Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾದ ಬಗ್ಗೆ ಪ್ರತಿಯೊಬ್ಬರು ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಯಾಕೆಂದರೆ ವಿಕ್ರಾಂತ್ ರೋಣ(Vikrant Rona) ಟೆಕ್ನಿಕಲ್ ವಿಚಾರದಲ್ಲಿ ಕನ್ನಡ ಚಿತ್ರರಂಗದ ಬೇರೆ ಎಲ್ಲಾ ಸಿನಿಮಾಗಳಿಗಿಂತ ಸಖತ್ ಸೌಂಡ್ ಆಗಿತ್ತು.
ಇನ್ನು ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ಕಾಯುತ್ತಿದ್ದು ಕೊನೆಗೂ ಕಿಚ್ಚ ಸುದೀಪ್(Kiccha Sudeep) ರವರು ಕೆಲವು ಸಮಯಗಳ ಹಿಂದೆ ಅಷ್ಟೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ಚಿಕ್ಕ ತುಣುಕನ್ನು ಹೊರ ಹಾಕಿದ್ದರು. ಕಬಾಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕರೇ ಈ ಸಿನಿಮಾಗೂ ಕೂಡ ನಿರ್ಮಾಪಕರಾಗಿದ್ದಾರೆ.
ಇನ್ನು ತಮ್ಮ 46ನೇ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್(Kiccha Sudeep) ರವರು ಅಧಿಕೃತವಾಗಿ 27 ನೇ ತಾರೀಖಿನಂದು ಚಿಕ್ಕ ಟೀಸರ್ ತುಣುಕನ್ನು ಬಿಡುಗಡೆ ಮಾಡಲಿದ್ದೇವೆ ಎಂಬುದಾಗಿ ನಿನ್ನೆ ಅಷ್ಟೇ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಕಿಚ್ಚ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಿಚ್ಚನ ಮುಂದಿನ ಸಿನಿಮಾದ ಟೀಸರ್ ಅನ್ನು ನೋಡೋದಕ್ಕೆ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದು ಕೊನೆಗೂ ಈ ಅನೌನ್ಸ್ಮೆಂಟ್ ಆಗಿರುವುದು ಅವರಲ್ಲಿ ಸಂತೋಷವನ್ನು ತಂದಿದೆ.
ಈ ಸಿನಿಮಾಗೆ ಹೊಸ ನಿರ್ದೇಶಕ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವಂತಹ ಸುದ್ದಿ ಕೂಡ ಇದ್ದು ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಎಲ್ಲಾ ಮಾಹಿತಿಗಳು ಕೂಡ ಹೊರಬರಲು ಸಿನಿಮಾ ಪಡಿತರು ಮಾಹಿತಿಯನ್ನು ಹಂಚಿಕೊಂಡಿದ್ದು ಚಿತ್ರದ ಕುರಿತು ನಿರೀಕ್ಷೆ ಗಗನಕ್ಕೇರುತ್ತಿದೆ. ಈ ಸಿನಿಮಾದ ಬಗ್ಗೆ ನಿಮಗಿರುವಂತಹ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.