ಸ್ನೇಹಿತರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರು ಇಂದು (ಸೆಪ್ಟೆಂಬರ್ ಎರಡನೇ ತಾರೀಖಿನಂದು) ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು(Birthday) ಅಭಿಮಾನಿಗಳೊಡನೆ ಸೇರಿ ಬಹಳ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ಬಳಿಕ ತಮ್ಮ ಬರ್ತಡೇ ಪ್ರಯುಕ್ತ ಅಭಿಮಾನಿಗಳನ್ನು ಭೇಟಿ ಮಾಡುವ ಅಧಿಕೃತ ಮಾಹಿತಿಯನ್ನು ಕಿಚ್ಚ ಸುದೀಪ್(Kiccha Sudeep) ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹೊರಹಾಕಿದ್ದಾರೆ.
ತಮ್ಮ ಹುಟ್ಟು ಹಬ್ಬದ ವಿಶೇಷ ದಿನದಂದು ನಂದಿ ಲಿಂಕ್ ರೋಡ್ನಲ್ಲಿ (Nandi links road) ಅಭಿಮಾನಿಗಳನ್ನು ಭೇಟಿ ಮಾಡಲಿರುವ ಮಾಹಿತಿಯನ್ನು ಹೊರಹಾಕಿದ ಬೆನ್ನಲ್ಲೇ ಕಿಚ್ಚ ಸುದೀಪ್ ಅವರಿಗೆ ವಿಶೇಷ ಉಡುಗೊರೆ ಹಾಗೂ ಸರ್ಪ್ರೈಸ್ ಗಳನ್ನು ನೀಡಲು ಅಭಿಮಾನಿಗಳು ಹಾಗೂ ಸಿನಿ ತಂಡ ಸಜ್ಜಾಗಿದ್ದಾರೆ. ಇದರೊಂದಿಗೆ ನಂದಿ ಲಿಂಕ್ಸ್ ರೋಡ್ನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳು ನಡೆಯಲಿದ್ದು,
ಕಿಚ್ಚನ ಹೆಸರಿನಲ್ಲಿ ಸೇವೆ-ದಾನ ಹೀಗೆ ಮಹತ್ವಪೂರ್ಣ ಕೆಲಸಗಳನ್ನು ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ. ಅಲ್ಲದೆ ಇಂದು ಕಿಚ್ಚನ ಪತ್ನಿ ಪ್ರಿಯಾ ಸುದೀಪ್(Priya Sudeep) ಅವರು ಕೂಡ ಅಭಿಮಾನಿಗಳ ಪರವಾಗಿ ಪತಿಗೆ ಅಚ್ಚರಿಯನ್ನುಂಟು ಮಾಡುವಂತಹ ಉಡುಗೊರೆ ಒಂದನ್ನು ನೀಡ ಹೊರಟಿದ್ದು, ಅದೇನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲರಾಗಿದ್ದರೆ. ಅಲ್ಲದೆ ವಿಕ್ರಾಂತ್ ರೋಣ(Vikranth Rona) ಚಿತ್ರದ ನಂತರ ಕಿಚ್ಚ ಸುದೀಪ್ ಅವರ ಸಿನಿಮಾದ ಯಾವುದೇ ಶೀರ್ಷಿಕೆ ಕೂಡ ಬಿಡುಗಡೆಯಾಗಿಲ್ಲ.
ಇಂದು ಸಿನಿ ತಂಡದ ವತಿಯಿಂದ ಕಿಚ್ಚನ 46ನೇ ಸಿನಿಮಾ ಯಾವುದು? ಎಂಬ ಅಧಿಕೃತ ಮಾಹಿತಿ ಹೊರ ಬೀಳಲಿದೆ ಹಾಗೂ ಕಿಚ್ಚ ಸುದೀಪ್ ಬರೋಬ್ಬರಿ 16 ವರ್ಷಗಳ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತರಿಸಲಿರುವ ಮಾಹಿತಿಯನ್ನು ಹೊರಹಾಕಲಿದ್ದಾರೆ. ಇದೆಲ್ಲದರ ಜೊತೆಗೆ ಅರಸು ಕ್ರೀಯೆಷನ್ಸ್(Arasu Creations) ಸಂಸ್ಥೆಯು ಕಿಚ್ಚ ಸುದೀಪ್ ಅವರ ಹೆಸರನ್ನು ಆಕಾಶದಲ್ಲಿ ಮಿನುಗುವ ನೈಜ ನಕ್ಷತ್ರ ಒಂದಕ್ಕೆ ಇಡುವ ಯೋಜನೆಯನ್ನು ಹೂಡಿದ್ದಾರೆ.
ಹೀಗೆ ಸಾಲು ಸಾಲು ವಿಶೇಷ ಸಿನಿಮಾಗಳು, ಅದ್ಭುತ ನಡುವಳಿಕೆ, ಕಾರ್ಯವೈಕರಿ, ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುತ್ತಾ ಇತರರಿಗೂ ಮಾರ್ಗದರ್ಶನ ನೀಡುತ್ತಿರುವಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.