Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನೆ ಸಿನಿಮಾ ಅಂದರೆ 46ನೇ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ಓಡಾಡುತ್ತಿವೆ. ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಬಗ್ಗೆ ಕಾತರರಾಗಿದ್ದಾರೆ ಯಾಕೆಂದರೆ ಸಾಕಷ್ಟು ಸಮಯದ ನಂತರ ಬ್ರೇಕ್ ತೆಗೆದುಕೊಂಡ ಮೇಲೆ ಕಿಚ್ಚ ಸುದೀಪ್(Kiccha Sudeep) ಮತ್ತೊಮ್ಮೆ ತಮ್ಮ ಸಿನಿಮಾದ ಮೂಲಕ ಸುದ್ದಿಯಲ್ಲಿದ್ದಾರೆ.
ಸಿನಿಮಾವನ್ನು ಕಬಾಲಿ(Kabali) ನಿರ್ಮಾಪಕರು ನಿರ್ಮಿಸುತ್ತಿದ್ದು ನಿರ್ದೇಶಕ ಕೂಡ ಹೊಸಬರಾಗಿದ್ದು ಸಿನಿಮಾದ ಕುರಿತಂತೆ ನಿರೀಕ್ಷೆಗಳು ಕೂಡ ವಿಭಿನ್ನವಾಗಿ ಈ ಬಾರಿ ಕಾಣುತ್ತಿದೆ. ಖಂಡಿತವಾಗಿ ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಬಗ್ಗೆ ನಿರೀಕ್ಷೆಯನ್ನು ಹೊಂದಿರಲು ಕಾರಣವೆಂದರೆ ಈ ಸಿನಿಮಾ ಕೂಡ ಪಂಚಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಆಗಿದೆ. ಖಂಡಿತವಾಗಿ ಸಿನಿಮಾ ಚೆನ್ನಾಗಿ ಮೂಡಿಬರುತ್ತದೆ ಅಥವಾ ಕಿಚ್ಚ ಸುದೀಪ್ ರವರ ಪರ್ಫಾರ್ಮೆನ್ಸ್ ಕೂಡ ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಸಿನಿಮಾದಲ್ಲಿ ಕಿಚ್ಚ ಸುದೀಪ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲವಿದೆ.
ಇಂದು ಅಂದರೆ ಜುಲೈ ಎರಡರಂದು ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಲಿದ್ದು ಸಿನಿಮಾದಲ್ಲಿ ಖಂಡಿತವಾಗಿ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುರುಹು ಸಿಗಲಿದೆ. ಆದರೆ ಮಾಧ್ಯಮ ಮೂಲಗಳ ಪ್ರಕಾರ ಕಿಚ್ಚ ಸುದೀಪ್ ರವರು ಈ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಸುದ್ದಿ.
ಪೊಲೀಸ್ ಪಾತ್ರದಲ್ಲಿ ಕಿಚ್ಚ ಸುದೀಪ್(Kiccha Sudeep) ರವರು ಬಂದಾಗಲೆಲ್ಲ ಸಿನಿಮಾ ಸೂಪರ್ ಹಿಟ್ ಆಗಿರುವುದನ್ನು ನಾವು ಈಗಾಗಲೇ ಅವರ ಕರಿಯರ್ ನಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಖಂಡಿತವಾಗಿ ಈ ಸಿನಿಮಾದ ಮೂಲಕ ದೊಡ್ಡ ಮಟ್ಟದ ಸಾಧನೆಯನ್ನು ಪಂಚವಾರ್ಷಿಕಗಳಲ್ಲಿ ಮಾಡಲಿದ್ದಾರೆ ಎನ್ನುವ ಅಭಿಮಾನಿಗಳ ನಂಬಿಕೆ ನಿಜವಾಗಲಿ ಎಂಬುದಾಗಿ ಹಾರಿಸೋಣ.