Anand Filme Kannada: ಸ್ನೇಹಿತರೆ 80-90ರ ದಶಕದಲ್ಲಿ ಸಾಕಷ್ಟು ಅಪ್ರತಿಮ ಕಲಾವಿದರು ಕನ್ನಡ ಸಿನಿಮಾ ರಂಗವನ್ನು ಪ್ರವೇಶಿಸಿ ತಮ್ಮ ಅದ್ಭುತ ಕಲೆಯ ಮೂಲಕ ಆಗಿನ ಸಿನಿ ಪ್ರೇಕ್ಷಕರಿಗೆ ಪೈಸಾ ವಸೂಲು ಮನೋರಂಜನೆಯನ್ನು ನೀಡಿದರು. ಈ ಪೈಕಿ ನಮ್ಮ ಸುಧಾರಾಣಿಯವರು ಒಬ್ಬರು. ಹೌದು ಗೆಳೆಯರೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅವರ ಆನಂದ್ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿ ಇಂದಿಗೂ ಸಿನಿಮಾ ಹಾಗೂ
ಯಶಸ್ವಿ ಸೀರಿಯಲ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಬಂದಿರುವ ಸುಧಾರಾಣಿ ತಮ್ಮ ಮನೋಜ್ಞ ಅಭಿನಯದ ಮೂಲಕವೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಕೇವಲ ತರೆಯ ಮೇಲೆ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಇರುವಂತಹ ಸುಧಾರಾಣಿ ಅಪರೂಪದ ಫೋಟೋಗಳನ್ನು ಶೇರ್ ಮಾಡುತ್ತಾ ಸಂತೋಷ ಪಡಿಸುತ್ತಿರುತ್ತಾರೆ.
ಹೀಗಿರುವಾಗ ಪುನರ್ ಮಿಲನದಂತೆ ಆನಂದ್(Anandh) ಸಿನಿಮಾದ ಸೀನ್ ಒಂದೇನೋ ತಮ್ಮ ಸ್ನೇಹಿತರಾದ ಗುರುದತ್ ಹಾಗೂ ನಯನ ಅವರೊಂದಿಗೆ ಮರು ಶ್ರೇಷ್ಠಿಸಿದ್ದಾರೆ. ಹೌದು ಸ್ನೇಹಿತರೆ 1986ರಲ್ಲಿ ಬಿಡುಗಡೆಗೊಂಡಂತಹ ಆನಂದ್ ಸಿನಿಮಾ ಹಲವಾರು ದಿನಗಳ ಕಾಲ ತೆರೆಯ ಮೇಲೆ ರಾರಾಜಿಸಿ ಬ್ಲಾಕ್ ಮಾಸ್ಟರ್ ಹಿಟ್ ಯಶಸ್ಸನ್ನು ಕಂಡುಕೊಳ್ಳುತ್ತದೆ. ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ತಮ್ಮ 13 ವರ್ಷಕ್ಕೆ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಸುಧಾರಾಣಿ ಬಹುದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇಂದಿಗೂ ಅದೇ ಬೇಡಿಕೆ ಹಾಗೂ ಚಾರ್ಮನ್ನು ಉಳಿಸಿಕೊಂಡು ಬಂದಿರುವಂತಹ ಸುಧಾರಾಣಿ(Sudharani) ಸದ್ಯ ಶ್ರೀರಸ್ತು ಶುಭಮಸ್ತು ಎಂಬ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲೂ ಕಮಾಲ್ ಮಾಡುತ್ತಿದ್ದಾರೆ. 37 ವರ್ಷದ ಹಿಂದಿನ ಸ್ನೇಹಿತರನ್ನು ಭೇಟಿ ಮಾಡಿ ಮಾಲಾ ಮತ್ತು ಶ್ರೀಕಾಂತ್(Srikanth) ಲತಾ(Latha)ಳನ್ನು ಭೇಟಿ ಮಾಡಿದಾಗ ಎಂಬ ಕ್ಯಾಪ್ಷನ್ ಬರೆದು ಗುರುದತ್ ಹಾಗೂ ನಟಿ ನಯನ ಅವರನ್ನು ಭೇಟಿ ಮಾಡಿರುವ ಫೋಟೋವನ್ನು instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಸ್ನೇಹಿತರ ಮಿಲನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ Chandan Kavitha: ಪತ್ನಿ ಹಾಗೂ ತಾಯಂದಿರ ಜೊತೆಗೆ ದುಬೈಗೆ ಹರಿದ ಕಿರುತೆರೆ ನಟ ಚಂದನ್ ಕುಮಾರ್!