Kiccha Sudeep: ಎಂ ಎನ್ ಕುಮಾರ್ ಆಯ್ತು ಈಗ ಮತ್ತೊಬ್ಬ ನಿರ್ಮಾಪಕನಿಂದ ಕಿಚ್ಚ ಸುದೀಪ್ ವಿರುದ್ಧ ಆರೋಪ.

Kiccha Sudeep ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ರವರ ವಿರುದ್ಧ ನಿರ್ಮಾಪಕ ಆಗಿರುವಂತಹ ಎಂ ಎನ್ ಕುಮಾರ್(MN Kumar) ರವರು ದೊಡ್ಡ ಮಟ್ಟದ ಆರೋಪ ಮಾಡಿ ನಾನು ಕಿಚ್ಚ ಸುದೀಪ್ ರವರಿಗೆ ಅಡ್ವಾನ್ಸ್ ಹಣವನ್ನು ನೀಡಿದ್ದೇನೆ ಅವರು ನನಗೆ ಸಿನಿಮಾ ಕೂಡ ಮಾಡ್ತಿಲ್ಲ ಈ ಕಡೆ ಹಣ ಕೂಡ ನೀಡುತ್ತಿಲ್ಲ ಎಂಬುದಾಗಿ ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದರು.

ಎಲ್ಲಕ್ಕಿಂತ ಪ್ರಮುಖವಾಗಿ ಕಿಚ್ಚ ಸುದೀಪ್(Kiccha Sudeep) ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಅವರ ಪರವಾಗಿ ಜಾಕ್ ಮಂಜು ಅವರು ಸಧಿಗೋಷ್ಠಿ ಕರೆದು ಪ್ರತಿಕ್ರಿಯೆ ನೀಡಿದ್ದರು. ಕಿಚ್ಚ ಸುದೀಪ್ ರವರು ಕೂಡ ಎಂ ಎನ್ ಕುಮಾರ್ ಅವರ ವಿರುದ್ಧ 10 ಕೋಟಿ ರೂಪಾಯಿ ಮೌಲ್ಯದ ಮಾನ ನಷ್ಟ ಮುಖದ್ದಮೆಯನ್ನು ಹೂಡಿದರು. ಇದು ಈಗ ಚಿತ್ರರಂಗದಲ್ಲಿ ಸಾಕಷ್ಟು ಮತ್ತೂ ಹೆಚ್ಚಿನ ಒಳ ಜಗಳಕ್ಕೆ ಕಾರಣವಾಗಿದೆ. ಈ ಉರಿಯುವ ಬೆಂಕಿಗೆ ಮತ್ತೊಂದು ತುಪ್ಪ ಸುರಿದಿದೆ.

ಅದು ಮಾತನಾಡುತ್ತಿರುವುದು ಕಿಚ್ಚ ಸುದೀಪ್ ರವರ ಹುಚ್ಚ ಸಿನಿಮಾದ ನಿರ್ಮಾಪಕರಾಗಿರುವಂತಹ ರೆಹಮಾನ್(Rehman) ರವರ ಬಗ್ಗೆ. ಕಿಚ್ಚ ಸುದೀಪ್ ರವರ ಮೊದಲ ಸೂಪರ್ ಹಿಟ್ ಸಿನಿಮಾ ವನ್ನು ನಿರ್ಮಾಣ ಮಾಡಿರುವಂತಹ ನಿರ್ಮಾಪಕರು ಇವರು. ಆದರೆ ಈಗ ಇವರೇ ಕಿಚ್ಚ ಸುದೀಪ್ ರವರ ವಿರುದ್ಧ 35 ಲಕ್ಷ ರೂಪಾಯಿಗಳ ಬೇಡಿಕೆಯನ್ನು ಇಟ್ಟಿದ್ದಾರೆ.

ಹೌದು ಗೆಳೆಯರೇ ಕಿಚ್ಚ ಸುದೀಪ್ ರವರನ್ನು ನಂಬಿಕೊಂಡು ನಾನು ಒಂದು ಸಿನಿಮಾದ ರಿಮೇಕ್ ರೈಟ್ಸ್ ಅನ್ನು ಪಡೆದುಕೊಂಡಿದ್ದೆ ಆದರೆ ಕಿಚ್ಚ ಸುದೀಪ್ ರವರು ಆ ಸಿನಿಮಾವನ್ನು ಮಾಡಲೇ ಇಲ್ಲ ಎಂಬುದಾಗಿ ರೆಹಮಾನ್ ರವರು ಹೇಳಿದ್ದಾರೆ. ಒಂದೊಂದೇ ನಿರ್ಮಾಪಕರು ಈಗ ಕಿಚ್ಚ ಸುದೀಪ್ ರವರ ವಿರುದ್ಧ ಬಂಡೆದ್ದಿದ್ದು ನಿಜಕ್ಕೂ ಕೂಡ ಬೇಸರದ ಸಂಗತಿಯಾಗಿದ್ದು ಇದು ಮುಂದಿನ ದಿನಗಳಲ್ಲಿ ಯಾವ ಹಂತವನ್ನು ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment