ಯಶ್ ಜನ್ಮ ದಿನಕ್ಕೂ ಮುಂಚೆ KGF -2 ಟೀಸರ್ ಲೀಕ್ ಮಾಡಿದಕ್ಕೆ ಯಶ್ ಏನಂದ್ರು ಗೊತ್ತೇ?

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಯಾಗದವರಿಲ್ಲ ಅವರ ಸಿನಿಮಾಗಳನ್ನು ನೋಡಿ ಮನಸೋಲದವರಿಲ್ಲ ಕೊರೋನ ವೈರಸ್ ಬರದೆ ಇದ್ದಿದ್ದರೆ ಈಗಾಗಲೇ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿರುತ್ತಿತ್ತು ವಿಳಂಬವಾದ ನಂತರ ಇದೀಗ ಟೀಸರ್ ಬಿಡುಗಡೆಯಾಗುತ್ತಿದೆ ಅದರ ಬಗ್ಗೆ ಯಶ್ ಅವರ ಮಾತುಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ರಾಕಿಂಗ್ ಸ್ಟಾರ್ ಅವರ ಅಭಿನಯದ ಕೆಜಿಎಫ್ 1 ಚಿತ್ರ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಬೇಕಿದೆ. ಕೊರೋನ ವೈರಸ್ ಬರದೆ ಇದ್ದಿದ್ದರೆ ಈಗಾಗಲೇ ಬಿಡುಗಡೆಯಾಗುತಿತ್ತು. ಕೆಜಿಎಫ್ 2 ಸಿನಿಮಾದ ಟೀಸರ್ ಬೆಳಗ್ಗೆ 10 ಗಂಟೆ ಸಮಯಕ್ಕೆ ಬಿಡುಗಡೆಯಾಗಬೇಕಿತ್ತು ಆದರೆ ಯಾರೋ ಕೆಜಿಎಫ್ 2 ಸಿನಿಮಾದ ಟೀಸರ್ ಅನ್ನು ಈಗಾಗಲೇ ಲೀಕ್ ಮಾಡಿದ್ದಾರೆ ಇದರಿಂದ ಎಲ್ಲರಿಗೂ ಸ್ವಲ್ಪ ಬೇಸರವಾಗಿದೆ. ಯಶ್ ಅವರು ಕೆಜಿಎಫ್ 2 ಸಿನಿಮಾ ಬಗ್ಗೆ ಮಾತನಾಡುತ್ತಾ ಹಾಗೆ ಲೀಕ್ ಮಾಡಿದವರಿಗೆ ಅದೇನ ಸಂತೋಷ ಸಿಗುತ್ತದೆಯೋ ಗೊತ್ತಿಲ್ಲ ಎಂದು ಹೇಳಿದರು. ಅವರು ಅಭಿಮಾನಿಗಳಿಗೆ ಬಹಳ ಆಸೆಯಿಂದ, ಸಂತೋಷದಿಂದ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಗೆ ಕಾಯುತ್ತಿದ್ದೀರಾ ಈಗ ಹೊಂಬಾಳೆ ಯುಟ್ಯೂಬ್ ಚಾನೆಲ್ ನಲ್ಲಿ ಜನವರಿ 7ರ ರಾತ್ರಿ ಬಿಡುಗಡೆ ಮಾಡಲಾಗಿದೆ ನೋಡಿ ಆನಂದಿಸಿ ಇದು ಕೇವಲ ಟೀಸರ್ ಅಷ್ಟೇ ಸಿನಿಮಾ ರಿಲೀಸ್ ಆಗಲಿದೆ. ಒಬ್ಬ ಕಲಾವಿದ ದೊಡ್ಡ ಮಟ್ಟಕ್ಕೆ ಬೆಳೆಯಲು ಅವನ ಅಭಿಮಾನಿಗಳು ಕಾರಣ. ಅಭಿಮಾನಿಗಳು ಕಲಾವಿದನನ್ನು ಬೆಳೆಸುತ್ತಾರೆ ಎಂದು ಯಶ್ ಹೇಳಿದರು.

ಯಶ್ ಅವರು ಅಭಿಮಾನಿಗಳು ನನಗೆ ಉನ್ನತ ಸ್ಥಾನ ಕೊಟ್ಟಿದ್ದೀರಾ ಹೀಗೆ ಇರಲಿ ಎಂದು ಹೇಳಿದರು. ಜನವರಿ 8 ರಂದು ಯಶ್ ಅವರ ಬರ್ಥಡೆ ಇರುವುದರಿಂದ ಅಭಿಮಾನಿಗಳನ್ನು ಭೇಟಿ ಆಗಬಹುದು ಎಂದು ಖುಷಿಯಲ್ಲಿದ್ದರು ಆದರೆ ಕೊರೋನ ವೈರಸ್ ಇರುವುದರಿಂದ ಹೆಚ್ಚು ಜನ ಸೇರುವಂತಿಲ್ಲ ಅಭಿಮಾನಿಗಳಿಗೆ ಏನಾದರೂ ತೊಂದರೆ ಆದರೆ ನನಗೆ ನೋವಾಗುತ್ತದೆ ಆದ್ದರಿಂದ ಅನಾವಶ್ಯಕವಾಗಿ ಸೇರುವುದಕ್ಕಿಂತ ನೀವು ಎಲ್ಲಿರುವಿರೋ ಅಲ್ಲಿಂದಲೇ ನನಗೆ ವಿಶ್ ಮಾಡಿ ಎಂದು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ನಿಮ್ಮ ನಿಮ್ಮ ಮನೆಯಿಂದಲೇ ನನಗೆ ಆಶೀರ್ವಾದ ಮಾಡಿ, ಸೋಶಿಯಲ್ ಮೀಡಿಯಾ ಮೂಲಕ ನನಗೆ ವಿಶ್ ಮಾಡಿ ಎಂದು ಹೇಳುವುದರೊಂದಿಗೆ ಜನವರಿ 8 ರಂದು ಕೆಜಿಎಫ್ 2 ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ ನೋಡಿ ಹರಸಿ ಎಂದು ಮತ್ತೊಮ್ಮೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಯಶ್ ಅವರ ಬರ್ಥಡೆ ದಿನ ಕೆಜಿಎಫ್ 2 ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿರುವುದು ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ ಖುಷಿಕೊಟ್ಟಿದೆ. ಯಶ್ ಅವರ ಕೆಜಿಎಫ್ 2 ಸಿನಿಮಾ ಹೆಚ್ಚಿನ ದಿನಗಳು ಓಡಲಿ ಯಶಸ್ಸನ್ನು ತರಲಿ ಎಂದು ಆಶಿಸೋಣ.

Leave a Comment