ಸಿನಿಮಾಗಳಲ್ಲಿ ರವಿಚಂದ್ರನ್ ರಸಿಕನಂತೆ ಬಿಂಬಿಸಿದ್ಯಾಕೆ? ಕ್ರೇಜಿ ಸ್ಟಾರ್ ಗೆ ಡಿಸ್ಟ್ರೆಬ್ ಮಾಡಿದ ಆ ಸಿನಿಮಾ ಯಾವುದು ಗೊತ್ತಾ, ತೆರೆ ಹಿಂದಿನ ರಿಯಲ್ ಕತೆ ಇಲ್ಲಿದೆ

ಕನ್ನಡ ಚಲನಚಿತ್ರರಂಗದ ಅತ್ಯಂತ ವರ್ಣರಂಜಿತ ವ್ಯಕ್ತಿ ವಿ.ರವಿಚಂದ್ರನ್. ಎದೆಗಾರಿಕೆ ಇರುವಂತಹ ನಟ,ನಿರ್ದೇಶಕ, ನಿರ್ಮಾಪಕ ಎಂದರೂ ಕೂಡ ತಪ್ಪಾಗಲಾರದು. ರವಿಚಂದ್ರನ್ ಅವರು ಖ್ಯಾತ ನಿರ್ಮಾಪಕ ಎನ್ ವೀರಸ್ವಾಮಿ ಅವರ ಪುತ್ರ. ಈಶ್ವರಿ ಪ್ರೊಡಕ್ಷನ್ ಮುಖಾಂತರ ಕನ್ನಡ ಸಿನಿಮಾ ರಂಗಕ್ಕೆ ಹೊಸ ರೂಪ ನೀಡಿದ್ದರು ವೀರಸ್ವಾಮಿ. ಮೊದಲಿಗೆ ರವಿಚಂದ್ರನ್ ಅವರು ನಿರ್ಮಾಪಕರಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಇದಾದ ನಂತರ ನಾಯಕ ನಟನಾಗಿ ಕೂಡ ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತಾರೆ ವಿ ರವಿಚಂದ್ರನ್.

ರವಿಚಂದ್ರನ್ ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ಏರುಪೇರುಗಳನ್ನು ಸಹ ಕಂಡಿದ್ದಾರೆ. ರವಿಚಂದ್ರನ್ ಅವರ ಕೆಲವು ಸಿನಿಮಾಗಳು ಹಿಟ್ ಆಗಿದ್ದರೆ ಮತ್ತೆ ಕೆಲ ಸಿನಿಮಾಗಳು ಸಂಪೂರ್ಣವಾಗಿ ನೆಲಕಚ್ಚಿದ್ದವು. ರವಿಚಂದ್ರನ್ ಅವರು ಸಿನಿಮಾದಲ್ಲಿ ಸಾಕಷ್ಟು ಹಣವನ್ನು ಗಳಿಸಲಿಲ್ಲ ಏಕೆಂದರೆ ಸಿನಿಮಾದಿಂದ ಬಂದ ಹಣವನ್ನೆಲ್ಲಾ ಮತ್ತೆ ಮತ್ತೊಂದು ಸಿನಿಮಾಕ್ಕಾಗಿ ಸುರಿದರು. ಹೀಗಾಗಿ ರವಿಚಂದ್ರನ್ ಅವರು ಸಿನಿಮಾದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದು ಸಾಕಷ್ಟು ವೇದಿಕೆಯಲ್ಲಿ ಸ್ವತಃ ರವಿಚಂದ್ರನ್ ಅವರೇ ಹೇಳಿದ್ದಾರೆ. ವಿ, ರವಿಚಂದ್ರನ್ ಕರುನಾಡು ಕಂಡ ಕನಸುಗಾರ, ಪಡ್ಡೆ ಹುಡುಗರಿಗೆ ಮಲ್ಲನಾದರೆ ಹೆಂಗಳೆಯರಿಗೆ ರವಿ ಮಾಮ.

ಕರುನಾಡ ಯುವ ಪೀಳಿಗೆಗಳಿಗೆ ಪ್ರೇಮವನ್ನು ಹೀಗೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಂತಹ ಪ್ರೇಮ ಲೋಕದ ದೊರೆ. ಅವರು ಹೆಣ್ಣನ್ನು ವರ್ಣನೆ ಮಾಡುವ ರೀತಿ ಮತ್ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಈ ಕಲೆಗಾರನ ಕನಸಿನಲ್ಲಿ ಬಂದ ಕನಸುಗಳೆಷ್ಟೋ, ಸಾಹಿತ್ಯ ರೂಪದಲ್ಲಿ ಬಂದ ಹಾಡುಗಳೆಷ್ಟೋ. ಅಲ್ಪ ಸ್ವಲ್ಪ ಹಣವನ್ನು ಹೂಡಿ ಸಿನಿಮಾ ಮಾಡುತ್ತಿದ್ದ ಸಂಧರ್ಭದಲ್ಲಿ ಲಕ್ಷ ಲಕ್ಷ ಬಂಡವಾಳ ಹಾಕಿ, ಅದನ್ನು ವಾಪಸ್ ತೆಗೆಯುವುದು ಹೇಗೆ ಎಂಬುದನ್ನು ಹೇಳಕೊಟ್ಟವರು ಈ ಹಳ್ಳಿ ಮೇಷ್ಟ್ರು. ಯುಗ ಯುಗ ಕಳೆದರು ಅವರು ನೀಡಿದಂತಹ ಹಾಡುಗಳನ್ನು ಮಾತ್ರ ಮರೆಯಲು ಸಾಧ್ಯವಿಲ್ಲ. ಆ ರೀತಿಯಾದ ಹಾಡುಗಳನ್ನು ತಮ್ಮ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.

ರವಿಚಂದ್ರನ್ ಅವರು ಅಪ್ಪಟ ಸ್ವಾಭಿಮಾನಿ ವ್ಯಕ್ತಿ, ಯಾರ ಹೆಸರನ್ನು ಹೇಳಿಕೊಂಡು ಸಿನಿಮಾದಲ್ಲಿ ಮುಂದೆ ಬಂದವರಲ್ಲ ಹಾಗೂ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ರವಿಚಂದ್ರನ್ ಅವರದ್ದು. ಇನ್ನು ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ನಿರ್ಮಾಣದಲ್ಲಿ ಮೂಡಿಬಂದಿದ್ದಂತಹ ಹಳ್ಳಿಮೇಷ್ಟ್ರು ಸಿನಿಮಾ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿತ್ತು. ಆ ಸಿನಿಮಾದ ಹಾಡುಗಳೂ ಇಂದಿಗೂ ಕೂಡ ಸೂಪರ್ ಹಿಟ್ ಹಾಡುಗಳಾಗಿವೆ. ಹೀಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದರು ಈ ಸಿನಿಮಾ ಮಾತ್ರ ರವಿಚಂದ್ರನ್ ಅವರು ಮರೆಯಲಾರದ ಕಹಿ ನೆನಪನ್ನು ತಂದು ಕೊಟ್ಟಿದೆ.

ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿಯ ಹೆಸರು ಬಿಂದಿಯಾ. ಈಕೆ ಈ ಸಿನಿಮಾ ಮುಗಿದ ಮೇಲೆ ಮಾಡಿದ್ದಂತಹ ಆರೋಪ ರವಿಚಂದ್ರನ್ ಅವರ ಬದುಕಿನಲ್ಲಿ ಕಪ್ಪು ಚುಕ್ಕಿಯಾಗಿ ಉಳಿದು ಬಿಟ್ಟಿತ್ತು. ನಟಿ ಬಿಂದಿಯಾ ಅವರ ನಿಜವಾದ ಹೆಸರು ಫರ್ಹೀನ್ ಎಂದು. ಮೂಲತಃ ಮುಂಬೈನವರಾದ ಇವರು, ಹಳ್ಳಿಮೇಷ್ಟ್ರು ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಸಾಕಷ್ಟು ತೊಂದರೆ ಹಾಗೂ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಹಿರಿಯ ನಟರು ಬಹಳ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇನ್ನು ಹಳ್ಳಿಮೇಷ್ಟ್ರು ಸಿನಿಮಾದ ಚಿತ್ರೀಕರಣ ಮೈಸೂರಿನ ಹತ್ತಿರ ಇರುವ ಒಂದು ಹಳ್ಳಿಯಲ್ಲಿ ನಡೆದಿದ್ದು, ಎಲ್ಲಾ ವರ್ಗದ ಕಲಾವಿದರುಗಳು ಆ ಗ್ರಾಮದಲ್ಲೇ ಉಳಿದುಕೊಂಡರೇ, ನಟಿ ಬಿಂದಿಯಾ ಮಾತ್ರ ಮೈಸೂರಿನ ಹೊಟೇಲ್ ನಲ್ಲೇ ಉಳಿಯಬೇಕು ಎಂದು ಒತ್ತಾಯಿಸಿದ್ದರಂತೆ.

ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಆಕೆ ಬರುತ್ತಿರಲಿಲ್ಲ. ಸಂಭಾಷಣೆಗಳಿಗೆ ಸರಿಯಾಗಿ ನಟಿಸುತ್ತಿರಲಿಲ್ಲ. ಆದರೂ ಇವೆಲ್ಲವನ್ನು ಸಹಿಸಿಕೊಂಡು ಚಿತ್ರೀಕರಣ ಮಾಡಿದವರು ನಟ, ನಿರ್ಮಾಪಕ ವಿ.ರವಿಚಂದ್ರನ್ ಅವರು. ಆದರೆ ಅದೇನಾಯ್ತೋ ಏನೋ ಸಿನಿಮಾದ ಚಿತ್ರೀಕರಣವೆಲ್ಲ ಮುಗಿದ ಮೇಲೆ, ಇಡೀ ಕರುನಾಡು ಮತ್ತು ಕನ್ನಡ ಚಿತ್ರರಂಗ ಬೆಚ್ಚಿ ಬೀಳುವಂತ ಆರೋಪವೊಂದನ್ನು ನಟಿ ಬಿಂದಿಯಾ ಮಾಡಿ ಬಿಟ್ಟರು. ಅದೇನೆಂದರೆ ಹಳ್ಳಿ ಮೇಷ್ಟ್ರು ಚಿತ್ರದ ಚಿತ್ರೀಕರಣ ನಡೆಯುವಂತಹ ಸಂದರ್ಭದಲ್ಲಿ ನಟ ವಿ ರವಿಚಂದ್ರನ್ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡಲು ಮುಂದಾಗಿದ್ದರು ಎಂದು ಮೊಸಳೆ ಕಣ್ಣೀರು ಹಾಕಿ ಆರೋಪಿಸಿದ್ದರು. ರವಿಚಂದ್ರನ್ ಅವರ ಸಿನಿ ಜೀವನದಲ್ಲಿ ಎಷ್ಟೋ ವಿವಾದಗಳು ನಡೆದು ಹೋಗಿದೆ. ಆದರೆ ಯಾವುದಕ್ಕೂ ಕೂಡ ಪ್ರತಿಕ್ರಿಯಿಸದೆ ಮೌನವಾಗಿರುತ್ತಿದ್ದರು. ಆದರೆ ಈ ಬಾರಿ ಅವರಿಂದ ಸುಮ್ಮನಿರಲು ಸಾಧ್ಯವೇ ಆಗಲಿಲ್ಲ. ಯಾಕೆಂದರೆ ಒಬ್ಬ ಮಹಿಳೆ ತನ್ನ ವ್ಯಕ್ತಿತ್ವದ ಮೇಲೆ ಕಪ್ಪು ಚುಕ್ಕೆ ಇಡಲು ಪ್ರಯತ್ನಿಸಿದನ್ನು ಸಹಿಸಿ ಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ.

ಆದ ಕಾರಣ ನಟಿ ಬಿಂದಿಯಾ ವಿರುದ್ಧ ಕೋರ್ಟ್ ಮೆಟ್ಟಿಲು ಏರುತ್ತಾರೆ. ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ಆದರೆ ರವಿಚಂದ್ರನ್ ಅವರು ಪರಿಹಾರವಾಗಿ ಕೇಳಿದ್ದು ಕೇವಲ ಒಂದು ರೂಪಾಯಿ ಮಾತ್ರ. ರವಿಚಂದ್ರನ್ ಅವರಿಗೆ ಬೇಕಾದದ್ದು ಹಣವಲ್ಲ, ತನ್ನ ಮೇಲೆ ಹೊರೆಸಲಾಗಿದ್ದ ಅಪವಾದದಿಂದ ಮುಕ್ತಿ ಎಂಬುದು. ತುಂಬಾ ದಿನಗಳು ಕೋರ್ಟ್ ನಲ್ಲಿ ಈ ಕೇಸ್ ನಡೆಯುತ್ತದೆ. ನಂತರ ಆಕೆ ಮಾಡಿದ ತಪ್ಪು ಅರಿವಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.

ರವಿಚಂದ್ರನ್ ಅವರ ಮೇಲೆ ಬಂದಿದ್ದ ಅಪವಾದ ಕರಗುತ್ತದೆ. ಆದರೆ ಆ ಘಟನೆ ಮಾತ್ರ ಎಂದೂ ಮರೆಯಲಾರದ ನೆನಪಾಗಿ ಉಳಿದು ಬಿಟ್ಟಿದೆ. ನಂತರ ಆಕೆಯನ್ನು ಚಿತ್ರರಂಗದಿಂದ ಬಹಿಷ್ಕಾರ ಹಾಕಲಾಯಿತು. ಇನ್ನೂ ಮಲ್ಲ ಚಿತ್ರದಲ್ಲಿ ರವಿಚಂದ್ರನ್ ಹಾಗೂ ಪ್ರಿಯಾಂಕ ಉಪೇಂದ್ರ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಮಲ್ಲ ಚಿತ್ರ ರಿಲೀಸ್ ಆದ ನಂತರದಲ್ಲಿ ಅನೇಕ ರೀತಿಯ ಮಾತುಗಳು ಕೇಳಿಬಂದವು. ಇದರಿಂದ ತುಂಬಾ ಡಿಸ್ಟ್ರಬ್ ಆಗಿದ್ದರು ರವಿಚಂದ್ರನ್ ಅವರು. ಆದರೆ ಮಲ್ಲ ಚಿತ್ರ ಸೂಪರ್ ಹಿಟ್ ಆಯ್ತು ಹಾಗೂ ಉಪೇಂದ್ರ ಅವರ ಜೊತೆಗೂ ರವಿಚಂದ್ರನ್ ಅವರು ಒಂದು ಒಳ್ಳೆ ಭಾಂದವ್ಯ ಹೊಂದಿದ್ದರು.

ಇದನ್ನ ಹಾಳು ಮಾಡುವ ಲೇವಲ್ವರೆಗೆ ಈ ಸಿನೆಮಾ ಹೋಗಿತ್ತು ಆದರೆ ಇದೆಲ್ಲವನ್ನು ರವಿಚಂದ್ರನ್ ಅವರು ಉತ್ತಮವಾಗಿ ನಿಭಾಯಿಸುತ್ತಾರೆ. ಅದರ ಪ್ರತಿಫಲ ಎನ್ನುವಂತೆ ಈಗಲೂ ಕೂಡ ಪ್ರಿಯಾಂಕ ಉಪೇಂದ್ರ ಅವರಿಗೆ ಅವರ ಜೊತೆ ಒಂದು ಉತ್ತಮವಾದ ಸ್ನೇಹ ಇದೆ. ಕೇವಲ ಪ್ರಿಯಾಂಕ ಉಪೇಂದ್ರ ಮಾತ್ರ ಅಲ್ಲ ಅವರ ಜೊತೆ ಸಿನೆಮಾಗಳಲ್ಲಿ ನಟಿಸಿದ ಎಲ್ಲಾ ನಾಯಕಿಯರು ಸಹ ರವಿಚಂದ್ರನ್ ಅವರ ಜೊತೆ ಒಳ್ಳೆಯ ಸ್ನೇಹ ಮತ್ತು ಆತ್ಮೀಯತೆಯನ್ನು ಹೊಂದಿದ್ದಾರೆ. ಆದರೆ ಅದರ ಹೊರಗಡೆ ನೋಡುವಂತವರಿಗೆ ಅವರು ಬೇರೆ ರೀತಿಯಲ್ಲೇ ಕಾಣಿಸುತ್ತಾರೆ. ಆದರೆ ರವಿಚಂದ್ರನ್ ಅವರ ವ್ಯಕ್ತಿತ್ವ ತುಂಬಾ ಒಳ್ಳೆಯ ವ್ಯಕ್ತಿತ್ವ. ಸ್ವಾಭಿಮಾನಕ್ಕೆ ಇನ್ನೊಂದು ಹೆಸರು ರವಿಚಂದ್ರನ್ ಅಂದರು ತಪ್ಪಾಗಲ್ಲ. ಅಷ್ಟೊಂದು ಸ್ವಾಭಿಮಾನಿ ಅವರು.

Leave a Comment