Kiccha Sudeep: ಪತ್ನಿಯ ಅಗಲಿಕೆಯಿಂದ ನೊಂದು ಹೋಗಿರುವ ಚಿನ್ನಾರಿ ಮುತ್ತನಿಗೆ ಸಾಂತ್ವನ ಹೇಳಲು ರಾಘು ಮನೆಗೆ ಧಾವಿಸಿದ ಕಿಚ್ಚ ಸುದೀಪ್ ದಂಪತಿಗಳು!

Kiccha Sudeep Visit Vijay Raghavendra Home: ಸ್ನೇಹಿತರೆ, ಡಾಕ್ಟರ್ ರಾಜಕುಮಾರ್ ಹಾಗೂ ಚಿನ್ನೆ ಗೌಡರ ಕುಟುಂಬಕ್ಕೆ ಕರಿ ನೆರಳು ತಾಗಿದಂತೆ ಒಬ್ಬರಾದ ಮೇಲೆ ಒಬ್ಬರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬಸ್ಥರನ್ನು ತೊರೆದು ಇಹಲೋಕ ತ್ಯಜಿಸುತ್ತಿದ್ದಾರೆ. ಹೃದಯ ಶ್ರೀಮಂತಿಕೆ ಉಳ್ಳುವಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಅಗಲಿಕೆಯ ನೋವಿನಿಂದ ಹೊರಬರುವ ಪ್ರಯತ್ನದಲ್ಲಿ ಇದ್ದಂತಹ ದೊಡ್ಮನೆ ಕುಟುಂಬಕ್ಕೆ ಸ್ಪಂದನ ಅವರ ಅಗಲಿಕೆಯು ಸಹಿಸಲಾರದಂತಹ ನೋವನ್ನುಂಟು ಮಾಡಿದ್ದು,

ಪ್ರತಿಯೊಂದಕ್ಕೂ ಹೆಂಡತಿಯ ಮೇಲೆ ಅವಲಂಬಿತರಾಗಿದ್ದಂತಹ ವಿಜಯ್ ರಾಘವೇಂದ್ರ(Vijay Raghavendra) ಅವರಿಗಂತೂ ತಮ್ಮ ಪತ್ನಿಯ ಅಗಲಿಕೆಯ ನೋವಿನಿಂದ ಹೊರಬರಲು ಸಾಧ್ಯವೇ ಆಗುತ್ತಿಲ್ಲ.‌ ಹೌದು ಗೆಳೆಯರೇ ಮೊನ್ನೆಯಷ್ಟೇ ತಮ್ಮ ‘ಕದ್ದ ಚಿತ್ರ’ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದಂತಹ ಚಿನ್ನಾರಿ ಮುತ್ತ ಹೆಂಡತಿಯನ್ನು ನೆನೆದು ಕಣ್ಣೀರು ಹಾಕಿದರು. ಅದರಂತೆ ಈಗ ಶೂಟಿಂಗ್ ಕೆಲಸಗಳಿಗೂ ಹೋಗದೆ ಮನೆಯಲ್ಲೇ ಒಬ್ಬಂಟಿಯಾಗಿ ಕಾಲ ಕಳೆಯುತ್ತಿರುವ

ವಿಜಯ್ ರಾಘವೇಂದ್ರ(Vijay Raghavendra) ಅವರ ಪರಿಸ್ಥಿತಿಯನ್ನು ಮನಗಂಡಂತಹ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯ ದಂಪತಿಗಳು ಸಾಂತ್ವಾನ ಹೇಳುವ ಸಲುವಾಗಿ ರಾಘು ಮನೆಗೆ ತೆರಳಿದ್ದಾರೆ. ಆ ವೇಳೆ ವಿಜಯ್ ರಾಘವೇಂದ್ರ ಅವರ ನಿವಾಸದಲ್ಲಿ ಸಹೋದರ ಶ್ರೀಮುರುಳಿ, ಕೆ ಆರ್ ಜಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜು ಕೂಡ ಇದ್ದರು. ಕೆಲ ಕಾರಣಾಂತರಗಳಿಂದ ಸ್ಪಂದನ ಅವರ ಅಗಲಿಕೆಯ ನಂತರ ಕಿಚ್ಚ ಸುದೀಪ್ ಅವರಿಗೆ ವಿಜಯ್ ರಾಘವೇಂದ್ರ(Vijay Raghavendra)

ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಬಿಡುವ ಮಾಡಿಕೊಂಡು ಮನೆಗೆ ಬಂದಂತಹ ಕಿಚ್ಚ ಸುದೀಪ್(Kiccha Sudeep) ಶ್ರೀ ಮುರಳಿ(Sri Murali) ಮತ್ತು ವಿಜಯ್ ರಾಘವೇಂದ್ರ(Vijay Raghavendra) ಅವರಿಗೆ ಕೆಲ ಧೈರ್ಯದ ಮಾತುಗಳನ್ನು ಹೇಳುವ ಮೂಲಕ ಸಾಂತ್ವನ ಮಾಡಿದ್ದಾರೆ, ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗುವಂತೆ ಕೇಳಿಕೊಂಡಿದ್ದು, ವಿಜಯ್ ರಾಘವೇಂದ್ರ(Vijay Raghavendra) ಅವರ ಮುಂದಿನ ಕದ್ದಚಿತ್ರಕ್ಕೆ(Kadda Chitra) ಅವರ ಭರ್ಜರಿ ಪ್ರಮೋಷನ್ ಇರುವುದು ಬಹುತೇಕ ಪಕ್ಕ ಎಂಬಂತೆ ಕಂಡು ಬಂದಿದೆ.

Leave a Comment