Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ನಾಯಕ ನಟನಾಗಿ ಹಾಗೂ ಕಲಾವಿದನಾಗಿ ಸಾಕಷ್ಟು ಸಾಧನೆಗಳನ್ನು ಮಾಡಿರುವಂತಹ ಕಲಾವಿದ.
ಇನ್ನು ಕಿಚ್ಚ ಸುದೀಪ್(Kiccha Sudeep) ರವರ ಸ್ಪೂರ್ತಿ ಯಾರು ಎಂಬುದಾಗಿ ಯಾವುದೇ ಭಾಷೆಯಲ್ಲಿ ಕೇಳಿದರೂ ಕೂಡ ಅವರು ನೀಡುವಂತಹ ಒಂದೇ ಒಂದು ಉತ್ತರ ಕನ್ನಡ ಚಿತ್ರರಂಗದ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ರವರೆ ನನ್ನ ಸ್ಪೂರ್ತಿ ಹಾಗೂ ನನ್ನ ನೆಚ್ಚಿನ ನಾಯಕ ನಟ ಎಂಬುದಾಗಿ.
ಇನ್ನು ವಿಷ್ಣುವರ್ಧನ್ ಅರವರು ಹಾಡಿರುವಂತಹ ಒಂದು ಹಾಡು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಇಂದಿಗೂ ಕೂಡ ಫೇವರಿಟ್ ಹಾಗೂ ಸಾಕಷ್ಟು ಸಂದರ್ಭದಲ್ಲಿ ಅವರು ವೇದಿಕೆ ಮೇಲೆ ಆ ಹಾಡನ್ನು ಹಾಡಿ ವಿಷ್ಣುವರ್ಧನ್ ರವರ ಮೇಲಿರುವಂತಹ ತಮ್ಮ ಪ್ರೀತಿ ಅಭಿಮಾನ ಹಾಗೂ ಗೌರವವನ್ನು ಕೂಡ ಸಾಬೀತುಪಡಿಸಿದ್ದಾರೆ. ಹಾಗಿದ್ದರೆ ಆ ಹಾಡು ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರೇ ಸಾಕಷ್ಟು ಬಾರಿ ವೇದಿಕೆಗಳಲ್ಲಿ ನೀವು ನೋಡಿರಬಹುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ತುತ್ತು ಅನ್ನ ತಿನ್ನೋಕೆ ಹಾಡನ್ನು ಸಾಕಷ್ಟು ಬಾರಿ ಹಾಡಿದ್ದು ಇದು ತಮ್ಮ ಫೇವರೆಟ್ ಹಾಡು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಕಿಚ್ಚ ಹಾಗೂ ವಿಷ್ಣು ನಡುವಿನ ಈ ಬಾಂಧವ್ಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.