ಕೆಜಿಎಫ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರು 35 ರುಪಾಯಿಗೋಸ್ಕರ ಕಮ್ಮಾರನ ಕೆಲಸ ಮಾಡುತ್ತಿರೋದು ಯಾಕೆ ಗೊತ್ತಾ

ಕೆಜಿಎಫ್ ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಹೆಸರು ನೀವೆಲ್ಲರೂ ಕೇಳಿರುತ್ತೀರಿ. ಒಂದು ಕಾಲದಲ್ಲಿ ಬಡತನದಿಂದ ಬೇಸತ್ತು ಕಿಡ್ನಿಯನ್ನು ಮಾರಬೇಕೆಂದು ಯೋಚಿಸಿದ್ದ ವ್ಯಕ್ತಿ ,ಇಂದು ವಿಶ್ವವೇ ತಿರುಗಿ ನೋಡುವಂಥ ಸಾಧನೆಯನ್ನು ಮಾಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಇಂಡಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ರವಿ ಬಸ್ರೂರ್ ಕೂಡ ಒಬ್ಬರು. ಕೆಜಿಎಫ್ ಚಿತ್ರ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಬೇಕೆಂದರೆ ಕೆಜಿಎಫ್ ಚಿತ್ರದ ಮ್ಯೂಸಿಕ್ ನದ್ದು ದೊಡ್ಡ ಪಾತ್ರವಿದೆ. ಕೆಜಿಎಫ್ ಚಿತ್ರದ ಅದ್ದೂರಿ ಮ್ಯೂಸಿಕ್ ನ ರೆಡಿ ಮಾಡಿದ್ದು ರವಿ ಬಸ್ರೂರ್ ಅವರು. ಕೆಜಿಎಫ್ ನಂತಹ ದೊಡ್ಡ ಚಿತ್ರದ ಮ್ಯೂಸಿಕ್ ಕಮ್ಮಾರನ ಕೆಲಸ ಮಾಡುತ್ತಿರುವುದು ಏಕೆ ಗೊತ್ತಾ.

ಕೈಯಿಂದ ಕೆಲಸ ಮಾಡುವವನು ಕಾರ್ಮಿಕ ರೆಂದು ಕರೆಯುತ್ತಾರೆ ಕೈ ಮತ್ತು ಮೆದುಳಿನಿಂದ ಕೆಲಸ ಮಾಡುವವನನ್ನು ಕುಶಲಕಾರ್ಮಿಕ ಎಂದು ಕರೆಯುತ್ತಾರೆ. ಕೈ ಮೆದುಳು ಮತ್ತು ಹೃದಯದಿಂದ ಕೆಲಸ ಮಾಡುವವನು ಕಲಾವಿದ ಎನ್ನುತ್ತೇವೆ. ರವಿ ಬಸ್ರೂರ್ ಅವರಿಗೆ ಕಲಾವಿದನಾಗಿ ,ಕಾರ್ಮಿಕನಾಗಿ ಮತ್ತು ಕುಶಲಕರ್ಮಿಯಾಗಿ ಕೆಲಸ ಮಾಡುವುದು ಗೊತ್ತು. ರವಿ ಬಸ್ರೂರ್ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಎಂಬ ಚಿಕ್ಕ ಗ್ರಾಮದಲ್ಲಿ ಹುಟ್ಟಿದವರು. ತುಂಬಾ ಬಡ ಕುಟುಂಬದಲ್ಲಿ ಹುಟ್ಟಿದ್ದಾರೆ.

ರವಿ ಬಸ್ರೂರ್ ಅವರ ತಂದೆಯ ಮೂಲ ಕಸುಬು ಶಿಲ್ಪ ಗಳನ್ನು ತಯಾರಿಸುವುದು ಮತ್ತು ಕಮ್ಮಾರನ ಕೆಲಸ ಮಾಡುವುದು. ಚಿಕ್ಕ ವಯಸ್ಸಿನಿಂದಲೂ ರವಿಬಸೂರ್ ಅವರು ಕಮ್ಮಾರಿಕೆಯಲ್ಲಿ ಮತ್ತು ಶಿಲ್ಪಗಳನ್ನು ತಯಾರಿಸುವ ಕೆಲಸದಲ್ಲಿ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು. ಇಂದು ರವಿ ಬಸ್ರೂರ್ ಅವರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಮ್ಯೂಸಿಕ್ ಡೈರೆಕ್ಟರ್. ಆದರೆ ಇವರಿಗೆ ಸ್ವಲ್ಪ ಕೂಡ ಗರ್ವವಿಲ್ಲ. ತುಂಬಾ ಅಂದ್ರೆ ತುಂಬಾ ಸರಳ ಜೀವಿ. ತಾವು ಬೆಳೆದುಬಂದ ಮೂಲವನ್ನು ಇಂದು ಕೂಡ ಮರೆತಿಲ್ಲ. ತಾನು ಬೆಳೆದು ದೊಡ್ಡ ಸೆಲೆಬ್ರಿಟಿ ಆಗಿದ್ದೀನಿ ಅನ್ನೋ ಅಹಂಕಾರವು ಇಲ್ಲವೇ ಇಲ್ಲ.

ಕೆಜಿಎಫ್ ಚಿತ್ರಗಳ ಸಂಗೀತ ನಿರ್ದೇಶನ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸಿದ್ದಾರೆ. ಲಕ್ಷಾಂತರ ಹಣ ಗಳಿದ್ದರೂ ಕೇವಲ 35 ರೂಪಾಯಿಗೆ ಕಮ್ಮಾರನ ಕೆಲಸ ಮಾಡುತ್ತಿರುವ ಕಾರಣವೇನೆಂದರೆ, ತನ್ನ ತಂದೆಗೆ ಸಹಾಯ ಮಾಡಬೇಕು ಎಂಬ ಒಂದೇ ಒಂದು ಕಾರಣದಿಂದ . ರವಿ ಮತ್ತು ಅವರ ತಂದೆ ಇಂದಿಗೂ ಕೂಡ ತಮ್ಮ ಮೂಲ ಕಸುಬನ್ನು ಬಿಟ್ಟಿಲ್ಲ ಲೋಹ ವನ್ನು ಕರಗಿಸಿ ಶಿಲ್ಪಗಳನ್ನು ತಯಾರಿಸುವುದು ರವಿ ಬಸ್ರೂರ್ ಅವರ ಕುಟುಂಬದ ಮೂಲ ಕಸುಬು. ಕಬ್ಬಿಣ ಮತ್ತು ಲೋಹವನ್ನು ಕರಗಿಸಿ ಕಮ್ಮಾರಿಕೆ ಮಾಡಿ ನಂತರ ಶಿಲ್ಪದ ಮೂರ್ತಿಯನ್ನು ತಯಾರಿಸುವ ಕೆಲಸ ಮಾಡುತ್ತಿರುವ ರವಿ ಬಸ್ರೂರ್ ಅವರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಕಮ್ಮಾರಿಕೆ ಕೆಲಸ ಮಾಡುತ್ತಿರುವ ವಿಡಿಯೋವನ್ನು ಸ್ವತಃ ರವಿ ಬಸ್ರೂರ್ ಅವರು ಯಾವುದೇ ಮುಲಾಜಿಲ್ಲದೆ ಹೆಮ್ಮೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯಾವಾಗಲೂ ಕೆಲಸ ಮಾಡುತ್ತಿರಬೇಕು ಕೈಕಟ್ಟಿ ಕುಳಿತುಕೊಳ್ಳಬಾರದು ಎನ್ನುವುದು ಬಸ್ರೂರ್ ಅವರ ನಂಬಿಕೆ. ತನ್ನ ಕೆಲಸದ ಬಿಡುವಿನ ಸಮಯದಲ್ಲಿ ರವಿ ಬಸ್ರೂರ್ ಅವರು ತನ್ನ ಊರಿಗೆ ಬಂದು ತಂದೆಗೆ ಕಮ್ಮಾರಿಕೆ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. 35 ರುಪಾಯಿಗೋಸ್ಕರ ತನ್ನ ತಂದೆಗೆ ಸಹಾಯ ಮಾಡುವುದರಲ್ಲಿ ಸಿಗುವ ಖುಷಿ ನನಗೆ ಲಕ್ಷ ಗೋಸ್ಕರ ಕೆಲಸ ಮಾಡಿದಾಗ ಕೂಡ ಸಿಕ್ಕಿಲ್ಲ ಎಂದು ರವಿ ಬಸ್ರೂರ್ ಅವರು ಹೇಳಿಕೊಂಡಿದ್ದಾರೆ.

Leave a Comment