Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಮಿತಾಬ್ ಬಚ್ಚನ್(Amitabh Bacchan) ಅವರಿಂದಲೂ ಕೂಡ ಆ ಕಾಲದಲ್ಲಿಯೇ ಭೇಷ್ ಎಂದೆನಿಸಿಕೊಂಡವರು. ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಆ ಕಾಲದಲ್ಲಿಯೇ ಪರಭಾಷೆಗಳಲ್ಲಿ ಕೂಡ ನೆಟ್ಟು ಬಂದವರು. ಆ ಕಾಲದಲ್ಲಿ ಅವರಿಗೆ ಸರಿಸಾಟಿ ಎನಿಸುವಂತಹ ಮತ್ತೊಬ್ಬ ಕಲಾವಿದ ಕನ್ನಡ ಚಿತ್ರರಂಗದಲ್ಲಿ ಇರಲಿಲ್ಲ.
ಹಿಂದಿ ಸಿನಿಮಾದಲ್ಲಿ ಆ ಕಾಲದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಹಿರಿಮೆ ಕಿಚ್ಚ ಸುದೀಪ್ ರವರದ್ದು. ಇನ್ನು ಸಂಭವನ ವಿಚಾರದಲ್ಲಿ ಕೂಡ ಆ ಕಾಲದಲ್ಲಿ ಉಳಿದ ಎಲ್ಲ ಕನ್ನಡದ ನಟರಿಗಿಂತ ಕಿಚ್ಚ ಸುದೀಪ್(Kiccha Sudeep) ರವರು ಸಾಕಷ್ಟು ಮುಂದೆ ಇದ್ದರು. ಕೇವಲ ನಾಯಕರಾಗಿ ಮಾತ್ರವಲ್ಲ ಸಹಕಲಾವಿದ ಸಿಂಗರ್ ನಿರ್ಮಾಪಕ ನಿರ್ದೇಶಕನಾಗಿ ಕೂಡ ಕಿಚ್ಚ ಸುದೀಪ್ ರವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದಕ್ಕಾಗಿಯೇ ಕಿಚ್ಚ ಸುದೀಪ್ ರವರನ್ನು ಕನ್ನಡ ಚಿತ್ರರಂಗದ ಪರಿಪಕ್ವ ಹಾಗೂ ಸವ್ಯಸಾಚಿ ಪ್ರತಿಭೆ ಎಂಬುದಾಗಿ ಕರೆಯಲಾಗುತ್ತದೆ. ಏನು ಕಿಚ್ಚ ಸುದೀಪ್ ರವರ ನಂತರ ಕಿಚ್ಚ ಸುದೀಪ್ ರವರ ಕುಟುಂಬದಿಂದ ಮತ್ತೊಂದು ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದೆ ಎಂಬುದನ್ನು ನೀವು ನೆನಪಿಸಿಕೊಳ್ಳಬೇಕು. ನಾವು ಅವರ ಮಗಳ ಬಗ್ಗೆ ಮಾತನಾಡುತ್ತಿಲ್ಲ ಬದಲಾಗಿ ಅವರ ಸಹೋದರಿಯ ಮಗ ಅಂದರೆ ಅವರ ಅಳಿಯನ ಬಗ್ಗೆ ಮಾತನಾಡಲು ಹೊರಟಿದ್ದೇವೆ.
ಹೌದು ಸಂಚಿತ್ ಸಂಜೀವ್(Sanchit Sanjeev) ರವರು ಕಿಚ್ಚ ಸುದೀಪ್ ರವರ ಹಾದಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಬರಲು ಸಾಕಷ್ಟು ತಯಾರಿಗಳನ್ನು ನಡೆಸಿಕೊಂಡಿದ್ದಾರೆ. ಈಗಾಗಲೇ ಕಥೆ ಫೈನಲೈಸ್ ಆಗಬೇಕಾಗಿದ್ದು ಸದ್ಯಕ್ಕೆ ಸಂಚಿ ತಯಾರಿಯಲ್ಲಿ ತೊಡಗಿಕೊಂಡಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.