ರಾಧಿಕಾ ಪಂಡಿತ್ ಅವರು ಅಚ್ಚ ಕನ್ನಡದ ಹುಡುಗಿ. ಧಾರಾವಾಹಿಯ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿ ನಂತರ ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸನ್ನು ಕಂಡಿದ್ದಾರೆ. ರಾಧಿಕಾ ಪಂಡಿತ್ ಅವರು ಮುಂಚೆಯಿಂದಲೂ ಮಾದರಿ ನಟಿಯಾಗಿಯೇ ಕಾಣಿಸಿದ್ದಾರೆ. ಬೇರೆ ನಟಿಯರ ಹಾಗೆ ಕನ್ನಡ ಚಿತ್ರದಿಂದ ಹೆಸರು ಮಾಡಿ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯ ಮಾಡಬೇಕೆಂಬ ಆಸೆ ಇವರಿಗಿಲ್ಲ.
ಆದರೂ ಕೂಡ ರಾಧಿಕಾ ಪಂಡಿತ್ ಅವರ ಮೇಲೆ ಕನ್ನಡ ಅಭಿಮಾನಿಗಳಿಗೆ ಕೊಂಚ ಬೇಸರವಿದೆ. ಅದಕ್ಕೆ ಕಾರಣ ಕೆಜಿಎಫ್ ಸಿನೆಮಾ. ಯಶ್ ಅವರು ಅಭಿನಯಿಸಿರುವ ಕೆಜಿಎಫ್ ಸಿನೆಮಾ ದೇಶಮಟ್ಟದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇದು ಮೂಲತಃ ಕನ್ನಡ ಭಾಷೆ ಸಿನಿಮಾವಾಗಿದ್ದರೂ ಇದೀಗ ಕೆಜಿಎಫ್ ಇಂಡಿಯನ್ ಸಿನೆಮಾ ಆಗಿದೆ. ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಎಲ್ಲಾ ಭಾಷೆಯ ಜನರು ಯಶ್ ಅವರ ಅಭಿಮಾನಿಗಳಾಗಿದ್ದಾರೆ.
ಮಾರ್ಚ್ 27 ರಂದು ಕೆಜಿಎಫ್ ಚಾಪ್ಟರ್ 2 ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಯಶ್ ರಾಧಿಕಾ ಮತ್ತು ಶಿವಣ್ಣ ಕೂಡ ಭಾಗವಹಿಸಿದ್ರು. ಬಾಲಿವುಡ್ ಸೆಲೆಬ್ರಿಟಿಗಳಾದ ಸಂಜಯ್ ದತ್ ಮತ್ತು ರವೀನಾ ಟಂದನ್ ಕೂಡ ಆಗಮಿಸಿದ್ದರು. ಹಾಗೆ ಇತರ ರಾಜ್ಯಗಳಿಂದ ಕೂಡ ಸೆಲೆಬ್ರಿಟಿಗಳು ಆಗಮಿಸಿದ್ದರು. ಕೆಜಿಎಫ್ ಚಾಪ್ಟರ್ 2 ಟ್ರೇಲರನ್ನು ಬಿಡುಗಡೆ ಮಾಡಿದ ನಂತರ ರಾಧಿಕಾ ಅವರು ವೇದಿಕೆಯ ಮೇಲೆ ಬಂದು ಭಾಷಣವನ್ನು ಮಾಡಿದ್ದಾರೆ.
ವೇದಿಕೆ ಮೇಲೆ ಬಂದ ರಾಧಿಕಾ ಪಂಡಿತ್ ಅವರು ಕೆಜಿಎಫ್ ಸಿನಿಮಾದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಅವರು ತಮ್ಮ ಅನಿಸಿಕೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ ವಿವರಿಸಿರುವುದು ಕೆಲವು ಜನರಿಗೆ ಬೇಸರ ತಂದಿದೆ. ಮೊದಲಿಗೆ ಎಲ್ಲರಿಗೂ ನಮಸ್ಕಾರ ಅಂತ ರಾಧಿಕಾ ಪಂಡಿತ್ ಅವರು ಕನ್ನಡದಲ್ಲಿ ಪ್ರಾರಂಭಿಸಿದರು. ಆದರೆ ನಂತರ ಇಂಗ್ಲಿಷ್ ಭಾಷೆಯಲ್ಲಿಯೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕೆಜಿಎಫ್ ಸಿನಿಮಾ ಹಿಟ್ ಆದ ಮೇಲೆ ರಾಧಿಕಾ ಅವರ ಕನ್ನಡ ಮಾಯವಾಗಿದೆ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವೇದಿಕೆ ಮೇಲೆ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯ ಜನರು ಕೂಡ ಉಪಸ್ಥಿತರಿದ್ದ ಕಾರಣ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ಅರ್ಥವಾಗಲಿ ಅಂತ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಿದರೂ ಅನಿಸುತ್ತೆ. ರಾಧಿಕಾ ಅವರು ಎಲ್ಲರಿಗೂ ನಮಸ್ಕಾರ ಅಂತ ಕನ್ನಡದಲ್ಲೇ ಪ್ರಾರಂಭಮಾಡಿದ್ದು ಹಲವರಿಗೆ ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಇವರು ಅತಿಯಾದ ಇಂಗ್ಲಿಷ್ ಬಳಕೆ ಮಾಡಿರುವುದು ಸಮಂಜಸವಲ್ಲ ಎಂದಿದ್ದಾರೆ. ಕನ್ನಡಿಗರು ಕೆಜಿಎಫ್ ನಮ್ಮ ಸಿನೆಮಾ ಅಂತ ಎದೆ ತಟ್ಟಿಕೊಂಡು ಹೇಳ್ತಾರೆ ಆದರೆ ಸಿನಿಮಾ ತಂಡದವರು ಇಂಗ್ಲಿಷ್ ನಲ್ಲಿ ಮಾತನಾಡುವುದು ಎಷ್ಟು ಸರಿ ಎನ್ನುವುದು ಹಲವರ ವಾದ.