Kiccha 46 Teaser: ನಾನು ಮನುಷ್ಯನಲ್ಲ ರಾಕ್ಷಸ ಎಂದ ಕಿಚ್ಚ. ಅಭಿಮಾನಿಗಳಲ್ಲಿ ಫುಲ್ ಥ್ರಿಲ್.

Kiccha 46 Teaser ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಟೀಸರ್ ಗಾಗಿ ಕಾಯುತ್ತಿದ್ದ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಈಗ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ ಅದಕ್ಕೆ ಕಾರಣ ಆಗಿರೋದು ಕಿಚ್ಚ ಸುದೀಪ್(Kiccha Sudeep) ರವರ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿರುವುದು. ವಿಕ್ರಾಂತ್ ರೋಣನಾಗಿ ತೆರೆಯ ಮೇಲೆ ಬಂದಿದ್ದ ಕಿಚ್ಚ ಸುದೀಪ್ ರವರು ಮತ್ತೆ ದೊಡ್ಡ ಪರದೆ ಮೇಲೆ ಯಾವುದೇ ಸಿನಿಮಾಗಳ ಮೂಲಕವೂ ಕೂಡ ಕಾಣಿಸಿಕೊಂಡಿರಲಿಲ್ಲ.

ಅಭಿಮಾನಿಗಳಿಗೆ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದವರು ಇದರ ಕುರಿತಂತೆ ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದರು. ಯಾಕೆಂದರೆ ಕಿಚ್ಚನನ್ನು ಸದಾ ಕಾಲ ಪರದೆ ಮೇಲೆ ನೋಡುವುದೇ ಒಂದು ಹಬ್ಬದ ರೀತಿಯಲ್ಲಿ ಎಂದು ಅಭಿಮಾನಿಗಳು ಭಾವಿಸಿರುತ್ತಾರೆ. ತಮ್ಮ ನೆಚ್ಚಿನ ನಟ ಯಾವಾಗ ಮತ್ತೆ ದೊಡ್ಡಪ್ಪ ಇದೆ ಮೇಲೆ ಬರುತ್ತಾರೆ ಎಂಬುದಾಗಿ ಕಾಯುತ್ತಿದ್ದವರಿಗೆ ಖಂಡಿತ ಇದು ಸಖತ್ ಸುದ್ದಿಯಾಗಿದೆ.

ತಮಿಳುನಾ ಹೊಸ ನಿರ್ದೇಶಕ ಆಗಿರುವಂತಹ ವಿಜಯ್ ಕಾರ್ತಿಕ ಕಿಚ್ಚನ 46ನೇ(Kiccha 46) ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಸಿನಿಮಾವನ್ನು ಸೂಪರ್ ಆಗಿ ಮಾಡಲಿದ್ದಾರೆ ಎನ್ನುವಂತಹ ಭರವಸೆಯನ್ನು ಟೀಸರ್ ಮೂಲಕ ನೀಡಿದ್ದು ಈಗಾಗಲೇ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ರತಿಯೊಬ್ಬರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವಂತಹ ಟೀಸರ್ ಸಖತ್ ಮಾಸ್ ಆಗಿದ್ದು ಕಿಚ್ಚ ಸುದೀಪ್ ಕೂಡ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್(Kiccha Sudeep) ರವರ ಪಂಚ್ ಡೈಲಾಗ್ ಕೂಡ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment