್ದುದ್ದನೆಯ ಡೈಲಾಗ್ ಮೇಕಪ್ ಹೀಗೆ ಎಲ್ಲವೂ ಸಿನಿಮಾದ ಮೆರಕನ್ನು ಇನ್ನಷ್ಟು ಹೆಚ್ಚಿಸಿತ್ತು. ಹೀಗಿರುವಾಗ ದುರ್ಯೋಧನರಾಗಿ ದರ್ಶನ್ ತೆರೆಯ ಮೇಲೆ ಮಿಂಚಲು ಮೇಕಪ್ ಮಾಡಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ತೆಗೆಯಲಾದ ಅಪರೂಪದ ಫೋಟೋವೊಂದು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದ್ದು, ಶಿವು ಚಕ್ರವರ್ತಿ ಎಂಬುವವರ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಫೋಟೋದಲ್ಲಿ ದರ್ಶನವರು ಕ್ಯಾರವೆನ್ ಮುಂದೆ ನಿಂತು ಸ್ಮೈಲ್ ಮಾಡುತ್ತಾ ಫೋಟೋಗೆ ಫೋಸ್ ನೀಡಿದ್ದಾರೆ. ಇವರ ಜೊತೆಗೆ ಶಕುನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆರುಮುಗಂ ಅಲಿಯಾಸ್ ರವಿಶಂಕರ್(Ravishankar) ಹಾಗೂ ನಟ ಶಶಿಕುಮಾರ್(Shashikumar) ಕೂಡ ಕೈ ಕಟ್ಟಿ ನಿಂತು ಫೋಟೋಗೆ ಸರಳವಾಗಿ ನೀಡಿದ್ದು, ಇದನ್ನು ಕಂಡಂತಹ ನೆಟ್ಟೆಗರು ಲೈಕ್ಸ್ ಹಾಗೂ ಕಾಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಹೀಗೆ 2019ರಲ್ಲಿ ನಾಗಣ್ಣನವರ(Naganna) ಅದ್ಭುತ ನಿರ್ದೇಶನದಲ್ಲಿ ತಯಾರಾಗಿ ಹಿಂದಿ ತಮಿಳು ತೆಲುಗು ಕನ್ನಡ ಭಾಷೆಯಲ್ಲಿ ತೆರೆಕಂಡು ಬಹು ದೊಡ್ಡ ಮಟ್ಟದ ಸಕ್ಸಸ್ ಕಂಡಂತಹ ಈ ಸಿನಿಮಾಗೆ ವಿಶೇಷ ಅಭಿಮಾನಿ ಬಳಗವಿದ್ದು ಇಂದಿಗೂ ಕೂಡ ದರ್ಶನ್(Darshan) ಅವರನ್ನು ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಅಭಿಮಾನಿಗಳು ಕೇಳಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರೆ ಹೇಗಿರುತ್ತೆ? ವೈರಲ್ ಆದ AI ಫೋಟೋಗಳು!