Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ವಿರುದ್ಧ ಈಗಾಗಲೇ ಕನ್ನಡ ಚಿತ್ರರಂಗದ ಖ್ಯಾತ ಪ್ರೊಡ್ಯೂಸರ್ ಗಳಾಗಿರುವಂತಹ ಎಂಎನ್ ಕುಮಾರ್(MN Kumar) ಹಾಗೂ ರೆಹಮಾನ್(Rehman) ಇಬ್ಬರೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸತೇನಲ್ಲ.
ಕಿಚ್ಚ ಸುದೀಪ್(Kiccha Sudeep) ರವರ ಪ್ರತಿಯೊಂದು ಸಿನಿಮಾಗಳ ಬಿಡುಗಡೆ ಅಥವಾ ವಿಶೇಷ ಸಂದರ್ಭಗಳಲ್ಲಿ ಈ ರೀತಿ ಆಪಾದನೆ ಮಾಡೋದು ಸರ್ವೇಸಾಮಾನ್ಯವಾಗಿದೆ. ಈಗ ಇದು ಮತ್ತೊಮ್ಮೆ ಆಗಿದೆ ಎಂದು ಹೇಳಬಹುದಾಗಿದೆ. ಆದರೆ ಈ ರೀತಿ ಪದೇಪದೇ ಮಾಡ್ತಿರೋದು ನಿಜಕ್ಕು ವಿಷಾದನೀಯ ಆಗಿದೆ.
ಹೌದು ಗೆಳೆಯರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಅಭಿಮಾನಿಗಳು ಇದಕ್ಕೆ ಖಾರವಾದ ಪ್ರತಿಕ್ರಿಯೆಯನ್ನೇ ರಾಜ್ಯಾದ್ಯಂತ ನೀಡುತ್ತಿದ್ದಾರೆ. ಕಿಚ್ಚ ಫ್ಯಾನ್ಸ್(Kiccha Fans) ರಾಜ್ಯದ್ಯಂತ ಆರೋಪ ಮಾಡಿರುವಂತಹ ನಿರ್ಮಾಪಕರ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಎಚ್ಚರಿಕೆಯ ಕರೆಗಂಟೆಯನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಈ ಕುರಿತಂತೆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿವೆ.
ವಾಣಿಜ್ಯ ಮಂಡಳಿಗೆ ಬಂದು ಆ ನಿರ್ಮಾಪಕರು ಕಿಚ್ಚ ಸುದೀಪ್ ರವರಿಗೆ ಕ್ಷಮೆಯನ್ನು ಕೇಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಅದಾದ ನಂತರ ಕಿಚ್ಚ ಸುದೀಪ್ ರವರು ಹಾಗೂ ನಿರ್ಮಾಪಕರು ಸೇರಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಆದರೆ ಕಿಚ್ಚ ಸುದೀಪ್ ರವರ ವಿರುದ್ಧ ಅವರು ಮಾಡಿರುವಂತಹ ಆರೋಪಗಳು ಅರ್ಥಹೀನವಾಗಿದೆ ಹಾಗೂ ಇದು ಅವರ ಮರ್ಯಾದ ಹರಣವಾಗಿದೆ ಎಂಬುದಾಗಿ ಹೇಳಿದ್ದಾರೆ.