Kannada Actors: ನಗುಮುಖದಿಂದಲೇ ಕನ್ನಡಿಗರ ಮನಗೆದ್ದಿರುವ ಕನ್ನಡದ ಕಣ್ಮಣಿಗಳು

Kannada Actors ಸ್ನೇಹಿತರೆ, ನಗುವಿನ ರಾಜಕುಮಾರನೆಂದೆ ಕರೆಯಲ್ಪಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ನಗು ಇನ್ನು ಮುಂದೆ ನೆನಪು ಮಾತ್ರ ಎಂಬ ಸತ್ಯವನ್ನು ಅರಗಿಸಿಕೊಳ್ಳುವಂತಹ ಸಂದರ್ಭದಲ್ಲಿ ಮತ್ತೊಂದು ಕಹಿ ಘಟನೆ ನಡೆದಿದ್ದು, ಇದನ್ನು ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳುವುದು ಬಹಳ ಕಷ್ಟವಾಗಿದೆ. ಹೌದು ಗೆಳೆಯರೇ ತಮ್ಮ ನಗುವಿನ ಮೂಲಕವೇ ಇತರರ ನೋವನ್ನು ಮರೆಸುವ ಕೆಲಸ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar),

29 ಅಕ್ಟೋಬರ್ 2021 ರಂದು ನಮ್ಮೆಲ್ಲರಿಂದಗಲಿ ಭಾರದ ಲೋಕಕ್ಕೆ ತೆರಳಿಬಿಟ್ಟರು. ಹೌದು ಗೆಳೆಯರೇ ಸದಾ ದಾನ ಧರ್ಮದಂತಹ ನಾಲ್ಕು ಜನರಿಗೆ ಒಳ್ಳೆಯದಾಗುವಂತಹ ಕೆಲಸವನ್ನೇ ಮಾಡುತ್ತಾ ಬಲಗೈಯಲ್ಲಿ ಕೊಟ್ಟದ್ದು, ಎಡಗೈಗೂ ಗೊತ್ತಾಗಬಾರದು ಎಂಬ ನೀತಿ ಪಾಠವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಿ ಬಡವರ ನಿರ್ಧಾರ ಕಷ್ಟಕ್ಕೆ ಸ್ಪಂದಿಸುತ್ತಿದ್ದಂತಹ ಹೃದಯ ಶ್ರೀಮಂತಿಕೆ ಹೊಂದಿದ್ದ ವ್ಯಕ್ತಿ ನಮ್ಮೆಲ್ಲರ ಪ್ರೀತಿಯ ಅಪ್ಪು ಹೃದಯ ಸ್ತಂಬನದಿಂದಾಗಿ ನಮ್ಮೆಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದರು.

ಹೀಗೆ ದೊಡ್ಡಮನೆಗೆ ಪುನೀತ್ ರಾಜಕುಮಾರ್ ಅವರ ಸಾವು ದುಃಖದ ಛಾಯೆಯನ್ನು ನೀಡಿ ಹೋಗಿತ್ತು, ಇದರಿಂದ ಹೊರ ಬರುತ್ತಾ ಇದ್ದ ದೊಡ್ಮನೆಯಲ್ಲಿ ಮತ್ತೊಂದು ಅನಾಹುತ ನಡೆದು ಹೋಗಿದೆ. ಹೌದು ಗೆಳೆಯರೇ ಕಳೆದ ಆರು ದಿನಗಳ ಹಿಂದಷ್ಟೇ ಸ್ಪಂದನ ವಿಜಯ್ ರಾಘವೇಂದ್ರ(Spandana Vijay Raghavendra) ಅವರು ಹೃದಯದ ಸಮಸ್ಯೆಯಿಂದಾಗಿ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ. ಎಲ್ಲರೊಂದಿಗೆ ಬಹಳ ಲವಲವಿಕೆಯಿಂದ ಮಾತನಾಡುತ್ತಾ ತಮ್ಮ ಪತಿಯ ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹಿಸುತ್ತಾ ಇದ್ದಂತಹ ನಗು ಮುಖದ ಹುಡುಗಿ ಸ್ಪಂದನ ಸದ್ಯ ನೆನಪು ಮಾತ್ರ.

ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜಕುಮಾರ್ ಹಾಗೂ ಸ್ಪಂದನರವರು ಒಟ್ಟಿಗೆ ಸಮಯ ಕಳೆದಂತಹ ಕೆಲವು ಫೋಟೋಗಳು ವೈರಲಾಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಕಂಬನಿ ಮಿಡಿಯುತ್ತಿದ್ದಾರೆ. ಹೌದು ಗೆಳೆಯರೇ ತಮ್ಮ ನಗುವಿನ ಮೂಲಕವೇ ಅದೆಷ್ಟೋ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದ ಪುನೀತ್ ರಾಜಕುಮಾರ್ (Puneeth Rajkumar) ಮತ್ತು ಸ್ಪಂದನ(Spandana)

ವಿಜಯ ರಾಘವೇಂದ್ರ ಅವರ ನಗು ಇನ್ನು ಮುಂದೆ ನೆನಪು ಮಾತ್ರ ಎಂಬ ಸತ್ಯವನ್ನು ವಾಸ್ತವವಾಗಿ ತೆಗೆದುಕೊಳ್ಳುವುದು ಕಷ್ಟವಾಗಿದೆ. ಈ ಒಂದು ದುಃಖವನ್ನು ಬರಿಸುವಂತಹ ಶಕ್ತಿಯನ್ನು ಭಗವಂತ ವಿಜಯ್ ರಾಘವೇಂದ್ರ ಮತ್ತು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. ಇದನ್ನೂ ಓದಿ ಕನ್ನಡ ಸಿನಿಮಾ ರಂಗದ ಪ್ರಖ್ಯಾತ ಪೋಷಕ ನಟರಾದ ಅವಿನಾಶ್ ಮತ್ತು ಮಾಳವಿಕಾ ಮದುವೆ ಫೋಟೋಸ್!

Leave a Comment