Kiccha 46 ವಿಜಯ್ ಕಾರ್ತಿಕ್ ಎನ್ನುವ ಹೊಸ ತಮಿಳು ನಿರ್ದೇಶಕನ ನಿರ್ದೇಶನದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ 46ನೇ ಸಿನಿಮಾ ಮೂಡಿ ಬರುತ್ತಿದೆ. ಆರಂಭದಲ್ಲಿ ಯಾರೊಬ್ಬರೂ ಕೂಡ ಈ ಸಿನಿಮಾದ ಕುರಿತಂತೆ ಅಷ್ಟೊಂದು ತಿಳಿದಿರಲಿಲ್ಲ ಯಾಕೆಂದರೆ ಈ ಸಿನಿಮಾದ ಕುರಿತಂತೆ ಚಿತ್ರತಂಡ ವಾಗಲಿ ಕಿಚ್ಚ ಸುದೀಪ್(Kiccha Sudeep) ರವರಾಗಲಿ ಅಷ್ಟೊಂದು ಬಿಟ್ಟು ಕೊಟ್ಟಿರಲಿಲ್ಲ.
ಹೀಗಾಗಿ ಈ ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಅಷ್ಟೊಂದು ಕ್ರೇಜ್ ಕೂಡ ಇರಲಿಲ್ಲ. ಆದರೆ ಕಿಚ್ಚ 46 ಸಿನಿಮಾದ ಟೀಸರ್(Kiccha 46 Teaser) ಬಿಡುಗಡೆ ಆಗುತ್ತಿದ್ದಂತೆ ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಬಗ್ಗೆ ತಮ್ಮ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದು ಜಾಗತಿಕ ಮಟ್ಟದಲ್ಲಿ ಕೂಡ ಈ ಟೀಸರ್ ಸದ್ದು ಮಾಡುತ್ತಿದೆ.
ಇನ್ನು ಈ ಸಿನಿಮಾದ ಬಗ್ಗೆ ಪ್ರತಿಯೊಬ್ಬರು ಕೂಡ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದು ಇದರ ಬಜೆಟ್ ಎಷ್ಟು ಕೋಟಿ ಆಗಿರಬಹುದು ಎಂಬುದಾಗಿ ಕೂಡ ಚರ್ಚಿಸುತ್ತಿದ್ದಾರೆ. ಸಿನಿಮಾ ಮೂಲಗಳ ಪ್ರಕಾರ ಈ ಸಿನಿಮಾದ ಬಜೆಟ್ 50 ರಿಂದ 60 ಕೋಟಿ ರೂಪಾಯಿ ಇರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಹೊಸ ನಿರ್ದೇಶಕ ಇದ್ದರೂ ಕೂಡ ಕಿಚ್ಚ ಸುದೀಪ್ ರವರ ಜನಪ್ರಿಯತೆ ಹಾಗೂ ಟೀಸರ್ ನಲ್ಲಿ ಅವರು ಕಾಣಿಸಿಕೊಂಡ ರೀತಿಯಿಂದ ಸಿನಿಮಾದ ಟೀಸರ್ ಸಖತ್ ವೈರಲ್ ಆಗುತ್ತಿದೆ.
ಸಿನಿಮಾದಲ್ಲಿ ಕಿಚ್ಚ ಸುದೀಪ್ ರವರು ಬೇರೆಯದೇ ಅವತಾರದಲ್ಲಿ ಕಾಣಿಸಿಕೊಂಡಿದ್ದು ಟೀಸರ್ ಕೂಡ ಸಿನಿಮಾ ಯಾವ ರೀತಿ ಇರಬಹುದು ಎನ್ನುವ ರೀತಿಯಲ್ಲಿ ವೀಕ್ಷಕರಲ್ಲಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಧನ್ಯವಾದ ಬಗ್ಗೆ ನಿಮಗೆ ಇರುವಂತಹ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.