Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಚಿತ್ರರಂಗದ ಸಾಕಷ್ಟು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಗಳ ಜೊತೆಗೆ ಸಿನಿಮಾಗಳನ್ನು ಮಾಡಿದ್ದಾರೆ. ಕಿಚ್ಚ ಸುದೀಪ್ ರವರ ಬೇಡಿಕೆ ಹೆಚ್ಚಾಗುತ್ತಿರುವುದು ಕೂಡ ಇದು ಒಂದು ಕಾರಣ ಎಂದು ಹೇಳಬಹುದಾಗಿದೆ. ಒಂದು ಸಮಯದಲ್ಲಿ ನಮ್ಮ ಕನ್ನಡದಿಂದ ಪರಭಾಷೆಗಳಿಗೆ ಹೋಗಿ ಕನ್ನಡ ಕಲಾವಿದರ ಗತ್ತನ್ನು ಸಾಬೀತುಪಡಿಸಿದ ಮೊದಲಿಗರಲ್ಲಿ ಕಿಚ್ಚ ಸುದೀಪ್ ಕಾಣಿಸಿ ಕೊಳ್ಳುತ್ತಾರೆ.
ಈಗ ಅದೇ ರೀತಿ ಪರಭಾಷೆಗಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗದಲ್ಲೇ ಕ್ವಾಲಿಟಿ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡದ ಪ್ರೊಡಕ್ಷನ್ ಹೌಸ್‌ಗಳ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಿರುವುದು ಹೊಂಬಾಳೆ ಫಿಲಂಸ್(Hombale Films) ಎಂದು ಹೇಳಬಹುದಾಗಿದೆ. ಹೌದು ಹೊಂಬಾಳೆ ಫಿಲಂಸ್ ಸಂಸ್ಥೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಜಿಎಫ್ ಸೀರೀಸ್ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನೀಡಿದೆ.
ಇನ್ನು ಸಾಕಷ್ಟು ದಿನಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ವಿಜಯ್ ಕಿರಗಂದೂರು(Vijay Kiragandur) ರವರ ಒಡೆತನದಲ್ಲಿರುವ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಒಂದು ಬಿಗ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸಮಯಗಳಿಂದಲೂ ಕೂಡ ಕೇಳಿ ಬರುತ್ತದೆ. ಸುಖ ಸುಮ್ಮನೆ ಈ ಸುದ್ದಿ ಹುಟ್ಟಿಕೊಂಡಿಲ್ಲ ಕಿಚ್ಚ ಸುದೀಪ್ ರವರೆ ಈ ಸುದ್ದಿ ಹುಟ್ಟು ಹಾಕುವುದಕ್ಕೆ ಕಾರಣವಾಗಿದ್ದಾರೆ ಎಂದು ಹೇಳಬಹುದು.
ಹೌದು ಮಿತ್ರರೇ ಇತ್ತೀಚಿನ ದಿನಗಳಲ್ಲಿ ಟ್ವಿಟರ್ ನಲ್ಲಿ ಸಲಾರ್(Salaar) ಸಿನಿಮಾ ಸೇರಿದಂತೆ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಾಕಷ್ಟು ಸಿನಿಮಾಗಳ ಬಗ್ಗೆ ಕಿಚ್ಚ ಸುದೀಪ್ ರವರು ನಿಯಮಿತವಾಗಿ ಟ್ವೀಟ್ ಮಾಡಿಕೊಂಡು ಬರುತ್ತಿದ್ದಾರೆ. ಇದು ಅವರು ಹೊಂಬಾಳೆ ಫಿಲಂ ನಿರ್ಮಾಣದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹುಟ್ಟು ಹಾಕುವುದಕ್ಕೆ ಕಾರಣವಾಗಿದ್ದಾರೆ.