Kiccha Sudeep ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟನೆಯ ಹಾಗೂ ವಿಜಯ್ ಕಾರ್ತಿಕ ಎನ್ನುವಂತಹ ಹೊಸ ತಮಿಳು ನಿರ್ದೇಶಕನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಿಚ್ಚ 46 ಸಿನಿಮಾದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು ಪಂಚಭಾಷೆಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ಇದರ ಬೆನ್ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮೇಲೆ ಈಗ ಕಾಂಟ್ರವರ್ಸಿಯ ಸುರಿಮಳೆ ಪ್ರಾರಂಭವಾಗಿದೆ. ಮೂಲಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ, ಎಂಟು ವರ್ಷಗಳ ಹಿಂದೆ ನಿರ್ಮಾಪಕ ಎಂಎನ್ ಕುಮಾರ್(MN Kumar) ಅವರ ಬಳಿ ಸಿನಿಮಾ ಮಾಡುವ ಕುರಿತಂತೆ ಕಿಚ್ಚ ಸುದೀಪ್ ರವರು ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದರು ಎಂಬುದಾಗಿ ತಿಳಿದುಬಂದಿದೆ. ಇಷ್ಟೊಂದು ವರ್ಷಗಳ ಕಾಲ ನಂದ ಕಿಶೋರ್(Nanda Kishore) ಅವರು ಈ ಸಿನಿಮಾಗೆ ನಿರ್ದೇಶನ ಮಾಡಬೇಕು ಎನ್ನುವ ಕಾರಣಕ್ಕಾಗಿ ಅವರಿಗೂ ಕೂಡ ಅಡ್ವಾನ್ಸ್ ಹಣವನ್ನು ನೀಡಲಾಗಿತ್ತು ಎಂಬುದಾಗಿ ನಿರ್ಮಾಪಕರು ಆರೋಪಿಸಿದ್ದಾರೆ.
ಕಿಚ್ಚ ಸುದೀಪ್ ರವರ ಬಳಿ ಸಾಕಷ್ಟು ಬಾರಿ ಹೋಗಿ ಬಂದ ನಂತರವೂ ಹಾಗೂ ಇತ್ತೀಚಿನ ದಿನಗಳಲ್ಲಿ ಅವರು ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಈಗ ಎಂ ಎನ್ ಕುಮಾರ್ ವಾಣಿಜ್ಯ ಮಂಡಳಿಗೆ ಬಂದು ಕಿಚ್ಚ ಸುದೀಪ್ ರವರಲ್ಲಿ ನನ್ನ ಹಣವನ್ನು ನನಗೆ ವಾಪಸು ಮಾಡಿ ಎಂಬುದಾಗಿ ಕೇಳಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.