ಕನ್ನಡ ಚಿತ್ರರಂಗಕ್ಕೆ ಅದ್ಭುತ ಮತ್ತು ಅಮೋಘ ಚಿತ್ರವನ್ನು ಕೆಜಿಎಫ್ ತಂಡದವರು ನೀಡಿದ್ದಾರೆ. ಕನ್ನಡ ಚಿತ್ರರಂಗವು ಸೀಮಿತ ಮಾರುಕಟ್ಟೆ ಎಂಬ ಮಾತುಗಳನ್ನು ಕೇಳಿ ಕೇಳಿ ಕನ್ನಡಿಗರಿಗೆಲ್ಲಾ ಬೇಸತ್ತು ಹೋಗಿದ್ದೆವು. ಇದೀಗ ಎಲ್ಲರ ಊಹೆಗೂ ಮೀರಿ,ನಾಡು – ಗಡಿಯನ್ನು ಮೀರಿ ಕೆಜಿಎಫ್ ಚಿತ್ರವು ಜಬರ್ದಸ್ತ್ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಊಹಿಸಲಾಗದಂತಹ ದಾಖಲೆಗಳನ್ನು ಕೆಜಿಎಫ್ ಚಿತ್ರ ಮನೆ ಮಾಡಿದೆ. ಇಂಥ ಒಂದು ಚಿತ್ರ ಕನ್ನಡನಾಡಿನ ಹುಟ್ಟಿರುವುದು ನಮಗೆಲ್ಲ ನಿಜಕ್ಕೂ ಹೆಮ್ಮೆ.
ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಭಾರತ ದೇಶದಲ್ಲಿ ಅಷ್ಟೇ ಅಲ್ಲದೆ ಸುಮಾರು 75 ಕ್ಕೂ ಅಧಿಕ ದೇಶಗಳಲ್ಲಿ ಕೆಜಿಎಫ್-೨ ರಿಲೀಸ್ ಆಗಿದೆ. ಎಲ್ಲಾ ರಾಷ್ಟ್ರಗಳಲ್ಲೂ ಕೆಜಿಎಫ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಹಾಲಿವುಡ್ ಲೆವೆಲ್ ಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂಬ ವಿಮರ್ಶೆಗಳು ಕೇಳಿ ಬರುತ್ತಿವೆ. ಇದೀಗ ವೀಕ್ಷಕರಿಗೆಲ್ಲ ಕುತೂಹಲ ಮೂಡಿಸಿರುವ ವಿಷಯವೇನೆಂದರೆ ಬಹು ದೊಡ್ಡ ಮೊತ್ತದಲ್ಲಿ ನಿರ್ಮಾಣವಾಗಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿರುವ ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಎಂಬುದು.
ಕನ್ನಡ ಚಿತ್ರರಂಗದ 80bವರ್ಷದ ಇತಿಹಾಸದಲ್ಲಿ ಅತಿ ಹೆಚ್ಚು ಮೊದಲ ದಿನದ ಕಲೆಕ್ಷನ್ ಹೋಲಿಸಿರುವುದು ಪುನೀತ್ ರಾಜ್ ಕುಮಾರ್ ಅವರ ಜೀನ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರ ಒಂದೇ ದಿನದಲ್ಲಿ ಕರ್ನಾಟಕದಲ್ಲಿ 28 ಕೋಟಿ ರುಪಾಯಿಗಳನ್ನು ಗಳಿಸಿತ್ತು. ಆದರೆ ಇಂದು ಕೆಜಿಎಫ್-೨ ಚಿತ್ರವು ಪುನೀತ್ ಅವರ ಜೇಮ್ಸ್ ಚಿತ್ರವನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕದಲ್ಲಿ ಕೆಜಿಎಫ್ ಮೊದಲ ದಿನವೇ 32 ಕೋಟಿ ರುಪಾಯಿಗಳನ್ನು ಸಂಪಾದಿಸಿದೆ.
ಇನ್ನೊಂದು ಆಶ್ಚರ್ಯಕರ ವಿಷಯವೇನೆಂದರೆ ಕರ್ನಾಟಕಕ್ಕಿಂತ ಹೆಚ್ಚಾಗಿ ಬೇರೆ ರಾಜ್ಯಗಳಲ್ಲಿ ಕೆಜಿಎಫ್-೨ ಚಿತ್ರದ ಕಲೆಕ್ಷನ್ ಹೆಚ್ಚಾಗಿದೆ. ಬಾಲಿವುಡ್ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರವು ಮೊದಲ ದಿನವೇ 53 ಕೋಟಿ ರೂಪಾಯಿಗಳನ್ನು ಗಳಿಸಿದೆ. ಬಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನವೇ 53 ಕೋಟಿ ರುಪಾಯಿಗಳನ್ನು ಗಳಿಸಿರುವ ಮೊದಲ ಚಿತ್ರ ಇದಾಗಿದೆ. ಹಾಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಚಾರಕ್ಕೆ ಬಂದರೆ ಮೊದಲ ದಿನವೇ 32 ಕೋಟಿ ರುಪಾಯಿಗಳನ್ನು ಕೆಜಿಎಫ್-೨ ಬಾಚಿಕೊಂಡಿದೆ.
ತಮಿಳುನಾಡು ಮತ್ತು ಕೇರಳ ಎರಡೂ ರಾಜ್ಯಗಳಲ್ಲಿ ಕೆಜಿಎಫ್-೨ ಚಿತ್ರವು ಮೊದಲ ದಿನ ಇಪ್ಪತ್ತು ಕೋಟಿ ರೂಪಾಯಿಗಳನ್ನು ಗಳಿಸಿದೆ. ಒಟ್ಟಾರೆ ಹೇಳಬೇಕೆಂದರೆ ಇಡೀ ದೇಶದಲ್ಲಿ ಕೆಜಿಎಫ್ ಚಿತ್ರ ಒಂದೇ ದಿನದಲ್ಲಿ 134 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸ್ವತಃ ಕೆಜಿಎಫ್ ಚಿತ್ರದ ನಿರ್ಮಾಪಕರೇ ಕಲೆಕ್ಷನ್ ವಿಚಾರದ ಮಾಹಿತಿಗಳನ್ನು ಅಧಿಕೃತವಾಗಿ ತಿಳಿಸಿದ್ದಾರೆ . ಅಮೇರಿಕ ಇಂಗ್ಲೆಂಡ್ ದೇಶಗಳು ಸೇರಿದಂತೆ ಉಳಿದ ದೇಶಗಳೊಂದಿಗೆ ಕೆಜಿಎಫ್ ಚಿತ್ರವು ಸುಮಾರು ನಲವತ್ತು ಕೋಟಿ ರುಪಾಯಿಗಳನ್ನು ಮಾಡಿದೆ. ಒಟ್ಟಾರೆ ಕೊನೆಯದಾಗಿ ಆಲ್ ಓವರ್ ದಿ ವರ್ಲ್ಡ್ ಕೆಜಿಎಫ್-೨ ಚಿತ್ರವು 170 ರಿಂದ 180 ಕೋಟಿ ರುಪಾಯಿಗಳನ್ನು ಗಳಿಕೆ ಮಾಡಿದೆ. ಈ ಕಲೆಕ್ಷನ್ ಗಳ ಲೆಕ್ಕ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತೆ ಇಂತಹ ಸಾಧನೆ ಮಾಡಲಿಕ್ಕೆ ಆಗುತ್ತಾ ಎಂದು ಊಹಿಸಲು ಕೂಡ ಅಸಾಧ್ಯ.