Kumar Bangarappa: ನಟ ಹಾಗೂ ರಾಜಕಾರಣಿ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ!

ಹಲವಾರು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ಕುಮಾರ್ ಬಂಗಾರಪ್ಪನವರು(Kumar Bangarappa) 80- 90 ರ ದಶಕದಲ್ಲಿ ಆಕ್ಷನ್ ಹೀರೋ(Action hero) ಎಂದು ಪ್ರಖ್ಯಾತಿ ಪಡೆದು ಅಶ್ವಮೇಧ, ವಿಜಯೋತ್ಸವ, ಶರವೇಗದ ಸರದಾರ, ತೇಜ, ನವತಾರೆ, ಭಯಂಕಾರ, ಅಂಗೈಯಲ್ಲಿ ಅಪ್ಸರೆ, ಜೋಡಿ, ಕೇರಳದ ಸರ್ಪ, ನಿರ್ಬಂಧ, ಚೈತ್ರದ ಚಿಗುರು, ರಕ್ತ ಕಣ್ಣೀರು, ತಾಳಿ ಕಟ್ಟುವ ಶುಭ ವೇಳೆ ಹಾಗೂ ಇತ್ತೀಚಿಗೆನ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಚಕ್ರವರ್ತಿ ಸಿನಿಮಾದಲ್ಲಿ ಅಭಿನಯಿಸಿ ಕನ್ನಡದ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದರು.

ಮಾಡಿರುವುದು ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಾದರೂ ಕೂಡ ತಮ್ಮ ಅಪ್ರತಿಮ ಅಭಿನಯದಿಂದಾಗಿ ಬಾರಿ ಜನಪ್ರಿಯತೆ ಪಡೆದಿದ್ದಂತಹ ಕುಮಾರ್ ಬಂಗಾರಪ್ಪನವರು 1996 ರಂದು ರಾಜಕೀಯ ರಂಗವನ್ನು ಪ್ರವೇಶಿಸಿದರು. ಹೌದು ಗೆಳೆಯರೇ ಶಿವಮೊಗ್ಗದಲ್ಲಿ ತಮ್ಮ ಮಗನಿಗಾಗಿ ಬಂಗಾರಪ್ಪನವರು ದಾರಿ ಮಾಡಿಕೊಟ್ಟ ಬೆನ್ನೆಲ್ಲೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. 2004ರ ಸತತ ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ಸೊರಬ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದರು.

ವಿದ್ಯು್ಲ್ಲುತಾ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಮಾರ್ ಬಂಗಾರಪ್ಪನವರಿಗೆ ಅರ್ಜುನ್ ಬಂಗಾರಪ್ಪ(Arjun Bangarappa) ಮತ್ತು ಲಾವಣ್ಯ ಬಂಗಾರಪ್ಪ(Lavanya Bnagarappa) ಎಂಬ ಇಬ್ಬರು ಮಕ್ಕಳಿದ್ದು, ಮಗ ಅರ್ಜುನ್ ಸಿವಿಲ್ ಇಂಜಿನಿಯರ್ ಓದಿ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿ ಇದರ ಜೊತೆಜೊತೆಗೆ ರಾಜಕೀಯ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಅದರಂತೆ ಮಗಳು ಲಾವಣ್ಯ ಬಯೋಮೆಡಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದು, ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಈ ಸುಂದರ ಕುಟುಂಬದಲ್ಲಿ ನೆರವೇರಿಸಲಾಗುತ್ತಿರುವ ಗಣೇಶ ಹಬ್ಬದ ಸಂಭ್ರಮದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಕುಮಾರ್ ಬಂಗಾರಪ್ಪನವರು ತಲೆಗೆ ಪೇಟ ಪಂಚೆ ಶರ್ಟು ಧರಿಸಿ ಪರಿಸರ ಸ್ನೇಹಿ ಗಣೇಶನನ್ನು (Eco friendly Ganesha) ತಮ್ಮ ಮನೆಗೆ ಬರಮಾಡಿಕೊಳ್ಳುತ್ತಿರುವ ಕೆಲ ಸುಂದರ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಭಾರಿ ವೈರಲ್ ಆಗುತ್ತಿದ್ದು ಗಣೇಶನಿಗೆ ಆರತಿ ಮಾಡಿ ಕುಮಾರ್ ಬಂಗಾರಪ್ಪನವರ ಪತ್ನಿ ಗಣಪತಿ ಬಪ್ಪನನ್ನು ಮನೆಗೆ ಬರಮಾಡಿಕೊಂಡಿರುವ ಪರಿ ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: Actor Yash: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಐಷಾರಾಮಿ ಭವ್ಯ ಬಂಗಲೆ ಹೇಗಿದೆ? ಎಷ್ಟು ಕೋಟಿ ಬೆಲೆ ಬಾಳು ಗೊತ್ತೇ? ಇಲ್ಲಿವೆ ಫೋಟೋಸ್

Leave a Comment