Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಸಮಯಗಳಿಂದಲೂ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇತ್ತು. ಈಗಾಗಲೇ ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಕಿಚ್ಚ ಸುದೀಪ್(Kiccha Sudeep) ರವರು ಸಾಕಷ್ಟು ಮಾಹಿತಿಗಳನ್ನು ಕೂಡ ನೀಡಿದ್ದಾರೆ. ಹೀಗಿದ್ದರೂ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿಗಳು ಇನ್ನೂ ಕೂಡ ತಿಳಿದುಬಂದಿಲ್ಲ.
ಸಿನಿಮಾದ ನಿರ್ದೇಶಕ ಯಾರು ಎನ್ನುವುದು ಕೂಡ ಸಾಕಷ್ಟು ಗುಪ್ತವಾಗಿ ಇಟ್ಟಿದ್ದು ಸಾಕಷ್ಟು ಸುದ್ದಿಗಳ ಪ್ರಕಾರ ಇದು ಹೊಸ ಸಿನಿಮಾ ನಿರ್ದೇಶಕನ ಫಿಲಂ ಎಂದು ಹೇಳಲಾಗಿದೆ. ನಿರ್ದೇಶಕ ಯಾರು ಇರಲಿ, ನಾಯಕನಟನಾಗಿ ಕಿಚ್ಚ ಸುದೀಪ್ ಇರುವಾಗ ಖಂಡಿತವಾಗಿ ಆ ಸಿನಿಮಾದ ನಿರೀಕ್ಷೆ 100 ಪಟ್ಟು ಮೇಲೆ ಹೋಗುತ್ತದೆ. ಇನ್ನು ಇತ್ತೀಚಿಗಷ್ಟೇ ಸಿನಿಮಾದ ಬಗ್ಗೆ ಮತ್ತೊಂದು ಬಂಪರ್ ನ್ಯೂಸ್ ಅನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ಹೌದು ಸಿನಿಮಾದ ಟೈಟಲ್ ಅನ್ನು ಸದ್ಯಕ್ಕೆ ಕಿಚ್ಚನ 46ನೇ ಸಿನಿಮಾ ಆಗಿರುವ ಕಾರಣಕ್ಕಾಗಿ Kiccha46 ಎಂಬುದಾಗಿ ಕರೆಯಲಾಗುತ್ತಿದ್ದು ಈ ಸಿನಿಮಾದ ಅಧಿಕೃತ ಟೀಸರ್ ಇದೇ ಜುಲೈ 2ಕ್ಕೆ ಬಿಡುಗಡೆಯಾಗಲಿದೆ ಎನ್ನುವುದಾಗಿ ಅಧಿಕೃತವಾಗಿ ಕಿಚ್ಚ ಸುದೀಪ್(Kiccha Sudeep) ರವರೆ ಖುದ್ದಾಗಿ ಹೇಳಿದ್ದಾರೆ. ಇದರ ಮೂಲಕ ಅಭಿಮಾನಿಗಳಲ್ಲಿ ಸಂತೋಷದ ಸಂಭ್ರಮ ಹೆಚ್ಚಾಗಿದೆ ಎಂದು ಹೇಳಬಹುದು.
ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ಸುದೀಪ್ ರವರು ಯಾವುದೇ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿರಲಿಲ್ಲ ಹಾಗೂ ಅವರ ಮುಂದಿನ ಸಿನಿಮಾಗಳ ಬಗ್ಗೆ ಚಿಕ್ಕ ಸುಳಿವು ಕೂಡ ಕನ್ನಡದ ಪ್ರೇಕ್ಷಕರಿಗೆ ಇರಲಿಲ್ಲ. ಆದರೆ ಈಗ ಈ ಅಧಿಕೃತ ಮಾಹಿತಿ ಹೊರಬಂದಿರುವುದು ಸಾಕಷ್ಟು ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.