Kiccha Sudeep: ಅಭಿಷೇಕ್ ಅಂಬರೀಶ್ ಮದುವೆಗೆ ಬಂದ ಕಿಚ್ಚ ಸುದೀಪ್ ಮಾಡಿದ್ದೇ ಬೇರೆ. ಅಭಿಮಾನಿಗಳ ಅಭಿಮಾನಿ ಇವರು.

Kiccha Sudeep ನಿನ್ನೆ ನಡೆದಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆಗೆ ಇಡೀ ಕನ್ನಡ ಚಿತ್ರರಂಗವೇ ಹಾಜರಾಗಿತ್ತು. ನಿಜಕ್ಕೂ ಕೂಡ ಮದುವೆ ಅಂದರೆ ಹೀಗಿರಬೇಕು ಎನ್ನುವಷ್ಟರ ಮಟ್ಟಿಗೆ ಶಾಸ್ತ್ರ ಸಂಪ್ರದಾಯ ಬದ್ಧವಾಗಿ ಹಾಗೂ ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಅತ್ಯಂತ ಅದ್ದೂರಿಯಾಗಿ ಕೂಡ ಮಾಡಲಾಗಿದೆ. ಸುಮ್ಸುಮ್ನೆ ಅಂಬರೀಶ್(Ambareesh) ಮಗನ ಮದುವೆಯನ್ನು ಮಾಡೋಕಾಗುತ್ತಾ ಎನ್ನುವುದಾಗಿ ಕೂಡ ಹೇಳುವಷ್ಟರ ಮಟ್ಟಿಗೆ ಅದ್ದೂರಿಯಾಗಿದೆ.

ಎಲ್ಲಿ ನೋಡಿದ್ರು ಸೆಲೆಬ್ರಿಟಿಗಳ ಗುಂಪೆ ದಂಡು ದಂಡಾಗಿ ಬರುತ್ತಿತ್ತು. ಕನ್ನಡ ತಮಿಳು ತೆಲುಗು ಹೀಗೆ ಪ್ರತಿಯೊಂದು ಭಾಷೆಗಳ ಬಿಗ್ ಸ್ಟಾರ್ಗಳು ಮದುವೆಯನ್ನು ಸಾಕ್ಷಿಕರಿಸಿದರು. ಈ ಸಂದರ್ಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕೂಡ ಆಗಮಿಸಿದ್ದರು.

ಚಿಕ್ಕ ವಯಸ್ಸಿನಿಂದಲೂ ಕೂಡ ಅಂಬರೀಷ್ ಅವರ ಕುಟುಂಬಕ್ಕೆ ಕಿಚ್ಚ ಸುದೀಪ್(Kiccha Sudeep) ರವರ ಕುಟುಂಬ ಅತ್ಯಂತ ಆತ್ಮೀಯವಾಗಿತ್ತು. ಕಿಚ್ಚ ಸುದೀಪ್ ರವರ ತಂದೆ ಹಾಗೂ ಅಂಬರೀಶ್ ಇಬ್ಬರು ಕೂಡ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು ಎಂಬುದು ಸಾಕಷ್ಟು ಸಂದರ್ಭದಲ್ಲಿ ತಿಳಿದುಬಂದಿದೆ. ಇದಕ್ಕಾಗಿ ಚಿತ್ರರಂಗ ಕುಟುಂಬಕ್ಕಿಂತಲೂ ಹೆಚ್ಚು ಎಂದು ಹೇಳುವುದು.

ಮದುವೆಗೆ ಬಂದಿದ್ದ ಸಂದರ್ಭದಲ್ಲಿ ಒಬ್ಬ ಮಹಿಳೆ ನವದಂಪತಿಗಳೊಂದಿಗೆ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು ಆಗ ಕಿಚ್ಚ ಸುದೀಪ್ ರವರೇ ಸ್ವತಹ ಮುಂದೆ ಬಂದು ಅವರ ಫೋಟೋವನ್ನು ತೆಗೆಯುತ್ತಾರೆ. ಕಿಚ್ಚ ಸುದೀಪ್ ರವರ ಸರಳತೆಗೆ ಅಭಿಷೇಕ್ ಅಂಬರೀಶ್(Abhishek Ambareesh) ರವರು ಕೂಡ ಮಾರುಹೋಗುತ್ತಾರೆ.

Leave a Comment