Kiccha Sudeep: ಆರೋಪ ಮಾಡಿದ್ದ ನಿರ್ಮಾಪಕನ ವಿರುದ್ಧ ಕಿಚ್ಚ ಸುದೀಪ್ ಮಾಡಿದ್ದೇನು ಗೊತ್ತಾ?

Kiccha Sudeep ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಅದರ ಬೆನ್ನಲ್ಲೇ ಮತ್ತೊಂದು ಕಾಂಟ್ರವರ್ಸಿ ಕೂಡ ಅವರ ಬಂದಿತ್ತು.

ಹೌದು ಕಿಚ್ಚ ಸುದೀಪ್ ರವರು ನಿರ್ಮಾಪಕ ಆಗಿರುವಂತಹ ಎಂ ಎನ್ ಕುಮಾರ್(MN Kumar) ಅವರ ಬಳಿ ಸಿನಿಮಾ ಮಾಡುತ್ತೇನೆ ಎನ್ನುವುದಾಗಿ ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದರು ಎಂಬುದಾಗಿ ಕುಮಾರ್ ಅವರು ಆರೋಪ ಮಾಡಿದ್ದರು. ಇದೇ ಕಾರಣಕ್ಕಾಗಿ ನಂದ ಕಿಶೋರ್ ಅವರಿಗೂ ಕೂಡ ಕಥೆ ಬರೆಯೋದಕ್ಕೆ ಹಣವನ್ನು ನೀಡಿದರು ಎಂಬುದಾಗಿ ಕೂಡ ಹೇಳಿದ್ದರು.

ಇದರ ಬಗ್ಗೆ ಮಾತನಾಡ್ತಾ ನನ್ನ ಕಿಶೋರ್ ಅವರು ನಾನು ಸಿನಿಮಾಗಾಗಿ ಹಣ ಪಡೆದಿಲ್ಲ ಆದರೆ ನನ್ನ ಸ್ವಂತ ಕಷ್ಟಕ್ಕಾಗಿ ಅವರು ಹಣದ ಸಹಾಯ ಮಾಡಿದ್ದಾರೆ ಎಂಬುದಾಗಿ ಒಪ್ಪಿಕೊಂಡಿದ್ದರು. ಬೆನ್ನಲ್ಲೇ ಕಿಚ್ಚ ಸುದೀಪ್ ರವರು ಈಗ ಮಾಡಿರುವ ಕೆಲಸ ನೋಡಿ ಪ್ರತಿಯೊಬ್ಬರೂ ಕೂಡ ಬೆಕ್ಕಸ ಬೆರಗಾಗಿದ್ದಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ರವರು ಮಾಡಿರುವ ಕೆಲಸ ಏನೆಂದು ತಿಳಿಯೋಣ ಬನ್ನಿ.

ಈ ರೀತಿಯ ಹೇಳಿಕೆ ನೀಡುವ ಮೂಲಕ ನನ್ನ ವಿರುದ್ಧ ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಮಾನಹರಣ ಮಾಡುವ ಕೆಲಸ ನಡೆದಿದೆ ಎಂಬುದಾಗಿ ಕಿಚ್ಚ ಸುದೀಪ್ ರವರು ತಮ್ಮ ವಕೀಲರ ಮೂಲಕ 10 ಕೋಟಿ ರೂಪಾಯಿಗಳ ಮಾನ ನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment