ಕೆಜಿಎಫ್ ಸಿನಿಮಾದ ಮೊದಲ ಭಾಗ ರಲ್ಲಿ ಬಿಡುಗಡೆ ಆಗಿತ್ತು ಇದೀಗ ಕೆಜಿಎಫ್ ಎರಡನೆಯ ಭಾಗ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲ ದಿನವೇ ಮ್ಯಾಸಿವ್ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಮೂಲತಃ ಕನ್ನಡ ಸಿನಿಮಾವಾದರೂ ಕೂಡ ಕರ್ನಾಟಕಕ್ಕಿ೦ತ ಬೇರೆ ಭಾಷೆಗಳಲ್ಲಿ ಕೆಜಿಎಫ್ ಕ್ರೇಜ್ ಜಾಸ್ತಿ ಇದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕಳೆದು ಹೋಗಿದ್ದಾನೆ. ಇಂತಹ ಒಂದು ಚಿತ್ರವನ್ನು ಜೀವಮಾನದಲ್ಲೇ ನೋಡಿಲ್ಲ ಎನ್ನುವಂತಹ ರಿಯಾಕ್ಷನ್ ಕೊಡುತ್ತಿದ್ದಾರೆ.
80 ವರ್ಷದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಳಿಸಲಾಗದಂತಹ ರೆಕಾರ್ಡ್ ಕೆಜಿಎಫ್ ಚಿತ್ರ ಸೃಷ್ಟಿ ಮಾಡಿದೆ. ಕೆಜಿಎಫ್ ನ ರೆಕಾರ್ಡ್ ಬ್ರೇಕ್ ಮಾಡಬೇಕೆಂದರೆ ಅದು ಕೆಜಿಎಫ್ ನಿಂದ ಮಾತ್ರ ಸಾಧ್ಯ. ಯಾಕೆಂದರೆ ಮೊದಲನೆಯ ಭಾಗ ನೂರು ಕೋಟಿ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ. ಕೆಜಿಎಫ್ ಚಾಪ್ಟರ್-1 ಚಿತ್ರದ ಎಲ್ಲಾ ರೆಕಾರ್ಡ್ ಗಳನ್ನು ಕೆಜಿಎಫ್ ಚಾಪ್ಟರ್-2 ಬ್ರೇಕ್ ಮಾಡುವುದು ಖಂಡಿತ.
ಕೆಜಿಎಫ್ ಚಾಪ್ಟರ್-೨ ನಂತರ ಕೆಜಿಎಫ್ ಚಿತ್ರ ಕೊನೆಗೊಳ್ಳುತ್ತದೆ ಎಂದು ನಾವೆಲ್ಲ ಅಂದುಕೊಂಡಿದ್ದೆವು ಆದರೆ ಕೆಜಿಎಫ್ ಚಿತ್ರ ತಂಡದವರು ನಮಗೆಲ್ಲ ದೊಡ್ಡದಾದ ಟ್ವಿಸ್ಟ್ ಕೊಟ್ಟಿದ್ದಾರೆ. ಹೌದು ಗೆಳೆಯರೇ ಕೆಜಿಎಫ್ ಚಾಪ್ಟರ್-2 ಸಿನಿಮಾವನ್ನು ನೋಡಿ ಬಂದ ಪ್ರೇಕ್ಷಕರು ಈ ಟ್ವಿಸ್ಟ್ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೊನೆಯ ಭಾಗದಲ್ಲಿ ಕೆಜಿ ಎಫ್ ಮೂರನೆಯ ಭಾಗ ದ ಸುಳಿವೊಂದನ್ನು ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ 3 ಪುಸ್ತಕವನ್ನು ತೆರೆಯುತ್ತಿರುವ ದೃಶ್ಯವೊಂದನ್ನು ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.
ಇದೀಗ ಪ್ರೇಕ್ಷಕರಲ್ಲಿ ಕೆಜಿಎಫ್ ಚಾಪ್ಟರ್ -3 ಯಾವಾಗ ಬಿಡುಗಡೆಯಾಗುತ್ತೆ ಯಾವಾಗ ನಾವೆಲ್ಲ ತೆರೆಮೇಲೆ ನೋಡುತ್ತೇವೆ ಎಂಬ ಕುತೂಹಲ ಮೂಡಿದೆ ಇದಕ್ಕೆ ಪ್ರಶಾಂತ್ ನೀಲ್ ಅವರು ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ. ಪ್ರಶಾಂತ್ ನೀಲ್ ಅವರು ಇನ್ಮೇಲೆ ಚಿತ್ರಗಳಲ್ಲಿ ಬ್ಯುಸಿ ಆಗಿರುತ್ತಾರೆ. ಮೊದಲನೆಯದಾಗಿ ಪ್ರಭಾಸ್ ಅವರಿಗೆ ಸಲಾರ್ ಚಿತ್ರ ನಂತರ ಎನ್ ಟಿಆರ್ ಅವರಿಗೆ ಒಂದು ಚಿತ್ರವನ್ನು ನಿರ್ದೇಶನ ಮಾಡುವುದಾಗಿ ಸಹಿ ಹಾಕಿದ್ದಾರೆ. ಪ್ರಭಾಸ್ ಅವರ ಸಲಾರ್ ಚಿತ್ರ ಅರ್ಧದಷ್ಟು ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿತ್ತು ತದನಂತರ ಜೂನಿಯರ್ ಎನ್ಟಿಆರ್ ಅವರ ಸಿನಿಮಾ ಗೆ ಕೈ ಹಾಕಲಿದ್ದಾರಂತೆ.
ಇಷ್ಟೇ ಅಲ್ಲ ಇದಾದ ನಂತರ ಶ್ರೀಮುರಳಿ ಅವರಿಗೋಸ್ಕರ ಪ್ರಶಾಂತ್ ನೀಲ್ ಅವರು ಹೊಸದಾದ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ. ಇಷ್ಟೆಲ್ಲಾ ಸಿನಿಮಾಗಳು ಆದಮೇಲೆ ಪ್ರಶಾಂತ್ ನೀಲ್ ಅವರು ಕೆಜಿಎಫ್ 3 ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಸ್ವತಃ ಪ್ರಶಾಂತ್ ನೀಲ್ ಅವರೇ ಹೇಳಿರುವ ಹಾಗೆ ಇನ್ನೂ ಮುಂದಿನ ಎಂಟು ವರ್ಷಗಳ ಕಾಲ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಾಪ್ಟರ್ 3 ಶೂಟಿಂಗ್ ಪ್ರಾರಂಭ ಮಾಡೋಕೆ ಸಾಧ್ಯವೇ ಇಲ್ಲ. ಕನ್ನಡ ಪ್ರೇಕ್ಷಕರು ಕೆಜಿಎಫ್ ಮೂರನೆಯ ಭಾಗವನ್ನು ತೆರೆ ಮೇಲೆ ನೋಡಲು ನಾವೆಲ್ಲ ಕನಿಷ್ಠ ಎಂಟರಿಂದ ಹತ್ತು ವರ್ಷಗಳಾದರೂ ಕಾಯಬೇಕಾಗುತ್ತದೆ.