Kiccha Sudeep ಕೊನೆಗೂ ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಬಿದ್ದಪ್ಪ(Aviva Bidapa) ನಡುವಿನ ವಿವಾಹ ಮಹೋತ್ಸವ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಸಂಭ್ರಮದಿಂದ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ.
ಇನ್ನು ಈ ಮದುವೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದ ಹಲವಾರು ಗಣ್ಯಾತಿಗಣ್ಯರು ಕೂಡ ಆಗಮಿಸಿದ್ದು ರಜನಿಕಾಂತ್(Rajinikanth) ಅವರಿಂದ ಹಿಡಿದು ತೆಲುಗು ನಟ ಮೋಹನ್ ಬಾಬು ಅವರವರೆಗೂ ಕೂಡ ಎಲ್ಲರೂ ಬಂದಿದ್ದಾರೆ.
ಇನ್ನು ಅಂಬರೀಶ್ ಕುಟುಂಬದ ಅತ್ಯಂತ ಆಪ್ತರಲಿ ಒಬ್ಬರಾಗಿರುವಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕೂಡ ಈ ಮದುವೆಗೆ ಆಗಮಿಸಿ ನವ ವಧು-ವರರಿಗೆ ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ ರವರು ಉಡುಗೊರೆ ರೂಪದಲ್ಲಿ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಕುತ್ತಿಗೆ ಚಿನ್ನದ ಸರವನ್ನು ಕೂಡ ಹಾಕಿದ್ದಾರೆ.
ಇನ್ನು ಕಿಚ್ಚ ಸುದೀಪ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಂಬರೀಶ್ ಕುಟುಂಬ ಹಾಗೂ ಸುಮಲತಾ ಅಂಬರೀಶ್(Sunalatha Ambareesh) ಅವರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಮದುವೆ ದಿನದಂದು ಅಭಿಷೇಕ್ ಅಂಬರೀಶ್ ಅವರ ಕುತ್ತಿಗೆಗೆ ಭರ್ಜರಿ 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನು ಹಾಕಿದ್ದಾರೆ. ಕಿಚ್ಚ ಸುದೀಪ್ ರವರ ಈ ಗುಣ ಎಲ್ಲರಿಗೂ ಮೆಚ್ಚುಗೆಯನ್ನು ತಂದಿದ್ದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ