Kiccha Sudeep: ಕಿಚ್ಚ ಸುದೀಪ್ ರವರ ವಿರುದ್ಧ ನಿರ್ಮಾಪಕರು ದಂಗೆ ಎದ್ದಿರುವುದಕ್ಕೆ ಇವರೇ ಕಾರಣ.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಸಿನಿಮಾ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಕಾಂಟ್ರವರ್ಸಿಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಕಿಚ್ಚ ಸುದೀಪ್(Kiccha Sudeep) ರವರ ಹೊಸ ಸಿನಿಮಾದ ಅನೌನ್ಸ್ಮೆಂಟ್ ಆದಾಗ ಈ ರೀತಿಯ ಕಾಂಟ್ರವರ್ಸಿ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ.

ಕಿಚ್ಚ ಸುದೀಪ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸಾಕಷ್ಟು ಬೇಡಿಕೆ ಇದ್ದು ತಮ್ಮ ಮುಂದಿನ ಸಿನಿಮಾವನ್ನು ಕೂಡ ತಮಿಳು ನಿರ್ಮಾಪಕರ ಜೊತೆಗೆ ಕಿಚ್ಚ ಸುದೀಪ್ ಮಾಡುತ್ತಿದ್ದಾರೆ. ಇನ್ನು ಇದೇ ವಿಚಾರ ಕನ್ನಡದ ಕೆಲವು ಪ್ರೊಡ್ಯೂಸರ್ ಗಳಿಗೆ ಕಸಿಬಿಸಿ ಉಂಟುಮಾಡುವಂತೆ ಮಾಡಿರುವುದು ಹಾಗೂ ಇನ್ನು ಮುಂದೆ ಕಿಚ್ಚ ಸುದೀಪ್ ರವರ ಕಾಲ್ ಶೀಟ್ ನಮಗೆ ಸಿಗುವುದಿಲ್ಲ ಎನ್ನುವಂತಹ ಕಳವಳವನ್ನು ವ್ಯಕ್ತಪಡಿಸುವಂತೆ ಮಾಡಿರುವುದು.

ಕನ್ನಡ ಚಿತ್ರರಂಗದಲ್ಲಿ ಈ ರೀತಿ ಕಿಚ್ಚ ಸುದೀಪ್ ರವರ ವಿರುದ್ಧ ಎಂಎನ್ ಕುಮಾರ್(MN Kumar) ಹಾಗೂ ರೆಹಮಾನ್ ಸೇರಿದಂತೆ ಸಾಕಷ್ಟು ನಿರ್ಮಾಪಕರು ದಂಗೆ ಎದ್ದಿರುವುದಕ್ಕೆ ಕಾರಣ ಕಿಚ್ಚ ಸುದೀಪ್ ರವರ ಸಿನಿಮಾವನ್ನು ಇತ್ತೀಚಿಗೆ ನಿರ್ಮಾಣ ಮಾಡಿರುವಂತಹ ನಿರ್ಮಾಪಕರು ಎಂಬುದಾಗಿ ತಿಳಿದು ಬಂದಿದೆ.

ಹೌದು ನಾವ್ ಮಾತನಾಡುತ್ತಿರುವುದು ನಿರ್ಮಪಕ ಸೂರಪ್ಪ ಬಾಬು ಅವರ ಬಗ್ಗೆ. ಸೂರಪ್ಪ ಬಾಬು ರವರು ನಿರ್ಮಾಪಕನಾಗಿ ಕಾಣಿಸಿಕೊಂಡಿದ್ದರು ಕೂಡ ಕಿಚ್ಚ ಸುದೀಪ್ ರವರ ವಿರುದ್ಧ ನಿರ್ಮಾಪಕರಲ್ಲ ಸೇರಿ ಈ ರೀತಿ ಮಾಡುತ್ತಿರುವ ಆಪಾದನೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಅವರೇ ಎಂಬುದಾಗಿ ತಿಳಿದು ಬಂದಿದ್ದು ಇದರ ಕುರಿತಂತೆ ವೀರಕಪುತ್ರ ಶ್ರೀನಿವಾಸ್ ರವರು ಕೂಡ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment