ಕನ್ನಡದ ಈ ಸಿಂಗರ್ಸ್ ಗಳು ಒಂದು ಹಾಡು ಹಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ

ಒಂದು ಕಾಲದಲ್ಲಿ ಚಿತ್ರರಂಗದ ಟಾಪ್ ಸಿಂಗರ್ಸ್ ಒಂದು ಹಾಡನ್ನು ಹಾಡುವುದರ ಸಲುವಾಗಿ 1,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಕಾಲ ಬದಲಾಗಿದೆ ಈಗ ಹಾಗೇ ಕಾಲ ಬದಲಾದಂತೆcಚಿತ್ರರಂಗದಲ್ಲಿ ಒಂದು ಹಾಡನ್ನು ಹೇಳುವುದರ ಸಲುವಾಗಿ ಗಾಯಕರು ತೆಗೆದುಕೊಳ್ಳುವಂತಹ ಸಂಭಾವನೆಯೂ ಕೂಡ ಬದಲಾಗಿದೆ. ಹಿಂದೆಲ್ಲ ಒಂದೇ ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಗಾಯಕರು ಹಾಡುತ್ತಿದ್ದರು.

ಆದರೆ ಈಗ ಹಾಗಿಲ್ಲ ಒಂದೇ ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಗಾಯಕ ಗಾಯಕಿ ಹಾಡದೆ ಒಂದು ಸಿನಿಮಾದ ಹಾಡುಗಳನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಶೈಲಿಯಲ್ಲಿ ಬೇರೆ ಬೇರೆ ಗಾಯಕರು ಹಾಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಹೊಂದಿರುವ ಗಾಯಕರು ಇದ್ದಾರೆ. ಇವರೆಲ್ಲ ಒಂದು ಹಾಡನ್ನು ಹಾಡುವುದರ ಸಲುವಾಗಿ ಎಷ್ಟು ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡದ ಗಾಯಕಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಲಿನಲ್ಲಿ ಮೊದಲಿಗರಾಗಿ ಅನುರಾಧ ಭಟ್ ಅವರು ಇದ್ದಾರೆ. ಇವರು ಒಂದು ಹಾಡಿಗೆ 50 ರಿಂದ 70 ಸಾವಿರ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರಂತೆ. ಇನ್ನು ಹಲವಾರು ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸುವ ಅರ್ಚನಾ ಉಡುಪ ಅವರು ಒಂದು ಹಾಡಿಗೆ 30 ರಿಂದ 40 ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಸರಿಗಮಪ ರಿಯಾಲಿಟಿ ಶೋದಲ್ಲಿ ಮೊದ ಮೊದಲು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದ ನಂದಿತ ಅವರು ಒಂದು ಹಾಡಿಗೆ 40,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.

ಇನ್ನು ಕನ್ನಡದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ಒಂದು ಹಾಡನ್ನು ಹಾಡುವುದರ ಸಲುವಾಗಿ 1,00,000 ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿತ್ರ ಅವರ ಒಂದು ಹಾಡಿಗೆ 1,00,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ಕನ್ನಡದ ಟಾಪ್ ಗಾಯಕ ವಿಜಯ್ ಪ್ರಕಾಶ್ ಅವರು ಒಂದು ಹಾಡನ್ನು ಹಾಡಲು ಒಂದರಿಂದ ಒಂದು ಲಕ್ಷದವರೆಗೂ ಸಂಭಾವನೆಯನ್ನು ಪಡೆಯುತ್ತಾರೆ.

ಹಾಗೆಯೇ ಬಾಲಿವುಡ್ ಗಾಯಕ ಹಾಗಿದ್ದರೂ ಸಹ ಹೆಚ್ಚು ಕನ್ನಡದ ಹಾಡುಗಳನ್ನು ಹಾಡಿರುವ ಅಂತಹ ಸೋನು ನಿಗಮ್ ಕನ್ನಡದಲ್ಲಿ ಒಂದು ಹಾಡನ್ನು ಹಾಡಲು 1,00,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ಇತ್ತೀಚೆಗಷ್ಟೇ ಸರಿಗಮಪ ವೇದಿಕೆಯಿಂದ ಹೊರಬಿದ್ದು ಪ್ರಖ್ಯಾತಿ ಹೊಂದಿರುವ ಸಂಚಿತ್ ಹೆಗಡೆ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡು ಒಂದು ಹಾಡಿಗೆ ಐವತ್ತರಿಂದ ರಿಂದ ಅರವತ್ತು ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ತನ್ನ ಕಂಠದಿಂದ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸುವ ಶ್ರೇಯಾ ಘೋಷಾಲ್ ಕನ್ನಡದ ಒಂದು ಹಾಡಿಗೆ 1,00,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.

Leave a Comment