Kantara 2 ರಿಷಬ್ ಶೆಟ್ಟಿ ಮೊನ್ನೆ ಅಷ್ಟೇ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದು ಅಭಿಮಾನಿಗಳು ಪ್ರತಿಯೊಬ್ಬರೂ ಕೂಡ ಕಾಂತಾರ ಸಿನಿಮಾದ ಮುಂದಿನ ಭಾಗಕ್ಕಾಗಿ ಎದುರು ನೋಡುತ್ತಿದ್ದಾರೆ. ಇನ್ನು ರಿಷಬ್ ಶೆಟ್ಟಿ(Rishab Shetty) ಕೂಡ ಇದೇ ಕಾರಣಕ್ಕಾಗಿ ಬೆಂಗಳೂರು ಬಿಟ್ಟು ಊರನ್ನು ಸೇರಿಕೊಂಡಿದ್ದರು. ಬೆಂಗಳೂರಿನಲ್ಲಿ ಅವರ ಜನ್ಮದಿನಾಚರಣೆ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಸಂತೋಷದಿಂದ ಆಚರಿಸಿಕೊಂಡಿದ್ದಾರೆ.
ಕಾಂತಾರ(Kantara) ಸಿನಿಮಾ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ 400 ಕೋಟಿ ಅಧಿಕ ಕಲೆಕ್ಷನ್ ಮಾಡಿರುವುದು ರಿಷಬ್ ಶೆಟ್ಟಿ ಅವರ ಸಾಮರ್ಥ್ಯಕ್ಕೆ ನೀಡುವಂತಹ ಒಂದು ಜೀವಂತ ಉದಾಹರಣೆಯಾಗಿದೆ ಎಂದು ಹೇಳಬಹುದಾಗಿದೆ. ಮೊದಲ ಅಧ್ಯಾಯ ಮುಗಿದಿದ್ದು ಈಗ ಎರಡನೇ ಅಧ್ಯಾಯಕ್ಕಾಗಿ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ.
ಎಲ್ಲಕ್ಕಿಂತ ಪ್ರಮುಖವಾಗಿ ಕಾಂತರಾ 2(Kantara 2) ಸಿನಿಮಾಗೆ ಪ್ರತಿಯೊಬ್ಬರೂ ಕೂಡ ಕಾಯುತ್ತಿದ್ದು ಆದರೆ ಸಿನಿಮಾ ಮಾತ್ರ ಆಗಸ್ಟ್ ತಿಂಗಳ ನಂತರ ಪ್ರಾರಂಭವಾಗಲಿದೆ ಎಂಬುದಾಗಿ ಸುದ್ದಿ ಇದೆ. ರಿಷಬ್ ಶೆಟ್ಟಿ ಅವರು ಕೂಡ ಈ ಸಿನಿಮಾದ ಚಿತ್ರೀಕರಣಕ್ಕಾಗಿ ಅದೊಂದು ವಸ್ತು ಪ್ರಮುಖ ಎಂಬುದಾಗಿ ಹೇಳುತ್ತಿದ್ದು ಅದಕ್ಕಾಗಿಯೇ ಕಾಯುತ್ತಿದ್ದೇನೆ ಎಂಬುದಾಗಿ ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಕಾಂತರಾ ಸಿನಿಮಾದ ಎರಡನೇ ಭಾಗದ ಚಿತ್ರಿಕರಣಕ್ಕಾಗಿ ಬೇಕಾಗಿರುವಂತಹ ಅತ್ಯಂತ ಪ್ರಮುಖ ವಸ್ತು ಯಾವುದು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ರಿಷಬ್ ಶೆಟ್ಟಿ ಆಗಸ್ಟ್ ತಿಂಗಳವರೆಗೆ ಕಾಯುತ್ತಿರುವುದು ಕೂಡ ಮಳೆಗಾಲ ಬರಲಿ ಎನ್ನುವ ಕಾರಣಕ್ಕಾಗಿ ಯಾಕೆಂದರೆ ಕಾಂತರಾ ಸಿನಿಮಾದ ಎರಡನೇ ಭಾಗದ ಚಿತ್ರೀಕರಣಕ್ಕಾಗಿ ಮಳೆಯ ದೃಶ್ಯಗಳು ಸಾಕಷ್ಟು ಬೇಕಾಗುತ್ತವೆ, ಇದೇ ಕಾರಣಕ್ಕಾಗಿ ಮಳೆಗಾಲ ಬರುವುದು ಕಾಂತಾರ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುವುದಕ್ಕೆ ಅತ್ಯಂತ ಪ್ರಮುಖವಾಗಿದೆ.