ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಯಾಗದವರಿಲ್ಲ. ಅವರ ಬಹುತೇಕ ಸಿನೆಮಾಗಳು ಹಿಟ್ಟಾಗಿ ಬಹಳ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಇದೀಗ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ ಹಾಗೂ ಅವರ ಹುಟ್ಟುಹಬ್ಬ ಕೂಡ ಇದರಿಂದ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರ ಬರ್ತಡೆ ಆಚರಣೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾ ಭರ್ಜರಿ ಹಿಟ್ ಆಗಿತ್ತು ಇದೀಗ ಕೆಜಿಎಫ್ 2 ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾದ ಮೂಲಕ ಯಶ್ ಅವರು ಹೊರರಾಜ್ಯ, ಹೊರದೇಶದಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗೆ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದೆ ಹಾಗಾದರೆ ಎಲ್ಲರೂ ಕೆಜಿಎಫ್ 2 ಸಿನೆಮಾವನ್ನು ನೋಡಲೇಬೇಕು. ಹೀಗೆ ಇಡೀ ಜಗತ್ತನ್ನೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಕೊರೋನ ವೈರಸ್ ಇರುವ ಕಾರಣ ಕುಟುಂಬದವರೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಯಶ್ ಅವರ ಕ್ಯೂಟ್ ಮಗಳು ಐರಾ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾಳೆ. ಯಶ್ ಅವರ ಕುಟುಂಬದವರು ಯಶ್ ಅವರಿಗೆ ಗೊತ್ತಿಲ್ಲದ ಹಾಗೆ ಒಂದು ಹೋಟೆಲ್ ನಲ್ಲಿ ಸರ್ಪ್ರೈಸ್ ಬರ್ತಡೆ ಪಾರ್ಟಿ ಇಟ್ಟುಕೊಂಡಿದ್ದರು. ಕುಟುಂಬದವರೊಂದಿಗೆ ಯಶ್ ಅವರು ಹೋಟೆಲ್ ನಲ್ಲಿ ಬರ್ತಡೆ ಪಾರ್ಟಿ ಸೆಲಬ್ರೇಷನ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಯಶ್ ಅವರು ತಮ್ಮ ಮಗಳನ್ನು ಎತ್ತಿಕೊಂಡು ಕೇಕ್ ಕಟ್ ಮಾಡಿದ್ದಾರೆ. ಯಶ್ ರಾಧಿಕಾ ಪಂಡಿತ್ ಅವರು ಸಖತ್ತಾಗಿ ಮಿಂಚಿದ್ದಾರೆ ಅದಕ್ಕಿಂತ ಅವರ ಮಗಳು ಐರಾ ಮಿಂಚಿದ್ದಾಳೆ. ಕ್ಯೂಟ್ ಬೇಬಿ ತನ್ನ ಅಪ್ಪನ ಬರ್ತಡೆಗೆ ವಿಶೇಷ ಉಡುಗೊರೆ ನೀಡಿದ್ದಾಳೆ ಎಂದು ತಿಳಿದುಬಂದಿದೆ. ಕ್ಯೂಟ್ ಫ್ಯಾಮಿಲಿ ಹೊಂದಿರುವ ಯಶ್ ಅವರು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು ಆದರೆ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಅಭಿಮಾನಿಗಳು ತಮ್ಮ ಮನೆಯಿಂದಲೇ ಆಶೀರ್ವಾದ ಮಾಡಿ ಎಂದು ಹೇಳಿದ್ದಾರೆ.